ಸಾರಿಗೆ ನೌಕರರ ವೇತನ ಏರಿಕೆಗೆ ಬದ್ಧ: ಶ್ರೀರಾಮುಲು ಸಿಎಂ ಬಳಿ ಚರ್ಚೆ ಬಳಿಕ ನಿರ್ಧಾರ ಕಷ್ಟವಿದ್ದರೂ ವೇತನ ಹೆಚ್ಚಳಕ್ಕೆ ಚಿಂತನೆ
ವಿಧಾನ ಪರಿಷತ್ತು (ಸೆ.17) : ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಂಬಳ ಏರಿಕೆಗೆ ಮುಂದಾದ ಸರ್ಕಾರ
ಶುಕ್ರವಾರ ಬಿಜೆಪಿ(BJP) ಸದಸ್ಯ ಬಿ.ಎಸ್.ಅರುಣ್(B.S.Arun) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನಿಗಮಗಳ ನೌಕರರ ವೇತನ(Salary) ಪರಿಷ್ಕರಣೆ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದರು.
ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ, 2016 ರ ನಂತರ ಪರಿಷ್ಕರಣೆ ಆಗಿಲ್ಲ, 2020-21 ರಲ್ಲಿ 2 ಸಾವಿರಕ್ಕೂ ಅಧಿಕ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆಯೇ ಪ್ರಮುಖ ಬೇಡಿಕೆಯನ್ನಾಗಿಟ್ಟುಕೊಂಡು ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕ ಸಮಸ್ಯೆಯುಂಟಾಗಿತ್ತು. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಿಲ್ಲ. ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ರು. ಡೀಸೆಲ್‌ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದ್ದರೂ ಮುಖ್ಯಮಂತ್ರಿಯವರು ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟುಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ ಎಂದು ತಿಳಿಸಿದರು.
KSRTC ಆಸ್ತಿ ಅಡ ಇಟ್ಟು 540 ಕೋಟಿ ಸಾಲ: ಸಚಿವ ಶ್ರೀರಾಮುಲು
ಸಾರಿಗೆ ಇಲಾಖೆಯ ಪುನಶ್ಚೇತನಕ್ಕಾಗಿ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಏಕ ಸದಸ್ಯ ಸಮಿತಿಯು ಈಗಾಗಲೇ ವರದಿ ಸಲ್ಲಿಸಿದ್ದು ವರದಿ ಪರಿಶೀಲನೆಯಲ್ಲಿದೆ. ಶೀಘ್ರವೇ ವೇತನ ಪರಿಷ್ಕರಣೆಗೆ ಇಲಾಖೆ ಕ್ರಮವಹಿಸಲಿದೆ ಎಂದರು.
