Asianet Suvarna News Asianet Suvarna News

Manmohan Singh Blasts PM Modi : "ದೇಶದ ಎಲ್ಲಾ ಸಮಸ್ಯೆಗೆ ಈಗಲೂ ನೆಹರೂ ಅವರನ್ನೇ ದೂಷಿಸುತ್ತಿದ್ದಾರೆ" ಎಂದ ಮಾಜಿ ಪ್ರಧಾನಿ!

ಪಂಜಾಬ್ ಚುನಾವಣೆಗೂ ಮುಂಚಿತವಾಗಿ ವಿಡಿಯೋ ಸಂದೇಶ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ದೇಶದ ಎಲ್ಲಾ ಸಮಸ್ಯೆಗೂ ಪ್ರಧಾನಿ ನರೇಂದ್ರ ಮೋದಿ, ನೆಹರು ಅವರನ್ನು ದೂಷಿಸುತ್ತಾರೆ
ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಬಿಜೆಪಿ ಪಾಲನೆ ಮಾಡುತ್ತಿದೆ ಎಂದು ಆರೋಪ

Punjab Election former Prime Minister Manmohan Singh accused PM Narendra Modi for blaming Jawaharlal Nehru for every problem san
Author
Bengaluru, First Published Feb 17, 2022, 3:57 PM IST

ನವದೆಹಲಿ (ಫೆ. 27): ಪಂಜಾಬ್ (Punjab) ರಾಜ್ಯಕ್ಕೆ ಭಾನುವಾರ (Sunday) ನಡೆಯಲಿರುವ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ( former Prime Minister Manmohan Singh) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi ) ಹಾಗೂ ಅವರ ಸರ್ಕಾರದ ವಿರುದ್ಧ ತೀರಾ ಅಪರೂಪ ಎನ್ನುವಂತೆ ತೀವರ ವಾಗ್ದಾಳಿ ನಡೆಸಿದರು. ದೇಶದ ಈಗಿನ ಪ್ರತಿಯೊಂದು ಸಮಸ್ಯೆಗೂ ನೆಹರು (Jawaharlal Nehru) ಅವರನ್ನು ದೂಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. "ಪ್ರಧಾನಿ ಹುದ್ದೆಗೆ ವಿಶೇಷ ಸ್ಥಾನಮಾನವಿದೆ" ಎನ್ನುವುದನ್ನು ಅವರು ಅರಿತುಕೊಳ್ಳಬೇಕು ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಆಧರಿಸಿದ ರಾಷ್ಟ್ರೀಯತೆಯನ್ನು ಉತ್ತೇಜಿಸುತ್ತಿದೆ ( promoting nationalism based on the Britishers’ divide and rule policy)ಎಂದು ಮನಮೋಹನ್ ಸಿಂಗ್ ಹೇಳಿದರು.

ಕಾಂಗ್ರೆಸ್ (Congress) ಎಂದಿಗೂ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಅಥವಾ ಸತ್ಯವನ್ನು ಮರೆಮಾಚಲಿಲ್ಲ ಎಂದು 89 ವರ್ಷದ ಮನಮೋಹನ್ ಸಿಂಗ್ ಹೇಳಿದ್ದಾರೆ. “ಒಂದೆಡೆ ಜನರು ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ, ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಈಗಿನ ಸರ್ಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸುವ ಬದಲು ಜನರ ಸಮಸ್ಯೆಗಳಿಗೆ ಇನ್ನೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಿದೆ" ಎಂದು ವಿಡಿಯೋ ಸಂದೇಶದಲ್ಲಿ ಮನಮೋಹನ್ ಸಿಂಗ್ ಹೇಳಿದ್ದು, ಇದನ್ನು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

"ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿಯವರು ಇತಿಹಾಸವನ್ನು ದೂಷಿಸುವ ಬದಲು ಘನತೆಯನ್ನು ಕಾಯ್ದುಕೊಳ್ಳಬೇಕು, ನಾನು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೇನೆ. ಪ್ರಪಂಚದ ಮುಂದೆ ದೇಶವು ಪ್ರತಿಷ್ಠೆಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಿಡಲಿಲ್ಲ. ನಾನು ಎಂದಿಗೂ ಭಾರತದ ಹೆಮ್ಮೆಯನ್ನು ಕುಗ್ಗಿಸಿಲ್ಲ," ಎಂದು ಅವರು ಹೇಳಿದರು. "ನಾನು ದುರ್ಬಲ, ಶಾಂತ ಮತ್ತು ಭ್ರಷ್ಟ ಎಂಬ ಬಿಜೆಪಿಯ ಸುಳ್ಳು ಸಾಲು ಸಾಲು ಆರೋಪಗಳ ನಂತರ, ಬಿಜೆಪಿ ಮತ್ತು ಅದರ ಬಿ ಮತ್ತು ಸಿ-ಟೀಮ್ ದೇಶದ ಮುಂದೆ ಬಹಿರಂಗಗೊಳ್ಳುತ್ತಿದೆ ಎಂಬ ತೃಪ್ತಿ ನನಗಿದೆ." ಎಂದಿದ್ದಾರೆ.


