MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಬೆಂಗಳೂರಿನ ಹಲವೆಡೆ 50 ಕೋಟಿಯ ಡ್ರಗ್ಸ್ ಬೇಟೆ: ವಿದೇಶಿ ಫುಟ್ಬಾಲ್ ಆಟಗಾರ ಸೇರಿ ಕೇರಳಿಗರು ಅರೆಸ್ಟ್!

ಬೆಂಗಳೂರಿನ ಹಲವೆಡೆ 50 ಕೋಟಿಯ ಡ್ರಗ್ಸ್ ಬೇಟೆ: ವಿದೇಶಿ ಫುಟ್ಬಾಲ್ ಆಟಗಾರ ಸೇರಿ ಕೇರಳಿಗರು ಅರೆಸ್ಟ್!

ಬೆಂಗಳೂರು ಪೊಲೀಸರು ನಗರದಾದ್ಯಂತ ಸರಣಿ ಕಾರ್ಯಾಚರಣೆ ನಡೆಸಿ, ವಿದೇಶಿ ಪ್ರಜೆಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸುಮಾರು 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಸಾಗಾಟ ಬೆಳಕಿಗೆ ಬಂದಿದೆ.

2 Min read
Author : Gowthami K
Published : Feb 17 2026, 02:27 PM IST
Share this Photo Gallery
  • FB
  • TW
  • Linkdin
  • Whatsapp
16
 ನಗರದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ
Image Credit : Asianet News

ನಗರದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ

ಬೆಂಗಳೂರು ನಗರದಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಗಳು ಭಾರೀ ಯಶಸ್ಸು ಕಂಡಿದ್ದು, ವಿದೇಶಿ ಪ್ರಜೆಗಳು ಸೇರಿದಂತೆ ಹಲವರನ್ನು ಬಂಧಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೋವಿಂದಪುರ, ಅಮೃತಹಳ್ಳಿ, ಹೆಬ್ಬಗೋಡಿ, ಮಹಾಲಕ್ಷ್ಮಿ ಲೇಔಟ್ ಹಾಗೂ ಸಿಸಿಬಿ ಪೊಲೀಸರು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಸುಮಾರು 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಣಿ ಕಾರ್ಯಾಚರಣೆಗಳ ಮೂಲಕ ಬೆಂಗಳೂರು ಪೊಲೀಸರು ಡ್ರಗ್ ಜಾಲದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ. ವಿದೇಶಿ ಪ್ರಜೆಗಳು, ವೃತ್ತಿಪರ ಕ್ರೀಡಾಪಟುಗಳು ಹಾಗೂ ವಿದ್ಯಾವಂತರೂ ಡ್ರಗ್ ಜಾಲದಲ್ಲಿ ತೊಡಗಿರುವುದು ಆತಂಕಕಾರಿ ಸಂಗತಿಯಾಗಿದ್ದು, ಪೊಲೀಸರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

26
ಗೋವಿಂದಪುರ: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಫುಟ್ಬಾಲ್ ಆಟಗಾರನ ಬಂಧನ
Image Credit : Asianet News

ಗೋವಿಂದಪುರ: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಫುಟ್ಬಾಲ್ ಆಟಗಾರನ ಬಂಧನ

ಬೆಂಗಳೂರು ಗೋವಿಂದಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸೌತ್ ಆಫ್ರಿಕಾ ಮೂಲದ ಫುಟ್ಬಾಲ್ ಆಟಗಾರ ಕೊರ್ಲಿ ಡೇನಿಯಲ್ ಎಂಬುವರನ್ನು ಡ್ರಗ್ ಪೆಡ್ಲಿಂಗ್ ಆರೋಪದ ಮೇಲೆ ಬಂಧಿಸಿದ್ದಾರೆ. ಆರೋಪಿ ಸ್ಪೋರ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದನು. ಆಗಾಗ ಕೇರಳದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಈತ, ಜೀವನ ಸಾಗಿಸಲು ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತನಿಂದ ₹4.48 ಲಕ್ಷ ಮೌಲ್ಯದ 56 ಗ್ರಾಂ MDMA ಕ್ರಿಸ್ಟಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ನಗರದಲ್ಲಿ ಕ್ರೀಡಾಪಟುಗಳ ಹೆಸರಿನಲ್ಲೂ ಡ್ರಗ್ ಜಾಲ ಸಕ್ರಿಯವಾಗಿದೆ ಎಂಬ ಆತಂಕವನ್ನು ಮೂಡಿಸಿದೆ.

