ಸಂಪುಟ ವಿಸ್ತರಣೆಗೆ RSS ಎಂಟ್ರಿ: ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್..!
ಸಂಪುಟ ವಿಸ್ತರಣೆ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್| ಸಚಿವರಾಗೋರಿಗೆ ಹೊಸ ರೂಲ್ಸ್ ಹಾಕಲು ಮುಂದಾಗಿರುವ ಸಂಘ ಪರಿವಾರದ ನಾಯಕರು| ಸಂಪುಟ ಸೇರಲು ಬಯಸಿರುವವರಿಗೆ ಆರ್ ಎಸ್ ಎಸ್ ನಿಂದ ನೂತನ ನಿಯಮ| ಸಂಘದ ಸಲಹೆ ಜಾರಿಯಾದ್ರೆ ಹಲವು ಪ್ರಭಾವಿಗಳು ಅವಕಾಶ ವಂಚಿತರಾಗೋದು ಗ್ಯಾರಂಟಿ| ಪಕ್ಷದ ಅಂಗಳದಲ್ಲಿ ಗಂಭೀರ ಚರ್ಚೆಗೆ ಕಾರಣವಾದ ಆರ್. ಎಸ್ ಎಸ್ ಹೊಸ ರೂಲ್ಸ್| ಸಂಘದ ಸಲಹೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ತಾರಾ ಅನ್ನೋ ಚರ್ಚೆ ಜೋರು.
ಬೆಂಗಳೂರು, (ಜ.06): ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿಲ್ಲ. ಮತ್ತೊಂದೆಡೆ ಹೈಕಮಾಂಡ್ ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಕಂಗ್ಗಾಂಟಾಗಿ ಉಳಿದಿದ್ದು, ಸಚಿವಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ?
ಇದರ ಮಧ್ಯೆ ಬಿಎಸ್‌ವೈ ಸಂಪುಟ ವಿಸ್ತರಣೆ ನಡುವೆ ಆರ್‌ಎಸ್‌ಎಸ್ ಎಂಟ್ರಿಕೊಟ್ಟಿದ್ದು, ಹೊಸ ರೂಲ್ಸ್ ಮುಂದಿಟ್ಟಿದೆ. ಈ ಮೂಲಕ ಸಂಪುಟ ವಿಸ್ತರಣೆ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಆರ್‌ಎಸ್‌ಎಸ್ ಬಿಗ್ ಶಾಕ್ ಕೊಟ್ಟಿದೆ.
RSS ರೂಲ್ಸ್ ಏನು..?
ಸಂಪುಟ ಸೇರಲು ಬಯಸಿರುವವರಿಗೆ ಆರ್‌ಎಸ್‌ಎಸ್‌ನಿಂದ ನೂತನ ನಿಯಮ ತಂದಿದೆ. ಹಾಗಾದ್ರೆ ಆರ್‌ಎಸ್‌ಎಸ್ ಜಾರಿಗೆ ತಂದ ನಿಯಮಗಳು ಈ ಕೆಳಗಿನಂತಿವೆ.
* ಲಾಬಿ ಮಾಡೋದ್ರೆ ಪ್ರಯೋಜನವಿಲ್ಲ-ಒತ್ತಡ ತಂತ್ರ ಕೈಬಿಡಿ ಎಂದ ಸಂಘ...!
* ಮಂತ್ರಿಯಾಗೋದಕ್ಕೆ ಬೇಕೇ ಬೇಕು ಕ್ಲೀನ್ ಇಮೇಜ್...!
* ಶಾಸಕರ ವೈಯಕ್ತಿಕ ಇಮೇಜ್ ಗಮನದಲ್ಲಿ ಇಟ್ಕೊಂಡು ಹೊಸ ಮಂತ್ರಿಗಳ ನೇಮಕ.
* ಕ್ಲೀನ್ ಇಮೇಜ್ ಇರೋರಿಗೆ ಮಾತ್ರ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಅವಕಾಶ.
* ಎಷ್ಟೇ ಪ್ರಭಾವಿಯಾಗಿದ್ದರೂ, ಕ್ಲೀನ್ ಇಮೇಜ್ ಇಲ್ಲದಿದ್ದರೆ ಸಂಪುಟದಲ್ಲಿ ಅವಕಾಶವಿಲ್ಲ.
* ಗಂಭೀರ ಸ್ವರೂಪದ ಕೇಸ್ ಗಳನ್ನು ಎದುರಿಸುತ್ತಿರುವ ನಾಯಕರಿಗೆ ಈ ಬಾರಿ ಅವಕಾಶವಿಲ್ಲ.
* ಪ್ರತಿಪಕ್ಷಗಳಿಗೆ ಆಹಾರವಾಗಬಲ್ಲ ಪ್ರಕರಣದಲ್ಲಿ ಸಿಲುಕಿರುವವರಿಗೆ ಮಂತ್ರಿಗಿರಿಯಿಲ್ಲ.
* ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನಸೆಳೆಯವವರು ಸಹ ಅವಕಾಶ ವಂಚಿತರಾಗೋ ಸಾಧ್ಯತೆ.
* ಅನಗತ್ಯ ವಿವಾದ ಮಾಡುವ ಶಾಸಕರಿಗೆ ಅವಕಾಶ ನೀಡದಂತೆ ಆರ್ ಎಸ್ ಎಸ್ ಸಲಹೆ.
ಇಷ್ಟು ನಿಯಮಗಳೊಮದಿಗೆ ಸಂಘ ಪರಿವಾರ ಹೈಕಮಾಂಡ್‌ಗೆ ಸಲಹೆ ನೀಡಿದೆ. ಒಂದು ವೇಳೆ ಸಂಘದ ಸಲಹೆ ಜಾರಿಯಾದ್ರೆ ಹಲವು ಪ್ರಭಾವಿಗಳು ಸಚಿವ ಸ್ಥಾನದಿಂದ ಅವಕಾಶ ವಂಚಿತರಾಗೋದು ಗ್ಯಾರಂಟಿ.
ಆರ್‌ಎಸ್‌ಎಸ್ ಹೊಸ ರೂಲ್ಸ್‌ನಿಂದ ಪಕ್ಷದ ಅಂಗಳದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಘದ ಸಲಹೆಗಳನ್ನು ಒಪ್ತಾರಾ ಅನ್ನೋ ಮುಂದಿರುವ ಪ್ರಶ್ನೆಯಾಗಿದೆ.