* ಹಿಜಾಬ್‌ ಜೊತೆ ಸಿಖ್ಖರ ಪೇಟ ಹೋಲಿಕೆ* ಹಿಜಾಬ್‌ ವಿವಾದದ ವಿಚಾರವಾಗಿ ಮಂಜಿಂದರ್ ಸಿಂಗ್ ಗಂಭೀರ ಆರೋಪ* ಕಾಂಗ್ರೆಸ್‌ನಿಂದ ಸಿಖ್ಖರನ್ನು ಕೆರಳಿಸುವ ಯತ್ನ

ನವದೆಹಲಿ(ಫೆ.17): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ತ್ರಿಸದಸ್ಯ ಪೀಠವು ಪ್ರತಿನಿತ್ಯ ವಿಚಾರಣೆ ನಡೆಸುತ್ತಿದೆ. ಏತನ್ಮಧ್ಯೆ, ಹಿಜಾಬ್ ಮೂಲಕ ಸಿಖ್ಖರ ಬಗ್ಗೆ ಕೋಮು ರಾಜಕಾರಣ ಮಾಡುತ್ತಿದೆ ಎಂಬ ಆರೋಪ ಕಾಂಗ್ರೆಸ್ ವಿರುದ್ಧ ಕೇಳಿ ಬಂದಿದೆ. ಸೇನೆಯಲ್ಲೂ ಸಿಖ್ಖರಿಗೆ ಪೇಟದ ಸ್ವಾತಂತ್ರ್ಯವಿದೆ, ಹಾಗಾದರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಏಕೆ ಅವಕಾಶವಿಲ್ಲ ಎಂದು ಬುಧವಾರ ನ್ಯಾಯಾಲಯದಲ್ಲಿ ಪ್ರಶ್ನೆ ಎತ್ತಲಾಯಿತು. ಈ ಪ್ರಶ್ನೆಯನ್ನು ಎತ್ತಿದ ನಂತರ, ಸ್ವತಃ ಕಾಂಗ್ರೆಸ್‌ ವಿರುದ್ಧವೇ ಕೆಂಗಣ್ಣಿಗೆ ಗುರಿಯಾಗಿದೆ. ವಾಸ್ತವವಾಗಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರತಿನಿಧಿಸುತ್ತಿರುವ ವಕೀಲ ದೇವದತ್ತ್ ಕಾಮತ್ ಮತ್ತು ರವಿವರ್ಮ ಕುಮಾರ್ ಅವರು ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಕಾಮತ್ ಅವರು ಇತ್ತೀಚಿನ ಯುಪಿ ಚುನಾವಣೆಗೆ ಕಾಂಗ್ರೆಸ್ ಕಾನೂನು ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂಬುವುದು ಉಲ್ಲೇಖನೀಯ.

Hijab Row: ಹಿಜಾಬ್ ಮಹಿಳೆಯನ್ನು ಲೈಂಗಿಕ ವಸ್ತುವಾಗಿಸುತ್ತದೆ, 7ನೇ ಶತಮಾನದ ಕಾನೂನು ಯಾಕೆ ಬೇಕು?

ನಿರಂತರವಾಗಿ ಸಿಖ್ಖರ ಪೇಟವನ್ನು ಗುರಿಯಾಗಿಸಿಕೊಂಡಿದೆ

ಅಷ್ಟೇ ಅಲ್ಲ ಸಿಖ್ ಪೇಟದ ವಿಚಾರವನ್ನು ಕೋರ್ಟ್ ನಲ್ಲಿ ಉಲ್ಲೇಖಿಸಿದ ರವಿವರ್ಮ ಕುಮಾರ್ ಕೂಡ ಕಾಂಗ್ರೆಸ್ ಗೆ ಹತ್ತಿರವಾಗಿದ್ದಾರೆ. 2013 ರಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಅವರನ್ನು ಸರ್ಕಾರವು ಅಡ್ವೊಕೇಟ್ ಜನರಲ್ ಆಗಿ ನೇಮಿಸಿತು. ಅಂದರೆ, ಇಡೀ ವಿಷಯವನ್ನು ಕಾಂಗ್ರೆಸ್ ಎತ್ತುತ್ತಿದೆ. ಅಚ್ಚರಿಯ ವಿಷಯವೆಂದರೆ ಈ ವಿಚಾರದ ಮೂಲಕ ಸಿಖ್ಖರನ್ನು ಕೆರಳಿಸುವ ಪ್ರಯತ್ನ ನಡೆಯುತ್ತಿದೆ. ವಾಸ್ತವವಾಗಿ, ಹಿಜಾಬ್ ವಿವಾದದ ಆರಂಭದಿಂದಲೂ, ಸಿಖ್ಖರ ಪೇಟವನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಬುಧವಾರ ನಡೆದ ವಿಚಾರಣೆಯಲ್ಲಿ, ಸಿಖ್ಖರಿಗೆ ಸೇನೆಯಲ್ಲಿ ಪೇಟ ಧರಿಸಲು ಅವಕಾಶ ನೀಡಿದರೆ ಶಾಲೆಗಳಲ್ಲಿ ಹಿಜಾಬ್ ಅನ್ನು ಏಕೆ ನಿಷೇಧಿಸಬೇಕು ಎಂದು ನ್ಯಾಯಾಲಯದಲ್ಲಿ ಕೇಳಲಾಯಿತು.

