ಪ್ರಿಯಾಂಕಾ ಗಾಂಧಿಗೆ ಕೊಟ್ಟ ಬೊಕ್ಕೆಯಲ್ಲಿ ಹೂವೇ ನಾಪತ್ತೆ: ಇಲ್ಲೂ ಕಾಂಗ್ರೆಸ್‌ ಹಗರಣವೆಂದು ಕಾಲೆಳೆದ ಬಿಜೆಪಿ!

ಪ್ರಿಯಾಂಕಾ ಗಾಂಧಿ ರ‍್ಯಾಲಿಯಲ್ಲಿ ಕ್ಯಾಮೆರಾದಲ್ಲಿ ಉಲ್ಲಾಸದ ಕ್ಷಣಗಳು ಸೆರೆಯಾಗಿವೆ. ತನಗೆ ನೀಡಿದ ಪುಷ್ಟಗುಚ್ಚದಲ್ಲಿ ಹೂವೇ ನಾಪತ್ತೆಯಾಗಿದ್ದು, ಬೊಕ್ಕೆ ಖಾಲಿಯಾಗಿರುವುದನ್ನು ಗಮನಿಸಿದ ಕಾಂಗ್ರೆಸ್ ನಾಯಕಿಗೆ ನಗು ತಡೆಯಲಾಗಿಲ್ಲ. ಈ ವಿಡಿಯೋ ಬಗ್ಗೆ ಬಿಜೆಪಿಯವರು ಕಾಂಗ್ರೆಸ್‌ ಕಾಲೆಳೆದಿದ್ದಾರೆ.

priyanka gandhi gets bouquet at rally flowers are missing video goes viral ash

ಹೊಸದಿಲ್ಲಿ (ನವೆಂಬರ್ 7, 2023): ಪಂಚರಾಜ್ಯ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್‌ ಸೇರಿ ಅನೇಕ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ,  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಧ್ಯ ಪ್ರದೇಶದಲ್ಲಿ ಪಕ್ಷದ ನಾಯಕರೊಬ್ಬರು ಹೂವುಗಳು ಕಾಣೆಯಾಗಿರುವ ಪುಷ್ಪಗುಚ್ಛವನ್ನು ನೀಡಿರುವ ಹಾಸ್ಯಾಸ್ಪದ ಘಟನೆ ನಡೆದಿದೆ.

ಹೌದು, ನವೆಂಬರ್ 25 ರಂದು ಮತದಾನ ನಡೆಯಲಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರ‍್ಯಾಲಿಯಲ್ಲಿ ಕ್ಯಾಮೆರಾದಲ್ಲಿ ಉಲ್ಲಾಸದ ಕ್ಷಣಗಳು ಸೆರೆಯಾಗಿವೆ. ನಿನ್ನೆ ನಡೆದ ರ‍್ಯಾಲಿಯಲ್ಲಿ ತನಗೆ ನೀಡಿದ ಪುಷ್ಟಗುಚ್ಚದಲ್ಲಿ ಹೂವೇ ನಾಪತ್ತೆಯಾಗಿದ್ದು, ಬೊಕ್ಕೆ ಖಾಲಿಯಾಗಿರುವುದನ್ನು ಗಮನಿಸಿದ ಕಾಂಗ್ರೆಸ್ ನಾಯಕಿಗೆ ನಗು ತಡೆಯಲಾಗಿಲ್ಲ. ಕಳೆದ ಬಾರಿ ಸರ್ಕಾರ ರಚಿಸಿದರೂ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಬಂಡಾಯದ ನಂತರ ಅಧಿಕಾರ ಕಳೆದುಕೊಂಡ ಕಾಂಗ್ರೆಸ್,ಮಧ್ಯ ಪ್ರದೇಶ ರಾಜ್ಯದಲ್ಲಿ ಈ ಬಾರಿ ಗೆಲುವಿಗಾಗಿ ಶ್ರಮಿಸುತ್ತಿದೆ.

