ಸಾಗ​ರ​ದಲ್ಲಿ ಕಾಂಗ್ರೆಸ್‌ ಪರ ನಟ ಶಿವಣ್ಣ ಮತ​ಯಾ​ಚ​ನೆ: ನೆಚ್ಚಿನ ನಟನ ನೋಡಲು ಜನ​ಸಾ​ಗರ

ಖ್ಯಾತ ಚಲನಚಿತ್ರ ನಟ ಡಾ.ಶಿವರಾಜಕುಮಾರ್‌ ಸೋಮವಾರ ರಾತ್ರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಪಟ್ಟಣದ ದುರ್ಗಾಂಬಾ ವೃತ್ತದಿಂದ ಆರಂಭಗೊಂಡ ರೋಡ್‌ ಶೋ ಸಾಗರ್‌ ಹೋಟೆಲ್‌ ವೃತ್ತದಲ್ಲಿ ಮುಕ್ತಾಯಗೊಂಡಿತು. 

Karnataka Election 2023 Shivarajkumar Election Campaign at Shivamogga District gvd

ಸಾಗರ (ಮೇ.03): ಖ್ಯಾತ ಚಲನಚಿತ್ರ ನಟ ಡಾ.ಶಿವರಾಜಕುಮಾರ್‌ ಸೋಮವಾರ ರಾತ್ರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಪಟ್ಟಣದ ದುರ್ಗಾಂಬಾ ವೃತ್ತದಿಂದ ಆರಂಭಗೊಂಡ ರೋಡ್‌ ಶೋ ಸಾಗರ್‌ ಹೋಟೆಲ್‌ ವೃತ್ತದಲ್ಲಿ ಮುಕ್ತಾಯಗೊಂಡಿತು. ತಮ್ಮ ನೆಚ್ಚಿನ ನಟನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಿವರಾಜಕುಮಾರ್‌ ಸಜ್ಜನ ರಾಜಕಾರಣಿ ಆಗಿರುವ ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸುವ ಮೂಲಕ ಒಳ್ಳೆಯತನಕ್ಕೆ ಬೆಂಬಲವಾಗಿ ನಿಲ್ಲಬೇಕು. ಸಾಗರದ ಸಮಗ್ರ ಪ್ರಗತಿಗೆ ಬೇಳೂರು ಗೆಲವು ಅತ್ಯವಶ್ಯಕ ಎಂದು ಹೇಳಿದರು. 

ಮಾಜಿ ಶಾಸಕ ಹಾಗೂ ಸೊರಬ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದ್ದು, ಬೇಳೂರು ಗೆಲುವು ಖಚಿತ. ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸಿದರೆ ಕಾಗೋಡು ತಿಮ್ಮಪ್ಪ, ಎಸ್‌. ಬಂಗಾರಪ್ಪ ಅವರನ್ನು ಗೆಲ್ಲಿಸಿದಂತೆ ಎಂದು ಹೇಳಿದರು. ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಮತ್ತು ದೌರ್ಜನ್ಯರಹಿತ ರಾಜಕಾರಣಕ್ಕೆ ನನ್ನನ್ನು ಬೆಂಬಲಿಸಿ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನದೇ ಆಲೋಚನೆಯಲ್ಲಿ ಕೆಲಸ ಮಾಡಿ, ರಾಜ್ಯದಲ್ಲಿಯೆ ಸಾಗರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಗೀತಾ ಶಿವರಾಜ್‌ಕುಮಾರ್‌, ಐ.ಎನ್‌.ಸುರೇಶಬಾಬು, ಅನಿತಾಕುಮಾರಿ, ಮಧು ಮಾಲತಿ, ಕಲಗೋಡು ರತ್ನಾಕರ್‌, ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಹಾಜರಿದ್ದರು.

ಕಾಂಗ್ರೆಸ್‌ ಗೆದ್ರೆ ಬಿಜೆಪಿ ಜಾರಿ ಮಾಡಿದ ಕಾಯ್ದೆಗಳು ರದ್ದು: ಕಾಂಗ್ರೆಸ್‌ ಪ್ರಣಾಳಿಕೆ

ಬೇಳೂರು ಪರ ಶಿವರಾಜ್‌ಕುಮಾರ್‌ ರೋಡ್‌ ಶೋ: ಆನಂದಪುರ ಬಸ್‌ ನಿಲ್ದಾಣದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರ ಪರವಾಗಿ ಮತಯಾಚಿಸಿದ ನಟ ಶಿವರಾಜ್‌ಕುಮಾರ್‌, ಹೃದಯ ಹೃದಯಗಳ ಸಂಬಂಧ ನಡುವೆ ಪ್ರೀತಿ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಕ್ಷೇತ್ರದ ಜನತೆಗೂ ಹಾಗೂ ಗೋಪಾಲಕೃಷ್ಣ ಬೇಳೂರು ಅವರಿಗೂ ಪ್ರೀತಿಯ ವಿಶ್ವಾಸ ಸದಾ ಹೀಗೇ ಇರಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮತಯಾಚಿಸಿದರು.

ಅನಂತರ ಅಭಿಮಾನಿಗಾಗಿ ಹಾಡು ಹೇಳುವುದರ ಮೂಲಕ ಎಲ್ಲರನ್ನೂ ರಂಜಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಮಧು ಬಂಗಾರಪ್ಪ, ಅನಿತಾ ಕುಮಾರಿ, ಕಲಗೋಡು ರತ್ನಾಕರ್‌, ಹಾಗೂ ಅನೇಕರು ರೋಡ್‌ ಶೋನಲ್ಲಿ ಭಾಗವಹಿಸಿದ್ದರು. ಯಡೇಹಳ್ಳಿಯ ಮಹಾಗಣಪತಿ ದೇವಸ್ಥಾನದಿಂದ ಆನಂದಪುರದ ಬಸ್‌ ನಿಲ್ದಾಣದವರೆಗೆ ಬೈಕ್‌ ರಾರ‍ಯಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಯಡಿಯೂರಪ್ಪ ಕಾಲಿಟ್ಟ ಕಡೆ ಮಳೆ: ಸಚಿವ ಸೋಮಣ್ಣ ಬಣ್ಣನೆ

ಮತ​ದಾರ ಕಾಂಗ್ರೆಸ್‌ಗೆ ಬೆಂಬಲ ಖಚಿ​ತ: ನರ ಸಂಕಷ್ಟಆಲಿಸುವ ಸರ್ಕಾರದ ಅಗತ್ಯವನ್ನು ಮನಗಂಡಿರುವ ಮತದಾರ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದು ಖಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ತಮ್ಮ ಮನೆಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡ ಆಯಿಷಾ ಮಸೀದಿ ಅಧ್ಯಕ್ಷ ಹಾಗೂ ಅಂಜುಮನ್‌ ಸಮಿತಿ ಸಹ ಕಾರ್ಯದರ್ಶಿ ಅನೀಸ್‌ ಹಾಗೂ ಅವರ ಬೆಂಬಲಿಗರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯೂ ಸೇರಿದಂತೆ ಹತ್ತಾರು ಜ್ವಲಂತ ಸಮಸ್ಯೆಗಳು ಇಂದಿಗೂ ಜೀವಂತವಾಗಿದೆ. ಪರಿಹರಿಸುವ ಮಾತು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಶಾಸಕರು ಈಗ ಮತ್ತೆ ಮತ ಕೇಳುವುದಕ್ಕೆ ಬಂದಿದ್ದಾರೆಯೇ ಹೊರತು, ಸಮಸ್ಯೆ ಪರಿಹರಿಸುವುದಕ್ಕೆ ಅಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios