ಕರ್ನಾಟಕದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಹಾವಳಿ ಹೆಚ್ಚಾಗಲು ಕೇರಳದವರೇ ಕಾರಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ. ಕೇರಳಿಗರು ನಮ್ಮ ರಾಜ್ಯದ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದು, ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಮೈಸೂರು (ನ.27): ಕರ್ನಾಟಕದಲ್ಲಿ ಪಿಎಫ್‌ಐ(PFI), ಎಸ್‌ಡಿಪಿಐ(SDPI) ಹಾವಳಿ ಹೆ್ಚ್ಚಾಗಲು ಕೇರಳದ ಕಾಕಾಗಳೇ ಕಾರಣ ಎಂದು ಕೇರಳಿಗರ ವಿರುದ್ಧ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತೆ ವಾಗ್ದಾಳಿ ನಡೆಸಿದರು.

ಕೇರಳದ ಕಾಕಾಗಳು ನಾಡಿನ ಸಂಸ್ಕೃತಿ ಹಾಳುಗೆಡುವುತ್ತಿದ್ದಾರೆ:

ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದ ಕಾಕಾಗಳು ಕರ್ನಾಟಕಕ್ಕೆ ಯಾಕೆ ಬರಬೇಕು? ಈ ಹಿಂದೆ ತರಕಾರಿ ಖರೀದಿಸಲೆಂದು ಬರುತ್ತಿದ್ದವರು ಈಗ ಜಮೀನು ಮಾಲೀಕರಾಗಿ ಕರ್ನಾಟಕದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಕೇರಳ ಕಾಕಾಗಳ ಹಾವಾಳಿ ಹೆಚ್ಚಾಗಿ ಮೈಸೂರು ಅಷ್ಟೇ ಅಲ್ಲದೆ ಈ ನಾಡಿನ ಸಂಸ್ಕೃತಿ ಹಾಳುಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೈಸೂರು, ಬೆಂಗಳೂರಿನಲ್ಲಿ ಕೇರಳದ ಕಾಕಾಗಳ ಹಾವಳಿಯೇ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆದ ಹಿಂದೂ ಮುಖಂಡರ ಹ೧ತ್ಯೆಗಳ ಹಿಂದೆ ಇರೋದು ಯಾರು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಅವರು, ಕೇರಳದ ಕಾಕಾಗಳು ಹಿಂದೂಗಳ ಹೆಸರಿಟ್ಟುಕೊಂಡು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇಸ್ಮಾಯಿಲ್, ಮುಬಾರಕ್ ಅಂತಾ ನಿಜವಾದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡಲಿ.. ಇವರನ್ನು ಹೀಗೆ ಬಿಟ್ಟರೆ ಭವಿಷ್ಯದಲ್ಲಿ ಎಲ್ಲ ಕಡೆಯೂ ಛೋಟಾ ಜಾರ್ಜ್, ಛೋಟಾ ಹ್ಯಾರಿಸ್‌ಗಳು ಹುಟ್ಟಿಕೊಂಡು ರಾಜಕೀಯ ಸೇರಿ ಶಾಸಕರಾಗುತ್ತಾರೆ. ರಾಜ್ಯದಲ್ಲಿ ಕೇರಳ ಕಾಕಾಗಳು ಹೀಗಿದ್ದಾರೆ. ಆದರೆ ಕೇರಳದಲ್ಲಿ ಕನ್ನಡಿಗರು ಇದೇ ಕಾಕಾಗಳಿಂದ ಅಪಾಯದಲ್ಲಿದ್ದಾರೆ. ಹೀಗಾಗಿ ಕೇರಳದಲ್ಲಾಗಲಿ, ಕರ್ನಾಟಕದಲ್ಲಾಗಲಿ ಹಿಂದೂಗಳು ಜಾತಿ ಹೆಸರಲ್ಲಿ ಛಿದ್ರವಾಗದೆ ಒಂದಾಗಬೇಕು ಎಂದರು.

ಕೇರಳ ಕಾಕಾಗಳಿಂದ ಕೊಡಗು ಅಪಾಯದಲ್ಲಿದೆ

ಕೊಡಗಿನಲ್ಲಿ ಕೇರಳದ ಕಾಕಾಗಳ ಹಾವಳಿ ಹೆಚ್ಚಾಗಿದೆ. ಇಂದು ಕೇರಳಿಗರಿಂದಾಗಿ ಕೊಡಗಿಗೆ, ಕೊಡವರಿಗೆ ಅಪಾಯ ಹೆಚ್ಚಾಗಿದೆ. ಈ ಕೇರಳಿಗರು ಓದಲು ನಮ್ಮಲ್ಲಿ ಯಾಕೆ ಬರುತ್ತಾರೆ? ಇಲ್ಲಿಗೆ ಓದೋಕೆ ಬರೋದು, ಇಲ್ಲಿಯೇ ಕೆಲಸ ಮಾಡೋದು. ಕನ್ನಡಿಗರು ಕೇರಳಕ್ಕೆ ಹೋದರೆ ಅದು ದೇವರ ದರ್ಶನಕ್ಕೆ ಹೊರತು ಕೆಲಸ ಮಾಡಲು ಅಲ್ಲ. ಆದರೆ ಕೇರಳಿಗರು ಅಲ್ಲೇ ಓದು, ಉದ್ಯೋಗ ಮಾಡುವುದು ಬಿಟ್ಟು ಇಲ್ಲಿಗೆ ಬಂದು ನಾಡಿನ ಸಂಸ್ಕೃತಿ ಹಾಳುಗೆಡುವುತ್ತಿದ್ದಾರೆ. ಅಲ್ಲೇ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳು ಮಾಡಿಕೊಂಡಿರಲಿ. ನಮ್ಮಲ್ಲಿಗೆ ಬರುವುದು ಬೇಡ. ಕೇರಳದ ಕಾಕಾಗಳಿಂದ ಇಡೀ ಕರ್ನಾಟಕಕ್ಕೆ ಇಂದು ಕಂಟಕ ಎದುರಾಗಿದೆ. ಕರ್ನಾಟಕವೇನು ನಿರಾಶ್ರಿತರ ತಾಣವಾ? ಎಂದು ಹರಿಹಾಯ್ದರು.