ಇದನ್ನು ಓದಿ: ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಂಸದನಿಗೆ ಚಾಕು ಇರಿತ: ಆರೋಪಿಗೆ ಹಿಗ್ಗಾಮುಗ್ಗ ಥಳಿತ; ಪೊಲೀಸ್‌ ವಶಕ್ಕೆ

ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಈ ರ‍್ಯಾಲಿ ನೇರ ಪ್ರಸಾರ ಮಾಡಲಾಗಿದ್ದು, ಈ ಲಿಂಕ್ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸುತ್ತಿರುವುದನ್ನು ತೋರಿಸುತ್ತದೆ. ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ಅವರ ಬಳಿಗೆ ತೆರಳಿ ಶುಭಾಶಯ ಕೋರುತ್ತಿರುತ್ತಾರೆ. ಕೆಲವು ನಾಯಕರು ಪ್ರಿಯಾಂಕಾಗೆ ಗುಲಾಬಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಇತರರು ಫೋಟೋಗಳಿಗೆ ಪೋಸ್ ನೀಡುತ್ತಾರೆ.

ಈ ಹಂತದಲ್ಲಿ, ಒಬ್ಬ ವ್ಯಕ್ತಿಯು ಬೊಕ್ಕೆಯನ್ನು ಪ್ರಿಯಾಂಕಾ ಗಾಂಧಿ ವಾದ್ರಾಗೆ ಹಸ್ತಾಂತರಿಸಿದ್ದು, ಅದನ್ನು ನೋಡಿದ ತಕ್ಷಣ ಕೈ ನಾಯಕಿ ನಗಲು ಪ್ರಾರಂಭಿಸುತ್ತಾರೆ. ನಂತರ ಹೂಗಳು ಎಲ್ಲಿವೆ ಎಂದು ಕೇಳುವಂತೆ ಖಾಲಿ ಬೊಕ್ಕೆ ತೋರಿಸಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರು ಮುಜುಗರಕ್ಕೊಳಗಾಗಿದ್ದು, ಏನೋ ಗೊಣಗಿದ್ದಾರೆ. ನಂತರ, ಆ ವ್ಯಕ್ತಿ ಬಂದ ಕೂಡಲೇ ಕಣ್ಮರೆಯಾಗುತ್ತಾರೆ.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ; ಅಧಿಕಾರಕ್ಕೆ ಬಂದ್ರೆ ಕರ್ನಾಟಕ ರೀತಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್‌ ಘೋಷಣೆ

ಬಳಿಕ, ಇದನ್ನು ಮರೆತ ಪ್ರಿಯಾಂಕಾ ಗಾಂಧಿ ಬೆಲೆ ಏರಿಕೆಯ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ''ದೀಪಾವಳಿಗೂ ಮುನ್ನವೇ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗೃಹಿಣಿಯರು ಇದರಿಂದ ಅಸಮಾಧಾನಗೊಂಡಿದ್ದಾರೆ. ಚುನಾವಣೆ ನಡೆದಾಗ ಮಾತ್ರ ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಪ್ರಯತ್ನ ಮಾಡುತ್ತದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 1,400ಕ್ಕೆ ಏರಿಕೆಯಾಗಿದ್ದು, ಚುನಾವಣೆಗೆ ಎರಡು ತಿಂಗಳಿರುವಾಗ ಸರ್ಕಾರ 400 ರೂ. ಗೆ ಬೆಲೆ ಇಳಿಕೆ ಮಾಡಿದೆ’’ ಎಂದು ಹೇಳಿದರು.

ಆದರೆ, ಕಾಂಗ್ರೆಸ್‌ನ ಬೊಕ್ಕೆ ವಿಡಿಯೋ ವೈರಲ್‌ ಆಗಿದ್ದು, ಬಿಜೆಪಿ ನಾಯಕರು ಈ ಕುರಿತು ಕಾಂಗ್ರೆಸ್ ಕಾಲೆಳೆದಿದ್ದಾರೆ. ಪುಷ್ಪಗುಚ್ಛ ಹಗರಣ, ಹೂಗುಚ್ಛದಿಂದ ಹೂವು ನಾಪತ್ತೆ. ಹಿಂಬಾಲಕ ಸಿಕ್ಕಿಬಿದ್ದ ಎಂದು ಬಿಜೆಪಿ ನಾಯಕರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:  ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ: ಮೈತ್ರಿ ಪಕ್ಷದ ಸಿಎಂ ಸಡ್ಡು

Latest Videos
Follow Us:
Download App:
  • android
  • ios