ಎಲೆಕ್ಷನ್‌ವರೆಗೂ ನಾ ಸಿಎಂ, ನೀ ಸಿಎಂ ಎಂಬ ಹೇಳಿಕೆಗಳು ಸಾಮಾನ್ಯ: ಜಾರಕಿಹೊಳಿ

ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಅಂತಿಮವಾಗಿ 113 ಮ್ಯಾಜಿಕ್‌ ಸಂಖ್ಯೆಯ ಶಾಸಕರು ನಡೆಸುವ ಚರ್ಚೆ ವೇಳೆ ಮುಖ್ಯಮಂತ್ರಿ ಯಾರೆಂಬುದು ಸ್ಪಷ್ಟವಾಗುತ್ತದೆ. ಅಲ್ಲಿಯವರೆಗೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಹೇಳಿಕೆಗಳಿಗೆ ಕೊನೆ ಇರುವುದಿಲ್ಲ ಎಂದು ಹೇಳಿದ ಜಾರಕಿಹೊಳಿ

Satish Jarkiholi React on Congress CM Seat in Karnataka grg

ವಿಜಯಪುರ(ಜು.23):  ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಸದ್ಯಕ್ಕೆ ನಾನು ಮುಖ್ಯಮಂತ್ರಿ ಆಗುವ ಆಸೆಯನ್ನೂ ಹೊಂದಿಲ್ಲ. ಹಾಗಾಗಿ ನಾನು ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಆಗುವವರೆಗೂ ನಾನು ಸಿಎಂ, ನೀನು ಸಿಎಂ, ಆ ಸಮಾಜ, ಈ ಸಮಾಜ ಎಂಬಿತ್ಯಾದಿ ಚರ್ಚೆ, ಹೇಳಿಕೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅಂತಿಮವಾಗಿ ಚುನಾವಣೆಯಲ್ಲಿ ಆಯ್ಕೆಯಾದ ಬಹುಸಂಖ್ಯಾತ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಭಿಲಾಷೆ ವ್ಯಕ್ತಪಡಿಸಿರುವ ಸಂಬಂಧ ಶುಕ್ರವಾರ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಅಂತಿಮವಾಗಿ 113 ಮ್ಯಾಜಿಕ್‌ ಸಂಖ್ಯೆಯ ಶಾಸಕರು ನಡೆಸುವ ಚರ್ಚೆ ವೇಳೆ ಮುಖ್ಯಮಂತ್ರಿ ಯಾರೆಂಬುದು ಸ್ಪಷ್ಟವಾಗುತ್ತದೆ. ಅಲ್ಲಿಯವರೆಗೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಹೇಳಿಕೆಗಳಿಗೆ ಕೊನೆ ಇರುವುದಿಲ್ಲ ಎಂದು ಹೇಳಿದರು.

ಡಿಕೆಶಿ-ಸಿದ್ದು ಗುದ್ದಾಟದ ಮಧ್ಯೆ ಕಾಂಗ್ರೆಸ್‌ನಿಂದ ಸಿಎಂ ರೇಸ್‌ಗೆ ಲಿಂಗಾಯತ ಪ್ರಭಾವಿ ನಾಯಕ ಎಂಟ್ರಿ

ಚುನಾವಣೆ ಆಗುವವರೆಗೂ ನಾನು ಸಿಎಂ, ನೀನು ಸಿಎಂ, ಆ ಸಮಾಜ, ಈ ಸಮಾಜ ಎಂಬಿತ್ಯಾದಿ ಚರ್ಚೆ, ಹೇಳಿಕೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅಂತಿಮವಾಗಿ ಚುನಾವಣೆಯಲ್ಲಿ ಆಯ್ಕೆಯಾದ ಬಹುಸಂಖ್ಯಾತ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ನಾನು ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿಲ್ಲ. ಕಾಂಗ್ರೆಸ್‌ನಲ್ಲಿ ಬಹಳಷ್ಟುಘಟಾನುಘಟಿಗಳು ಇದ್ದಾರೆ. ಅವರ ಸರದಿ ಮುಗಿದ ಮೇಲೆ ನೋಡೋಣ ಎಂದು ಜಾರಕಿಹೊಳಿ ಹೇಳಿದರು.
 

Latest Videos
Follow Us:
Download App:
  • android
  • ios