*   ದಕ್ಷಿಣ ಕರ್ನಾಟಕದ ಕೆಎಸ್‌ಆರ್‌ಟಿಸಿ ಯಾವುದೇ ವಾಣಿಜ್ಯ ಸಂಕೀರ್ಣವನ್ನು ಅಡಮಾನ ಇಟ್ಟಿಲ್ಲ*   ಭವಿಷ್ಯ ನಿಧಿಗಾಗಿ ಸಾಲ ಮಾಡಬೇಕಾಗಿದೆ*   ವಾಣಿಜ್ಯದ ದೃಷ್ಟಿಯಿಂದ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿಲ್ಲ 

ಬೆಂಗಳೂರು(ಮಾ.12):  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮೂರು ನಿಗಮಗಳ ವಾಣಿಜ್ಯ ಸಂಕೀರ್ಣಗಳನ್ನು ಅಡಮಾನ ಇರಿಸಿ ಸಾಲ(Loan) ಪಡೆದು ಸಾರಿಗೆ ನೌಕರರ ಭವಿಷ್ಯ ನಿಧಿಗೆ ಬಳಸಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ತಿಳಿಸಿದರು. 

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌(Congress) ಸದಸ್ಯ ಯು.ಬಿ. ವೆಂಕಟೇಶ್‌ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕರ್ನಾಟಕದ(Karnataka) ಕೆಎಸ್‌ಆರ್‌ಟಿಸಿ ಯಾವುದೇ ವಾಣಿಜ್ಯ ಸಂಕೀರ್ಣವನ್ನು ಅಡಮಾನ ಇಟ್ಟಿಲ್ಲ. ಆದರೆ ಬಿಎಂಟಿಸಿಯಿಂದ(BMTC0 ಬೆಂಗಳೂರಿನ ಶಾಂತಿನಗರದ ವಾಣಿಜ್ಯ ಸಂಕೀರ್ಣದ ಕಟ್ಟಡವನ್ನು ಕೆನರಾ ಬ್ಯಾಂಕ್‌ಗೆ ಅಡಮಾನ ಇಟ್ಟಿದ್ದು 390 ಕೋಟಿ ರು.(ಶೇ.8.6 ಬಡ್ಡಿ)ಸಾಲ ಪಡೆದಿದೆ. ಈ ಹಣವನ್ನು ಭವಿಷ್ಯ ನಿಧಿಗೆ ಬಳಸಿಕೊಳ್ಳಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು 2019-20ರಲ್ಲಿ 16.39 ಎಕರೆ ಜಮೀನು(Land) ಅಡಮಾನವಿಟ್ಟು(Mortgage) 100 ಕೋಟಿ ರು.(ಶೇ.8 ಬಡ್ಡಿ)ಸಾಲ ಪಡೆದಿದ್ದೇವೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಾಣಿಜ್ಯ ಸಂಕೀರ್ಣ ಅಡಮಾನದಿಂದ 50 ಕೋಟಿ ರು.ಗಳನ್ನು ಶೇ.7.20 ಬಡ್ಡಿ ದರದಲ್ಲಿ ಸಾಲ ಪಡೆದಿದ್ದು ಭವಿಷ್ಯ ನಿಧಿಗೆ ಬಳಸಲು ವಿನಿಯೋಗ ಮಾಡಲಾಗಿದೆ ಎಂದರು.

KSRTC ಗುಜರಿ ಬಸ್‌ ಈಗ ಸರ್ಕಾರಿ ಶಾಲೆಯ ಸ್ಮಾರ್ಟ್‌ ಕ್ಲಾಸ್‌..!

ರಾಜ್ಯ ಸರ್ಕಾರ(Government of Karnataka) ಕೋವಿಡ್‌19(Covid-19) ಸಂಕಷ್ಟದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದ್ದಾಗ ಸುಮಾರು 2958 ಕೋಟಿ ರು.ಗಳನ್ನು ನೀಡಿದ್ದರಿಂದ ಸಾರಿಗೆ ಸಿಬ್ಬಂದಿಗೆ ನಿಗದಿತ ಅವಧಿಯಲ್ಲಿ ವೇತನ, ನಿರ್ವಹಣೆಗೆ ಸಹಕಾರಿಯಾಯಿತು. ಆದರೂ ಭವಿಷ್ಯ ನಿಧಿಗಾಗಿ ಸಾಲ ಮಾಡಬೇಕಾಗಿದೆ. ವಾಣಿಜ್ಯದ ದೃಷ್ಟಿಯಿಂದ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿಲ್ಲ. ಸೇವಾ ದೃಷ್ಟಿಯಿಂದ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ ಸಾಲ ಮಾಡಬೇಕಾದ ಸನ್ನಿವೇಶ ಬಂದಿದೆ ಎಂದು ಹೇಳಿದರು.

ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟು ಶೀಘ್ರ ಲಾಭಕ್ಕೆ ತರಲು ಶ್ರೀನಿವಾಸ ಮೂರ್ತಿ ಸಮಿತಿ ರಚನೆ ಮಾಡಿದ್ದು, ಸಂಸ್ಥೆಯನ್ನು ಲಾಭದತ್ತ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಕೋವಿಡ್‌ನಿಂದ ಮರಣ ಹೊಂದಿಗೆ ಸಿಬ್ಬಂದಿಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಈ ಬಗ್ಗೆ ಸಮರ್ಪಕ ದಾಖಲೆಗಳನ್ನು ಸಲ್ಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಸಂಸ್ಥೆಯ ಉಳಿದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಪರಿಹರಿಸುವ ಭರವಸೆಯನ್ನು ಸಚಿವ ಶ್ರೀರಾಮುಲು ನೀಡಿದರು.

ಆರ್ಥಿಕ ಸಂಕಷ್ಟ: ಸಾಲದ ಸುಳಿಯಲ್ಲಿ ಸಿಲುಕಿ KSRTC ಒದ್ದಾಟ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತೀವ್ರ ಸಂಕಷ್ಟದಲ್ಲಿದೆ. ಸಾಲದ ಸುಳಿಯಲ್ಲಿ ಸಿಲುಕಿ ಕೆಎಸ್‌ಆರ್‌ಟಿಸಿ ಒದ್ದಾಡುತ್ತಿದೆ. ಆದರೂ ಕೆಎಸ್‌ಆರ್‌ಟಿಸಿ ಮತ್ತೆ ಸಾಲ ಮಾಡಲು ಮುಂದಾಗಿದೆ. ಬಾಕಿ ಹೊಣೆಗಾರಿಕೆ ಪಾವತಿಸಲು 220 ಕೋಟಿ ಸಾಲ ಮಾಡಲು ಮುಂದಾಗಿದೆ. 220 ಕೋಟಿ ಸಾಲ ನೀಡುವಂತೆ ಕೆಎಸ್‌ಆರ್‌ಟಿಸಿ ಜಾಹೀರಾತು ಹೊರಡಿಸಿದೆ. ಸ್ಥಿರಾಸ್ತಿಯನ್ನ ಅಡವಿಟ್ಟು ಕೆಎಸ್‌ಆರ್‌ಟಿಸಿ ಸಾಲು ಪಡೆಯಲು ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನ ಶಾಂತಿನಗರ ಬಸ್‌ ಡೀಪೋವನ್ನ ಕೆಎಸ್‌ಆರ್‌ಟಿಸಿ ಅಡವಿಟ್ಟಿತ್ತು.

KSRTC: 'ಕೊರೋನಾ ಬಳಿಕವೂ ಸಾರಿಗೆ ಸಂಸ್ಥೆ ಪ್ರಗತಿ ನಿರೀಕ್ಷೆಯಂತಿಲ್ಲ'

ಡಿಪೋಗೆ 5 ತಾಸು ತಡ​ವಾಗಿ ಬಂದ ಬಸ್‌: ಡ್ರೈವರ್‌ಗೆ 12,300 ದಂಡ..!

ಚಾಮರಾಜನಗರ: ಪ್ರವಾಸಕ್ಕೆ ತೆರಳಿದ ಚಾಮರಾಜನಗರ(Chamarajanagar) ಡಿಪೋ ವ್ಯಾಪ್ತಿಯ ಬಸ್ಸೊಂದು ಬರಲು 5 ತಾಸು ತಡವಾಗಿದ್ದಕ್ಕೆ 12,300 ದಂಡ ಕಟ್ಟುವಂತೆ ಚಾಲ​ಕಗೆ(Driver) ನೋಟಿಸ್‌ ನೀಡಿರುವುದು ಬೆಳಕಿಗೆ ಬಂದಿತ್ತು. ಚಾಲಕ ದುರ್ಗಾದಾಸ್‌ ಎಂಬವರಿಗೆ ಡಿಪೋ ಮ್ಯಾನೇಜರ್‌ ಕುಮಾರ್‌ ನಾಯ್ಕ್ ನೋಟಿಸ್‌ ಕೊಟ್ಟಿದ್ದಾರೆ. ಫೆ.20ರಂದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ನಾಗೇಂದ್ರಸ್ವಾಮಿ ಎಂಬುವರು ಬಣ್ಣಾರಿ, ಕೊಯಮತ್ತೂರು, ಈಶ ಧ್ಯಾನಕೇಂದ್ರಕ್ಕೆಂದು ಬಸ್‌ ಬುಕ್‌ ಮಾಡಿ​ದ್ದ​ರು.

ಚಾಲಕ ದುರ್ಗಾದಾಸ್‌ ಒಪ್ಪಂದದ ಕರ್ತವ್ಯ ಮುಗಿಸಿ ಡಿಪೋಗೆ ಹಿಂತಿರುಗಲು 5 ತಾಸು ತಡವಾದದ್ದರಿಂದ ದಂಡ ಕಟ್ಟುವಂತೆ ನೋಟಿಸ್‌ ಕೊಡಲಾಗಿದೆ. ಬಣ್ಣಾರಿ-ದಿಂಬಂ ಘಟ್ಟಪ್ರದೇಶದಲ್ಲಿ ಲಾರಿಯೊಂದು ಪಲ್ಟಿಯಾಗಿತ್ತು. ಈ ಹಿನ್ನೆಲೆ ವಾಪಸ್‌ ಬರಲು ತಡವಾಗಿದೆ ಎನ್ನಲಾ​ಗಿ​ದೆ.