Asianet Suvarna News Asianet Suvarna News

ಹಿಮಾಲಯದ 15000 ಅಡಿ ಎತ್ತರದಲ್ಲಿ ಗಸ್ತು ತಿರುಗುತ್ತಿರುವ ಯೋಧರು.. ವಿಡಿಯೋ ವೈರಲ್‌

  • 15,000 ಅಡಿಗಳಷ್ಟು ಎತ್ತರದಲ್ಲಿ ಯೋಧರ ಗಸ್ತು
  • ಮೊಣಕಾಲೆತ್ತರದವರೆಗಿನ ಹಿಮದಲ್ಲಿ ಯೋಧರ ಸಾಹಸ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ ಐಟಿಬಿಪಿ
ITBP jawans patrol snow bound area at 15,000 feet in Himalayas akb
Author
Bangalore, First Published Feb 17, 2022, 3:02 PM IST | Last Updated Feb 17, 2022, 3:02 PM IST

ಹಿಮಾಲಯ(ಫೆ.17): ಐಟಿಬಿಪಿ ಯೋಧರು ಹಿಮಾಲಯದ ಶೂನ್ಯ ತಾಪಮಾನದಲ್ಲಿ 15,000 ಅಡಿಗಳಷ್ಟು ಎತ್ತರದಲ್ಲಿ ಹಿಮದಿಂದ ಸುತ್ತುವರಿದ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಂಡೋ ಟಿಬಿಟಿಯನ್‌ ಬಾರ್ಡರ್‌ ಪೋರ್ಸ್‌  ತನ್ನ ಅಧಿಕೃತ ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಯೋಧರು ಈ ಕನಿಷ್ಠ ತಾಪಮಾನದಲ್ಲಿ ಗಸ್ತು ತಿರುಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಪಡೆಯು ಪರ್ವತ ಪ್ರದೇಶಗಳಲ್ಲಿ ನಮ್ಮ ದೇಶವನ್ನು ರಕ್ಷಿಸುವ ಯೋಧರ ಜೀವನ ಶೈಲಿಯ ಬಗ್ಗೆ ಕಾರ್ಯಾಚರಣೆಯ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತದೆ. ಈ ಹಿಂದೆ ಮೈನಸ್‌ ತಾಪಮಾನದಲ್ಲಿ ಅವರು ಹೇಗೆ ತರಬೇತಿ ನೀಡುತ್ತಾರೆ ಎಂಬ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಈಗ ಪೋಸ್ಟ್ ಮಾಡಿರುವ ವಿಡಿಯೋ 15,000 ಅಡಿ ಎತ್ತರದ ಹಿಮದಿಂದ ಸುತ್ತುವರಿದ ಪ್ರದೇಶದಲ್ಲಿ ಜವಾನರು ಗಸ್ತು ತಿರುಗುತ್ತಿರುವ ದೃಶ್ಯವನ್ನು ತೋರಿಸುತ್ತಿದೆ. 

ಜೈಶಂಕರ್ ಪ್ರಸಾದ್ (JaiShankar Prasad) ಅವರು ಬರೆದಿರುವ ಹಿಮಾದ್ರಿ ತುಂಗ್ ಶ್ರಿಂಗ್ ಸೆ ಎಂಬ ಕವಿತೆಯ ಎರಡು ಸಾಲುಗಳನ್ನು ಬರೆದು ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ವೆನ್ ದಿ ಗೋಯಿಂಗ್ ಗೆಟ್ಸ್ ಟಫ್, ದಿ ಟಫ್ ಗೆಟ್ ಗೋಯಿಂಗ್' ಎಂದು ಅವರು ಬರೆದಿದ್ದಾರೆ. ಮುಂದಿನ ಕೆಲವು ಸಾಲುಗಳಲ್ಲಿ, ಅವರು ಜವಾನರು ಏನು ಮಾಡುತ್ತಿದ್ದಾರೆಂದು ವಿವರಿಸಿದ್ದಾರೆ. "ಐಟಿಬಿಪಿಯ ಹಿಮ್‌ವೀರ್‌ಗಳು ಉತ್ತರಾಖಂಡ (Uttarakhand)ನ ಹಿಮಾಲಯದ ಸುತ್ತ ಶೂನ್ಯ ತಾಪಮಾನದಲ್ಲಿ 15 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೊಣಕಾಲಿಗಿಂತ ಹೆಚ್ಚು ಎತ್ತರದ ಹಿಮದಿಂದ ಆವೃತವಾದ ಭೂಮಿಯಲ್ಲಿ ಜವಾನರು ಎಚ್ಚರಿಕೆಯಿಂದ ನಡೆದುಕೊಂಡು ಹೋಗುವುದನ್ನು ಈ ವೀಡಿಯೊ ತೋರಿಸುತ್ತಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಮೈನಸ್‌ 25 ಡಿಗ್ರಿ ತಾಪಮಾನದಲ್ಲಿ ತರಬೇತಿ

ಐಟಿಬಿಪಿ ಯೋಧರಿಗೆ  ಉತ್ತರಾಖಂಡದ ಗಡಿಯಲ್ಲಿ -25 ಡಿಗ್ರಿ ತಾಪಮಾನದ ಮೈ ಕೊರೆಯುವ ಚಳಿಯಲ್ಲೇ ತರಬೇತಿ ನೀಡಲಾಗುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಬೆಳಗ್ಗೆ ಈ ವಿಡಿಯೋವನ್ನು ಟ್ವಿಟ್‌ ಮಾಡಲಾಗಿದ್ದು, ಅದಾಗಲೇ   20,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ 1,500ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಮೆಚ್ಚಿದ್ದಾರೆ.  ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರಾಖಂಡದ ಗಡಿಯಲ್ಲಿ ಅತ್ಯಂತ ಶೀತ ವಾತಾವರಣದಲ್ಲಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. 

Avalanche In Arunachal Pradesh: ಹಿಮಕುಸಿತದಲ್ಲಿ ಸಿಲುಕಿ 7 ಯೋಧರು ನಾಪತ್ತೆ

ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮತ್ತು ಹಿಮ ಹಾಗೂ ಪರ್ವತಗಳಿಂದ ಆವೃತವಾದ ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿ ಧೈರ್ಯದಿಂದ ತರಬೇತಿ ಪಡೆಯುತ್ತಿದ್ದಾರೆ. ಐಟಿಬಿಪಿ ಸಿಬ್ಬಂದಿಯನ್ನು ನಿರ್ವಹಿಸುವ ಅವರ ನಾಯಕ ತರಬೇತಿಯ ಸೂಚನೆಗಳನ್ನು ನೀಡುವುದನ್ನು ವಿಡಿಯೋದಲ್ಲಿ ಕೇಳಬಹುದು. ವಿಪರೀತ ಚಳಿಯ ನಡುವೆಯೂ ಯೋಧರು ಶಕ್ತಿ ಮತ್ತು ದಿಟ್ಟ ಧ್ವನಿಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ವಿಡಿಯೋ ನೋಡಿದ ಜನ ಯೋಧರ ಶಕ್ತಿ ಸಾಮರ್ಥ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಕ್ತ ಹೆಪ್ಪುಗಟ್ಟಿಸುವ ಹಿಮದ ಮಧ್ಯೆ ಬಿಹು ಹಬ್ಬ ಆಚರಿಸಿದ ಬಿಎಸ್‌ಎಫ್‌ ಯೋಧರು

Latest Videos
Follow Us:
Download App:
  • android
  • ios