ಎರಡು ಬಾರಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದ ಆಕ್ರಮಣಗಳನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. “ಅವರಿಗೆ (ಬಿಜೆಪಿ ನೇತೃತ್ವದ ಸರ್ಕಾರಕ್ಕೆ) ಆರ್ಥಿಕ ನೀತಿಯ (economic policy.) ಬಗ್ಗೆ ತಿಳುವಳಿಕೆ ಇಲ್ಲ, ಈ ವಿಷಯ ರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ವಿದೇಶಾಂಗ ನೀತಿಯಲ್ಲೂ (foreign policy) ಈ ಸರ್ಕಾರ ವಿಫಲವಾಗಿದೆ, ಚೀನಾ ನಮ್ಮ ಗಡಿಯಲ್ಲಿ ಕುಳಿತು ಅದನ್ನು ಆಕ್ರಮಣಗಳನ್ನು ಮಾಡುತ್ತಿದೆ' ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. 

Hijab Row: ಸಿಖ್ಖರನ್ನು ಕೆರಳಿಸುವುದೇ ಕಾಂಗ್ರೆಸ್ ಪ್ಲಾನ್, ವಾಸ್ತವತೆ ತೆರೆದಿಟ್ಟ ಬಿಜೆಪಿ ನಾಯಕ
"ನಾಯಕರನ್ನು ಬಲವಂತವಾಗಿ ತಬ್ಬಿಕೊಳ್ಳುವುದು, ಕೈಬೀಸುವ ಮೂಲಕ ಅಥವಾ ಅವರಿಗೆ ಬಿರಿಯಾನಿ ತಿನ್ನಿಸುವ ಮೂಲಕ ವಿದೇಶಾಂಗ ನೀತಿಯನ್ನು ನಡೆಸಲಾಗುವುದಿಲ್ಲ ಎಂದು ಪ್ರಧಾನಿ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು. ಬಿಜೆಪಿ ನೇತೃತ್ವದ ಸರ್ಕಾರವು "ನಕಲಿ ರಾಷ್ಟ್ರೀಯವಾದಿ ಮತ್ತು ವಿಭಜಕ ನೀತಿಗಳನ್ನು" ಹೊಂದಿದೆ ಎಂದಿರುವ ಅವರು, ಸರ್ಕಾರದ ವಿದೇಶಾಂಗ ನೀತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.

ಹಿಮಾಲಯದ 15000 ಅಡಿ ಎತ್ತರದಲ್ಲಿ ಗಸ್ತು ತಿರುಗುತ್ತಿರುವ ಯೋಧರು.. ವಿಡಿಯೋ ವೈರಲ್‌
"ನಾವು ಎಂದಿಗೂ ಪಟ್ಟಭದ್ರ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ. ನಾವು ಎಂದಿಗೂ ಸತ್ಯವನ್ನು ಮರೆಮಾಚಲು ಪ್ರಯತ್ನಿಸಲಿಲ್ಲ. ನಾವು ಎಂದಿಗೂ ದೇಶದ ಗೌರವ ಅಥವಾ ಪ್ರಧಾನಿ ಸ್ಥಾನಕ್ಕೆ ಧಕ್ಕೆ ತಂದಿಲ್ಲ. ಜನರು ಇಂದು ವಿಭಜನೆಯಾಗುತ್ತಿದ್ದಾರೆ. ಈ ಸರ್ಕಾರದ ನಕಲಿ ರಾಷ್ಟ್ರೀಯತೆ ಟೊಳ್ಳು ಮತ್ತು ಅಪಾಯಕಾರಿ. ಆದರೆ, ಇದು ಅವರ ರಾಷ್ಟ್ರೀಯತೆಯ  ಆಧಾರವಾಗಿದೆ. ಒಡೆದು ಆಳುವ ಬ್ರಿಟಿಷರ ನೀತಿಯ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios