Karnataka election 2023: ಬಿವೈ ವಿಜಯೇಂದ್ರ ಗತ್ತಿನಿಂದ ಗೆಲ್ತಾರೆ: ಕಿಚ್ಚ ಸುದೀಪ್

ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ ಹಾಗೂ ಶಿರಾಳಕೊಪ್ಪಗಳಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ನಟ ಸುದೀಪ್‌ ಭರ್ಜರಿ ರೋಡ್‌ ಶೋ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ನಟಿ ತಾರಾ ಕೂಡ ರೋಡ್‌ ಶೋಗೆ ಸಾಥ್‌ ನೀಡಿದರು.

Shikaripur assembly constituency Kiccha Sudeep road show for Vijayendra shivamogga rav

ಶಿಕಾರಿಪುರ (ಮೇ.9) : ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ ಹಾಗೂ ಶಿರಾಳಕೊಪ್ಪಗಳಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ನಟ ಸುದೀಪ್‌ ಭರ್ಜರಿ ರೋಡ್‌ ಶೋ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ನಟಿ ತಾರಾ ಕೂಡ ರೋಡ್‌ ಶೋಗೆ ಸಾಥ್‌ ನೀಡಿದರು.

ಶಿಕಾರಿಪುರ(Shikaripur constituency)ದಲ್ಲಿ ಸುಮಾರು 2 ಗಂಟೆ ಕಾಲ ರೋಡ್‌ ಶೋ(Kichcha sudeep roadshow) ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನ ವಿಜಯೇಂದ್ರ ಮತ್ತು ಸುದೀಪ್‌ ಮೇಲೆ ಹೂವು ಎರಚಿ ತಮ್ಮ ಅಭಿಮಾನ ಮೆರೆದರು. ಇದೇ ವೇಳೆ, ಕಿಚ್ಚ ಸುದೀಪ್‌ ಅವರು, ತಮ್ಮ ನಟನೆಯ ‘ಮದಕರಿ’ ಸಿನಿಮಾದ ‘ದೇವ್ರು ಎಂಥೆಂತವರನ್ನೋ ಸೃಷ್ಟಿಮಾಡ್ತಾನೆ. ಆದ್ರೆ ಖುಷಿಯಲ್ಲಿದ್ದಾಗ ಕಿಚ್ಚ ಸುದೀಪ್‌ ತರದವರನ್ನು ಸೃಷ್ಟಿಮಾಡ್ತಾನೆ’ಎಂಬ ಡೈಲಾಗ್‌ ಹೇಳಿ ರಂಜಿಸಿದರು.

ಸುದೀಪ್‌ ಮೂರು ತಾಸಿನ ನಾಯಕ: ಸತೀಶ್‌ ಜಾರಕಿಹೊಳಿ ವ್ಯಂಗ್ಯ

ವಿಜ​ಯೇಂದ್ರ ಗತ್ತಿ​ನಿಂದ ಗೆಲ್ತಾ​ರೆ:

ಈ ವೇಳೆ ಮಾತನಾಡಿ, ವಿಜಯೇಂದ್ರ(BY Vijayendra) ಅವರು ಈವರೆಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬೇರೆಯವರನ್ನು ಗೆಲ್ಲಿಸಿದ್ದಾರೆ. ಆದರೆ, ಇವತ್ತು ಮೊದಲ ಬಾರಿ ಪರೀಕ್ಷೆ ಬರೆಯೋ ವಿದ್ಯಾರ್ಥಿ ರೀತಿ ಆಗಿದ್ದಾರೆ. ಇದು ಅವರ ಮೊದಲ ಚುನಾವಣೆ. ವಿಜಯೇಂದ್ರ ಅವರ ಗೆಲುವು ಶತಸಿದ್ಧ. ಇದರಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಾಸವಾಗುವುದಿಲ್ಲ. ವ್ಯತ್ಯಾಸವಾಗಲು ಇಲ್ಲಿಯ ಜನ ಬಿಡುವುದಿಲ್ಲ. ಒಂದು ಓಟಿನಿಂದ ಗೆದ್ದರೂ ಗೆಲುವೇ, ಸಾವಿರ ಓಟಿನಿಂದ ಗೆದ್ದರೂ ಗೆಲುವೇ. ಗೆಲ್ಲುವುದಷ್ಟೇ ಮುಖ್ಯವಲ್ಲ. ಗತ್ತಿನಿಂದ ಗೆಲ್ಲಬೇಕು. ವಿಜಯೇಂದ್ರ ಹಾಗೆಯೇ ಗೆಲ್ಲುತ್ತಾರೆ ಎಂದರು.

ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

ಬಳಿಕ, ಶಿರಾಳಕೊಪ್ಪದಲ್ಲಿ ಮಾತನಾಡಿ, ಯಡಿಯೂರಪ್ಪ(BS Yadiyurappa) ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟಿರುವುದು ಅಧಿಕಾರವಲ್ಲ, ಬದಲಾಗಿ ಜವಾಬ್ದಾರಿ. ಇಲ್ಲಿಯವರೆಗಿನ 50 ವಷÜರ್‍ಗಳ ರಾಜಕೀಯ ಒಂದು ಲೆಕ್ಕ. ಇನ್ನು ಮುಂದಿನದು ಬೇರೆ ಲೆಕ್ಕ. ವಿಜಯೇಂದ್ರ ನನಗೆ ಹಳೇ ಪರಿಚಯ. ಅವರನ್ನು ಚುನಾವಣೆಯಲ್ಲಿ ಎಲ್ಲರೂ ಸೇರಿ ಗೆಲ್ಲಿಸಬೇಕಿದೆ. ಇದು ನಿಮ್ಮ ಪ್ರೀತಿಯ ಕಿಚ್ಚನ ಆಸೆಯೂ ಆಗಿದೆ ಎಂದರು.

Latest Videos
Follow Us:
Download App:
  • android
  • ios