Asianet Suvarna News Asianet Suvarna News

ಪ್ರಧಾನಿ ಮೋದಿಗೆ ಪರ್ಯಾಯ ನಾಯಕ ಸಿದ್ದರಾಮಯ್ಯ: ಪುಟ್ಟರಂಗಶೆಟ್ಟಿ

ಪ್ರಧಾನಿ ಮೋದಿಯವರಿಗೆ ಪರ್ಯಾಯ ನಾಯಕರಾಗಿ ಕಾಂಗ್ರೆಸ್‌ ಪಕ್ಷದ ನಾಯಕತ್ವ ವಹಿಸಿ ಜಯಭೇರಿಗೆ ಕಾರಣರಾದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

Siddaramaiah is an alternative leader to PM Narendra Modi Says C Puttarangashetty gvd
Author
First Published Jun 5, 2023, 12:30 AM IST

ಕೊಳ್ಳೇಗಾಲ (ಜೂ.05): ಪ್ರಧಾನಿ ಮೋದಿಯವರಿಗೆ ಪರ್ಯಾಯ ನಾಯಕರಾಗಿ ಕಾಂಗ್ರೆಸ್‌ ಪಕ್ಷದ ನಾಯಕತ್ವ ವಹಿಸಿ ಜಯಭೇರಿಗೆ ಕಾರಣರಾದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಮೋದಿ ಹಾಗೂ ಇತರೆ ಯಾರೆ ಬಂದ್ರು ಈ ಬಾರಿ ಚುನಾವಣೆಯಲ್ಲಿ ಏನು ಪ್ರಯೋಜನ ಆಗಲಿಲ್ಲ. 

ಜನರಿಗೆ ಕೊಟ್ಟ ಮಾತಿಗೆ ತಪ್ಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಹಿಂದೆ ಸರ್ಕಾರ ಸಾಕಷ್ಟು ಒಳ್ಳೆಯ ಕೆಲಸ ಮಾಡಿ ಜನ ಮನ್ನಣೆ ಗಳಿಸಿತ್ತು. ಈ ಬಾರಿಯು ಜನತೆಗೆ ಕೊಟ್ಟಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಸಿದ್ದರಾಮಯ್ಯನವರು ಮಾತಿಗೆ ತಪ್ಪದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.

ಗುಂಡ್ಲುಪೇಟೆಯನ್ನು ಮಾದರಿ ಕ್ಷೇತ್ರ ಮಾಡುವುದೇ ಗುರಿ: ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌

ಬಿ.ರಾಚಯ್ಯನವರ ಕೊಡುಗೆ ಅಪಾರ: ಸೋಲಿಲ್ಲದ ಸರದಾರ ಎಂದೆ ಖ್ಯಾತರಾಗಿದ್ದ ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರ. ಸುವರ್ಣಾವತಿ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟರು. ಭೂ ಹಿಡುವಳಿ ನೀಡಿ ನೂರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟವರು. ಎ.ಆರ್‌. ಕೃಷ್ಣಮೂರ್ತಿಯವರು ತಂದೆಯ ಹಾದಿಯಲ್ಲೆ ಬಂದವರು ಆರು ಬಾರಿ ಸೋತರು. ಸೋಲಿಗೆ ಕೆಲವು ಕಾರಣಗಳು ಇದ್ದವು. ಎಲ್ಲವನ್ನು ಮೆಟ್ಟಿನಿಂತು ಅವರು ಈ ಬಾರಿ ಅಭೂತ ಪೂರ್ವ ಗೆಲುವು ಸಾಧಿಸಿರುವುದು ಖುಷಿಯ ವಿಷಯ. ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಬಡತನವಿಲ್ಲ, ನಮ್ಮ ನಾಯಕರು ಯಾವರೀತಿ ನಡೆಸಿಕೊಳ್ಳುತ್ತರೆ ಎಂಬುದು ಮುಖ್ಯ. 