ಟ್ವಿಟರ್‌ನಲ್ಲಿ ವಾಸ್ತವ ತೆರೆದಿಟ್ಟ ಬಿಜೆಪಿ ನಾಯಕ ಮಂಜಿಂದರ್ ಸಿರ್ಸಾ

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಟ್ವಿಟರ್ ಪೋಸ್ಟ್ ಮೂಲಕ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮುಖವನ್ನು ಬಯಲುಗೊಳಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಸಿಖ್ಖರನ್ನು ಕೆರಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಸಿರ್ಸಾ ಅವರು ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ನ ಲೆಟರ್‌ಹೆಡ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಲೆಟರ್‌ಹೆಡ್ ಪ್ರಕಾರ, ಕರ್ನಾಟಕ ಹೈಕೋರ್ಟ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಹಿಜಾಬ್ ಅನ್ನು ಪ್ರತಿಪಾದಿಸುತ್ತಿರುವ ದೇವದತ್ ಕಾಮತ್ ಅವರು ಕಾಂಗ್ರೆಸ್ ನಾಯಕರಾಗಿದ್ದಾರೆ. ಜನವರಿ 17, 2022 ರಂದು, ಅವರನ್ನು ಪಕ್ಷವು ಉತ್ತರ ಪ್ರದೇಶ ಚುನಾವಣೆಗಾಗಿ ಕಾಂಗ್ರೆಸ್ ಕಾನೂನು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿತು.

Hijab Row: ಹೆಣ್ಮಕ್ಕಳಿಗೆ ಶ್ರೇಷ್ಠ ಸ್ಥಾನ ಇರುವಲ್ಲಿ ಹಿಜಾಬ್ ಅಗತ್ಯವೇನಿದೆ? ವಿವಾದ ಸಂಬಂಧ ಪ್ರಜ್ಞಾ ಠಾಕೂರ್

ಕಾಂಗ್ರೆಸ್ ನ ಷಡ್ಯಂತ್ರದಲ್ಲಿ ಜಾಖರ್ ನಿಂದ ಸೋನಂ ಕಪೂರ್‌ವರೆಗೂ ಭಾಗಿ!

ಕಾಂಗ್ರೆಸ್ ಆಡಳಿತದಲ್ಲಿ ಅಡ್ವೊಕೇಟ್ ಜನರಲ್ ಆಗಿದ್ದ ರವಿವರ್ಮ ಕುಮಾರ್ ಅವರು ಪೇಟದ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು ಎಂದು ಸಿರ್ಸಾ ಹೇಳುತ್ತಾರೆ. ಅವರಿಗಿಂತ ಮೊದಲು, ಫೆಬ್ರವರಿ 11 ರಂದು ಹಿಜಾಬ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್, ಸಿಖ್ಖರ ಪೇಟದ ಬಗ್ಗೆ ಮಾತನಾಡಿದರು. ಹಿಜಾಬ್ ಮೇಲೆ ಪ್ರಶ್ನೆ ಉದ್ಭವಿಸಿದರೆ, ಮುಂದೊಂದು ದಿನ ಅದು ಸಿಖ್ಖರ ಪೇಟದ ಮೇಲೂ ಉದ್ಭವಿಸಬಹುದು ಎಂದು ಹೇಳಿದರು. ಅಷ್ಟೇ ಅಲ್ಲ, ಈ ವಿಚಾರದಲ್ಲಿ ನಟಿ ಸೋನಂ ಕಪೂರ್ ಅವರಂತಹ ಸೆಲೆಬ್ರಿಟಿಗಳನ್ನೂ ಕಾಂಗ್ರೆಸ್ ಬಳಸಿಕೊಂಡಿದೆ. ಸಿಖ್ಖರನ್ನು ಭಾರತದ ಮುಖ್ಯವಾಹಿನಿಯಿಂದ ಪ್ರತ್ಯೇಕಿಸಲು ಇದು ಕಾಂಗ್ರೆಸ್‌ನ ಆಟದ ಯೋಜನೆಯಾಗಿದೆ ಎಂದು ಸಿರ್ಸಾ ಹೇಳಿದರು ಮತ್ತು ಇತ್ತೀಚಿನ ಕೆಲವು ಘಟನೆಗಳ ನಂತರ ಇದು ಸ್ಪಷ್ಟವಾಗಿದೆ.