ಸಿದ್ದು ಪರ ಪ್ರಚಾರ ಚೆನ್ನಾಗಿ ಆಗಿದೆ; ಆದರೆ ಪ್ರಾಮೀಸ್ ಸೋಮಣ್ಣ ಸ್ಪರ್ಧಿಸಿರೋದು ಗೊತ್ತಿರಲಿಲ್ಲ: ಶಿವಣ್ಣ

ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ, ಕಾಂಗ್ರೆಸ್ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದೆ. ತನ್ನ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹ್ಯಾಟ್ರಿಕ್  ಹೀರೋ ಶಿವರಾಜಕುಮಾರ ಸ್ಟಾರ್‌ ಕ್ಯಾಂಪೇನರ್ ಆಗಿ ಚುನಾವಣಾ ಅಖಾಡಕ್ಕಿಳಿಸಿದೆ. ಈ ಕುರಿತು ಮಾಧ್ಯಮಗಳ ಜತೆ ನಟ ಶಿವರಾಜಕುಮಾರ ಮಾತನಾಡಿದರು.

Siddaramaiah campaigned well in Varuna assembly constituency says shivarajkumar at shivamogga rav

ಶಿವಮೊಗ್ಗ (ಮೇ.5): ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ, ಕಾಂಗ್ರೆಸ್ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದೆ. ತನ್ನ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹ್ಯಾಟ್ರಿಕ್  ಹೀರೋ ಶಿವರಾಜಕುಮಾರ ಸ್ಟಾರ್‌ ಕ್ಯಾಂಪೇನರ್ ಆಗಿ ಚುನಾವಣಾ ಅಖಾಡಕ್ಕಿಳಿಸಿದೆ. ಈ ಕುರಿತು ಮಾಧ್ಯಮಗಳ ಜತೆ ನಟ ಶಿವರಾಜಕುಮಾರ ಮಾತನಾಡಿದರು.

ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಪ್ರಚಾರ ಚೆನ್ನಾಗಿ ಆಗಿದೆ. ಇವತ್ತು ಮುಂಡುಗೋಡು, ಶಿರಸಿಯಲ್ಲಿ ಪ್ರಚಾರ ಮಾಡ್ತೀನಿ ಎಂದು ಹೇಳಿದರು.

ಸೋಮಣ್ಣ ನಮಗೆ ಆಪ್ತರು. ಪ್ರತಾಪ್ ಸಿಂಹ ಸ್ನೇಹಿತರು. ಅವರ ಬಗ್ಗೆ ಒಳ್ಳೆಯ ಗೌರವ ಇದೆ. ಅವರೇನು ಹೇಳಿದ್ದಾರೆ ಗೊತ್ತಿಲ್ಲ. ಪ್ರಾಮೀಸ್ ಹೇಳಬೇಕಂದ್ರೆ ಸೋಮಣ್ಣ ಅಲ್ಲಿ ಸ್ಪರ್ಧೆ ಮಾಡಿದ್ದಾರೆ ಅಂತಾ ನನಗೆ ಗೊತ್ತಿರಲಿಲ್ಲ ಎಂದರು.

ಸಾಗ​ರ​ದಲ್ಲಿ ಕಾಂಗ್ರೆಸ್‌ ಪರ ನಟ ಶಿವಣ್ಣ ಮತ​ಯಾ​ಚ​ನೆ: ನೆಚ್ಚಿನ ನಟನ ನೋಡಲು ಜನ​ಸಾ​ಗರ

ನಾನೇನು ಚಿಕ್ಕ ಹುಡುಗನಾ? ನನಗೂ ಈಗ 61 ವರ್ಷ ಆಯ್ತು. ನನಗೆ ಯಾರು ಎನಿಮಿ‌ ಇಲ್ಲ.‌ ನನಗೆ ಎಲ್ಲರೂ ಸ್ನೇಹಿತರೆ. ರಾಹುಲ್ ಗಾಂಧಿ(Rahul gandhi) ಮೀಟ್ ಮಾಡಬೇಕು ಅಂತಾ ಮೊದಲಿನಿಂದ ಆಸೆ ಇತ್ತು.‌ ಮೊನ್ನೆ ಮೀಟ್ ಮಾಡಿದೆ. ರಾಹುಲ್ ಗಾಂಧಿ ಸ್ಮಾರ್ಟ್ ಆಗಿ ಇದ್ದಾರೆ ಎಂದು ಹೊಗಳಿದರು.

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಯಾರೂ ಪ್ರಚಾರಕ್ಕೆ ಕರೆದಿರಲಿಲ್ಲ. ಕರೆದಿದ್ದರೆ ಅವರ ಪರ ಪ್ರಚಾರಕ್ಕೂ ಹೋಗ್ತಿದ್ದೆ. ಮೊದಲು ಸಿನಿಮಾದಲ್ಲಿ ಬಿಜಿ ಇದ್ದೆ.‌ ಈಗ ಪ್ರಚಾರದಲ್ಲಿ ಬಿಜಿ ಆಗಿದ್ದೇನೆ. ನನಗೆ ರಾಹುಲ್ ಗಾಂಧಿ ಪಿಟ್ನೆಸ್ ಇಷ್ಟ ಆಯ್ತು.‌ ಹೀಗಾಗಿ ಅವರ ಬಗ್ಗೆ ಇಂಪ್ರೆಸ್ ಆಯ್ತು ಎಂದರು.

ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅದು ಯಾವುದೂ ಬರಲ್ಲ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ. ಅಪ್ಪು ಜೀವಂತವಾಗಿ ಇದ್ದಾಗಲೂ ಕೆಲಸ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆ. ಆದರೆ ಅವರು ಯಾರೂ ಹೇಳಿಕೊಂಡು ಓಡಾಡಲ್ಲ. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ ಎಂದರು.

ಸೊರಬ: ಕಾಂಗ್ರೆಸ್‌ನ ಮಧು ಬಂಗಾರಪ್ಪ ಪರ ಇಂದು ಶಿವರಾಜಕುಮಾರ್‌ ಪ್ರಚಾರ
 
ಶಿವಣ್ಣಂಗೆ ಮಾತನಾಡಕ್ಕೆ ಆಗಲ್ಲ ಅಂತಾಲ್ಲ, ನನಗೂ ಮಾತನಾಡೋಕೆ ಬರುತ್ತೆ. ಬಿಜೆಪಿ ಪರವಾಗಿ ಸುದೀಪ್ ಅವರು ಪ್ರಚಾರಕ್ಕೆ ಹೋಗ್ತಿದ್ದಾರೆ. ಹಾಗಂತ ನಾಳೆ ನಾನು ಸುದೀಪ್ ಅವರನ್ನು ಮಾತನಾಡಿಸಲು ಆಗಲ್ವಾ. ನಾನು ಸುದೀಪ್ ಕ್ಲೋಸ್ ಫ್ರೆಂಡ್ಸ್ ಎಂದರು.

Latest Videos
Follow Us:
Download App:
  • android
  • ios