ಕೊಳ್ಳೇಗಾಲ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಎಲ್ಲೂ ಇಲ್ಲ, ಕಾರ್ಯಕರ್ತರೆ ಮೊದಲ ದೇವರು ನಂತರ ಮತದಾರರು ದೇವರು, ಅತೃಪ್ತಿ ಅಸಮಾಧಾನ ಇದ್ದವರನ್ನು ಕರೆದು ಮಾತನಾಡಿಸಿ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು. ಶಾಸಕರಾಗಿದ್ದ ಎನ್‌. ಮಹೇಶ್‌ ವಿಧಾನಸೌಧದಲ್ಲಿ ಸಿಕ್ಕಿ ಬಸ್‌ ನಿಲ್ದಾಣ ನನ್ನ ಕನಸು ಎಂದರು. ಅದು ಜಯಣ್ಣ ಮಾಡಿದ್ದು ನಿಮ್ಮದ್ಯಾವ ಕನಸು ಎಂದೆ ಎಂದು ಕುಟುಕಿದರು. ಚಲನ ಚಿತ್ರ ನಿರ್ದೇಶಕ ಹಾಗೂ ಚುನಾವಣೆ ಉಸ್ತುವಾರಿ ಎಸ್‌. ನಾರಾಯಣ್‌ ಮಾತನಾಡಿ ಕ್ಷೇತ್ರದಲ್ಲಿ ಎ.ಆರ್‌. ಕೃಷ್ಣಮೂರ್ತಿಯವರ ಗೆಲುವಿನ ನಿಜವಾದ ನಾಯಕರು ಮತದಾರರು, ಎರಡನೇಯವರು ಪಕ್ಷದ ಕಾರ್ಯಕರ್ತರು, ಕೃಷ್ಣಮೂರ್ತಿಯವರು ಜನರ ಮಧ್ಯ ಕ್ಷೇತ್ರದಲ್ಲಿದ್ದ ಸರಳ ಸಜ್ಜನ ವ್ಯಕ್ತಿ ಎಂಬುದನ್ನು ಜನ ಮನಗಂಡು ಮತ ಹಾಕಿ ಅವರನ್ನು ಗೆಲ್ಲಿಸಿದರು ಎಂದರು.

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ನಿಧನ!

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಚುನಾವಣಾ ಉಸ್ತುವಾರಿ ಎಚ್‌.ಸಿ.ಬಸವರಾಜು, ಗುಂಡ್ಲುಪೇಟೆ ಶಾಸಕ ಗಣೇಶ್‌ ಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಸ್‌.ಜಯಣ್ಣ, ಜಿ.ಎನ್‌,ನಂಜುಂಡಸ್ವಾಮಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್‌, ಕೆಎಂಎಫ್‌ ನಿರ್ದೇಶಕ ನಂಜುಂಡಸ್ವಾಮಿ, ಜಿ.ಪಂ. ಮಾಜಿ ಸದಸ್ಯರಾದ ಯೋಗೇಶ್‌, ಸದಾಶಿವಮೂರ್ತಿ,ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಚೇತನ್‌, ಗುತ್ತಿಗೆದಾರ ಓಲೆ ಮಹದೇವ. ಗಾಯಕ ಮಳವಳ್ಳಿ ಮಹದೇವಸ್ವಾಮಿ, ರೈತ ಮುಖಂಡ ಅಣಗಳ್ಳಿ ಬಸವರಾಜು, ಮಂಜುಳ ಕೃಷ್ಣಮೂರ್ತಿ, ತೋಟೇಶ್‌, ಚಂದ್ರು, ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್‌,ಮಾಜಿ ಉಪಾಧ್ಯಕ್ಷೆ ಸುಶೀಲಾ ಶಾಂತರಾಜು ಮುಂತಾದವರಿದ್ದರು.

Follow Us:
Download App:
  • android
  • ios