ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ: ಮೈತ್ರಿ ಪಕ್ಷದ ಸಿಎಂ ಸಡ್ಡು
ಪಂಚರಾಜ್ಯ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಈಶಾನ್ಯದ ಗಡಿ ರಾಜ್ಯ ಮಿಜೋರಾಂ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಜಂಟಿಯಾಗಿ ಚುನಾವಣಾ ಪ್ರಚಾರ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿ (ಅಕ್ಟೋಬರ್ 25, 2023): ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಮಿಜೋರಂ ರಾಜ್ಯದ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಜಂಟಿಯಾಗಿ ಪ್ರಚಾರದ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಸಡ್ಡು ಹೊಡೆದಿದ್ದಾರೆ. ಅವರ ಪಕ್ಷವಾದ ಎಂಎನ್‌ಎಫ್ ಎನ್‌ಡಿಎ ಕೂಟದಲ್ಲಿದೆ.
ಪಂಚರಾಜ್ಯ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಈಶಾನ್ಯದ ಗಡಿ ರಾಜ್ಯ ಮಿಜೋರಾಂ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಜಂಟಿಯಾಗಿ ಚುನಾವಣಾ ಪ್ರಚಾರ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಚುನಾವಣೆಯಲ್ಲಿ ಹಂಚಲು ಕರ್ನಾಟಕದಿಂದ ತೆಲಂಗಾಣಕ್ಕೆ 3.5 ಕೋಟಿ ರೂ. ಹಣ ಸಾಗಾಟ! ಹೈದರಾಬಾದಲ್ಲಿ ಜಪ್ತಿ
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮಣಿಪುರ ವಿಚಾರದಲ್ಲಿ ಬಿಜೆಪಿ ಕ್ರಿಶ್ಚಿಯನ್ ವಿರೋಧಿ ನಿಲುವು ತೆಗೆದುಕೊಂಡಿದೆ. ನಮ್ಮ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ ಬಹುಸಂಖ್ಯಾತರಾಗಿರುವುದರಿಂದ ತಾವು ಬಿಜೆಪಿಯನ್ನು ಬೆಂಬಲಿಸಿದರೆ ತಮ್ಮ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್‌ಗೆ (ಎಂಎನ್‌ಎಫ್) ಹಿನ್ನಡೆಯಾಗುವ ಸಂಭವವಿದೆ. ಹೀಗಾಗಿ ಕೇಂದ್ರದಲ್ಲಿ ಮಾತ್ರ ನಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದಲ್ಲಿರಲಿದೆ. ರಾಜ್ಯದಲ್ಲಿ ಮೈತ್ರಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 30 ರಂದು ರಾಜ್ಯದ ಪಶ್ಚಿಮ ಭಾಗದಲ್ಲಿರುವ ಮಮಿತ್ ಪಟ್ಟಣಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಾಧ್ಯತೆ ಇದೆ. "ಮಿಜೋರಾಂನ ಜನರೆಲ್ಲರೂ ಕ್ರಿಶ್ಚಿಯನ್ನರು, ಮಣಿಪುರದ ಜನರು (ಮೇಟಿಗಳು) ಮಣಿಪುರದಲ್ಲಿ ನೂರಾರು ಚರ್ಚ್‌ಗಳನ್ನು ಸುಟ್ಟುಹಾಕಿದಾಗ, ಅವರು (ಮಿಜೋಸ್) ಅಂತಹ ಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದಲು ದೊಡ್ಡ ಮೈನಸ್ ನನ್ನ ಪಕ್ಷಕ್ಕೆ ಪಾಯಿಂಟ್," ಎಂದು ಝೋರಂಥಂಗಾ ಬಿಬಿಸಿ ನ್ಯೂಸ್ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ: ಕಲ್ಯಾಣ ಯೋಜನೆಗಳ ಪೂರ್ಣ ಜಾರಿಗೆ ಮೋದಿ 6 ತಿಂಗಳ ಡೆಡ್‌ಲೈನ್: ಚುನಾವಣೆಗೂ ಮುನ್ನ ದೇಶದಲ್ಲಿ ಬೃಹತ್ ಆಂದೋಲನ
‘ಪ್ರಧಾನಿ ಒಬ್ಬರೇ ಬಂದು ವೇದಿಕೆ ಹಂಚಿಕೊಂಡರೆ ಉತ್ತಮ, ನಾನೇ ಪ್ರತ್ಯೇಕವಾಗಿ ವೇದಿಕೆ ಏರುತ್ತೇನೆ’ ಎಂದರು.
ಝೋರಂತಂಗಾ ಅವರ MNF ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (NEDA) ಒಂದು ಭಾಗವಾಗಿದೆ ಮತ್ತು ಕೇಂದ್ರದಲ್ಲಿ NDA ಮಿತ್ರ ಪಕ್ಷವಾಗಿದೆ. ಆದರೆ, ಮಿಜೋರಾಂನಲ್ಲಿ ಬಿಜೆಪಿ ಜತೆ ಪಕ್ಷ ಕೆಲಸ ಮಾಡುವುದಿಲ್ಲ.
ಇದನ್ನೂ ಓದಿ: ಮಧ್ಯ ಪ್ರದೇಶ ಸಿಎಂ ‘ಶಿವರಾಜ’ನ ವಿರುದ್ಧ ‘ಹನುಮಂತ’ನ ಸ್ಪರ್ಧೆ’: ಕಾಂಗ್ರೆಸ್ ಪಟ್ಟಿಯಲ್ಲಿ ಬಿಜೆಪಿ ಮಾಜಿ ನಾಯಕರು!