Karnatala election 2023: ಸುದೀಪ್ ಮೂರು ತಾಸಿನ ನಾಯಕ: ಸತೀಶ್ ಜಾರಕಿಹೊಳಿ ವ್ಯಂಗ್ಯ
ಚಿತ್ರನಟ ಸುದೀಪ್ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಸಿದ್ದ ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ನಟ ಸುದೀಪ್ ಮೂರು ತಾಸಿನ ನಾಯಕರು ಮಾತ್ರ ಎಂದು ಸತೀಶ್ ಜಾರಕಿ ಹೊಳಿ ವ್ಯಂಗ್ಯ ಮಾಡಿದ್ದಾರೆ.
ಗುಂಡ್ಲುಪೇಟೆ (ಮೇ.9) : ಚಿತ್ರನಟ ಸುದೀಪ್ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಸಿದ್ದ ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ನಟ ಸುದೀಪ್ ಮೂರು ತಾಸಿನ ನಾಯಕರು ಮಾತ್ರ ಎಂದು ಸತೀಶ್ ಜಾರಕಿ ಹೊಳಿ ವ್ಯಂಗ್ಯ ಮಾಡಿದ್ದಾರೆ.
ನೆಹರು ಪಾರ್ಕ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ(Congress candidate) ಎಚ್.ಎಂ.ಗಣೇಶ್‌ಪ್ರಸಾದ್ (HM Ganesh prasad)ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ದುಡ್ಡುಕೊಟ್ಟು ಟಿಕೆಟ್ ತಗೊಂಡು ಸುದೀಪ್ (Kichcha sudeep)ಅವರನ್ನು ನೋಡ್ತಿದ್ರೀ ಆದರೀಗ ಪುಕ್ಕಟೆಯಾಗಿ ಬಂದಿದ್ರು ಎಂದರು. ಜನರ ಜೊತೆ ನಿರಂತರ ಸಂಪರ್ಕ ಹಾಗೂ ಸೇವೆಯನ್ನು ಮಳೆ, ಗಾಳಿ, ಚಳಿ ಎನ್ನದೆ ಮಾಡುತ್ತಿದ್ದೇವೆ. ನಟ ಬಂದು ಕಣ್ಣೀರು ಹಾಕಿದ್ರೆ ಜನರಿಗೆ ಪರಿಹಾರ ಸಿಗಲ್ಲ ಎಂದರು.
ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್ ಜಾರಕಿಹೊಳಿ
ಮಹದೇವಪ್ರಸಾದ್ ಹಾಗೂ ಗೀತಾಮಹದೇವಪ್ರಸಾದ್ ಗೆಲ್ಲಿಸಿದ್ರಿ. ಶಾಸಕ, ಸಚಿವರನ್ನಾಗಿ ಮಾಡಿದ್ರಿ. ಈಗ ಗಣೇಶ್‌ಪ್ರಸಾದ್ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು, ಗಣೇಶ್‌ಪ್ರಸಾದ್ ಆಯ್ಕೆಯಾಗಬೇಕು. ಆ ಕೆಲಸವನ್ನು ಕಾರ್ಯಕರ್ತರು ಮಾಡುವ ಮೂಲಕ ಕಾಂಗ್ರೆಸ್‌ಗೆ ಶಕ್ತಿ ತುಂಬಿ ಎಂದರು.
ಗಣೇಶ್‌ಪ್ರಸಾದ್ ಜನಸೇವೆಗೆ ಹುಟ್ಟಿದ್ದಾನೆ: ಡಾ. ಗೀತಾ
ಗುಂಡ್ಲುಪೇಟೆ: ಚಿನ್ನದಂತ ಮಗ ಗಣೇಶ್‌ಪ್ರಸಾದ್ ಜನಸೇವೆಗೆ ಅಂತ ಹುಟ್ಟಿದ್ದಾನೆ ಎಂದು ಹೇಳುವ ಮೂಲಕ ನನ್ನ ಮಗನಿಗೆ ಮತ ನೀಡಬೇಕು ಎಂದು ಮಾಜಿ ಸಚಿವೆ ಡಾ.ಗೀತಾಮಹದೇವಪ್ರಸಾದ್ ಸಭೆಯಲ್ಲಿ ಸೆರಗೊಡ್ಡಿ ಮತಭಿಕ್ಷೆ ಬೇಡಿದರು. ಮಹದೇವಪ್ರಸಾದ್ ನಿಧನದ ಬಳಿಕ ಗಣೇಶ್ ಪ್ರಸಾದ್ ಒಂದು ಮಾತು ನನಗೆ ಹೇಳಿದ. ಇಷ್ಟೆಲ್ಲ ಆಸ್ತಿ, ಅಂತಸ್ತು ಇದ್ರು ಅಪ್ಪನ ಉಳಿಸಿಕೊಳ್ಳಲು ಆಗಲಿಲ್ಲ ಜೀವನಕ್ಕೆ ಅಗತ್ಯವಿದ್ದಷ್ಟುಹಣ ಇಟ್ಕೊಂಡು ಸಂಪಾದನೆಯಲ್ಲಿ ಉಳಿದ ಹಣ, ಜನ ಸೇವೆಗೆ ಇಡೋಣ ಎಂದು ಆರು ವರ್ಷದ ಹಳೆಯ ಘಟನೆಯನ್ನು ಹೇಳಿದರು.
ಮುನಿರತ್ನ ಪರ ಬ್ಯಾಟ್ ಬೀಸಿದ ಕಿಚ್ಚ ಸುದೀಪ: ಮುನಿ ಗೆದ್ರೆ ನಾನೇ ಗೆದ್ದಂಗೆ!
ಕಳೆದ ಚುನಾವಣೆಯಲ್ಲಿ ನಾನು ಸೋತರೂ ಗಣೇಶ್‌ಪ್ರಸಾದ್ ನಿರಂತರ ಜನಸಂಪರ್ಕದಲ್ಲಿದ್ದಾನೆ. ಕಷ್ಟಅಂತ ಮನೆಗೆ ಬಂದವರಿಗೆ ಇಲ್ಲ ಎಂದು ಹೇಳಿಲ್ಲ. ಕೈಲಾದ ಸಹಾಯ ಮಾಡಿದ್ದಾನೆ. ಕೋವಿಡ್
ಸಮಯದಲ್ಲೂ ಜನರಿಗೆ ಸ್ಪಂದಿಸಿದ್ದಾನೆ ಎಂದರು.