Related Articles

Related image1
ಮೈಸೂರು: ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ ಮೈಸೂರು ಪೊಲೀಸರು! ಕೆಮಿಕಲ್ ಫ್ಯಾಕ್ಟರಿ ಮೇಲೆ ದಾಳಿ
Related image2
ಮೈಸೂರು ಡ್ರಗ್ಸ್ ತಯಾರಿಕೆಗೆ ‘ಸೇಫ್ ಜೋನ್’ ಆಗುತ್ತಿದೆಯೇ? ಯಾಂದಹಳ್ಳಿ ಬಳಿ ದಂಪತಿಯ ಘಟಕ ಪತ್ತೆ!
36
 ಅಮೃತಹಳ್ಳಿ : ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಹೈಡ್ರೋ ಗಾಂಜಾ ಸಾಗಾಟ
Image Credit : Asianet News

ಅಮೃತಹಳ್ಳಿ : ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಹೈಡ್ರೋ ಗಾಂಜಾ ಸಾಗಾಟ

ಅಮೃತಹಳ್ಳಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಏರ್‌ಪೋರ್ಟ್‌ನಲ್ಲಿ ತಪ್ಪಿಸಿಕೊಂಡಿದ್ದ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಲೇಸ್ ಹಾಗೂ ಕಿಟ್‌ಕ್ಯಾಟ್ ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಹೈಡ್ರೋ ಗಾಂಜಾ ಮರೆಮಾಚಿ ಸಾಗಾಟ ಮಾಡುತ್ತಿದ್ದರು. ಥಾಯ್ಲೆಂಡ್‌ನಿಂದ ಹೈಡ್ರೋ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮಾಜಿದ್ ಮತ್ತು ಆಝಾದ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹5 ಕೋಟಿ ಮೌಲ್ಯದ 5 ಕೆಜಿ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ವಿಮಾನ ಪ್ರಯಾಣದ ವೇಳೆ ಯಾರಿಗೂ ಅನುಮಾನ ಬಾರದಂತೆ ಕುರುಕು ತಿಂಡಿ ಪ್ಯಾಕೆಟ್‌ಗಳಲ್ಲಿ ಗಾಂಜಾ ಪ್ಯಾಕ್ ಮಾಡಲಾಗುತ್ತಿತ್ತು. ಇದೇ ತಂತ್ರ ಬಳಸಿ ಈ ಆರೋಪಿಗಳು ಹಲವು ಬಾರಿ ಥಾಯ್ಲೆಂಡ್‌ನಿಂದ ಡ್ರಗ್ಸ್ ತರಿಸಿಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

46
 ಹೆಬ್ಬಗೋಡಿ : ವಿದೇಶಿ ಡ್ರಗ್ ಪೆಡ್ಲರ್ ಬಂಧನ
Image Credit : Asianet News

ಹೆಬ್ಬಗೋಡಿ : ವಿದೇಶಿ ಡ್ರಗ್ ಪೆಡ್ಲರ್ ಬಂಧನ

ಹೆಬ್ಬಗೋಡಿ ಪೊಲೀಸರು ನಡೆಸಿದ ದಾಳಿಯಲ್ಲಿ ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಎಂಬ ವಿದೇಶಿ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟಾರೆ ₹1.5 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ 29 LSD ಮಾತ್ರೆಗಳು, 27 LSD ಸ್ಟ್ರಿಪ್ಸ್, 546 ಗ್ರಾಂ MDMA, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್ ಸೇರಿವೆ. ಆರೋಪಿ ಇದು ಎರಡನೇ ಬಾರಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದು, ಈ ಹಿಂದೆ ಗಡಿಪಾರು ಮಾಡಲಾಗಿತ್ತು. ಆದರೆ ಮತ್ತೊಂದು ಹೆಸರಿನಲ್ಲಿ ದಾಖಲೆ ಮಾಡಿಕೊಂಡು ಮತ್ತೆ ಭಾರತಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ಸದ್ಯ ದಾಖಲೆಗಳು ಹೇಗೆ ಸಿದ್ಧವಾದವು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

56
ಸಿಸಿಬಿ ಪೊಲೀಸರ ದಾಳಿ: 11 ಕೋಟಿ ಮೌಲ್ಯದ MDMA ಸೀಜ್
Image Credit : Asianet News

ಸಿಸಿಬಿ ಪೊಲೀಸರ ದಾಳಿ: 11 ಕೋಟಿ ಮೌಲ್ಯದ MDMA ಸೀಜ್

ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ರಾಹಿಂ ಎಂಬ ವಿದೇಶಿ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹11 ಕೋಟಿ ಮೌಲ್ಯದ 5 ಕೆಜಿ MDMA ವಶಕ್ಕೆ ಪಡೆಯಲಾಗಿದೆ. ಆರೋಪಿ ಈ ಹಿಂದೆ ಮಾರತ್ತಹಳ್ಳಿ, ದೆಹಲಿ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದನು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ಡ್ರಗ್ ವ್ಯವಹಾರಕ್ಕೆ ಇಳಿದಿದ್ದಾನೆ. ಈತ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

66
ಮಹಾಲಕ್ಷ್ಮಿ ಲೇಔಟ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿದ್ದ ಗಾಂಜಾ ಪೆಡ್ಲರ್
Image Credit : Asianet News

ಮಹಾಲಕ್ಷ್ಮಿ ಲೇಔಟ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿದ್ದ ಗಾಂಜಾ ಪೆಡ್ಲರ್

ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ಅನಂತ ಎಂಬ ಗಾಂಜಾ ಪೆಡ್ಲರ್ ಅನ್ನು ಬಂಧಿಸಿದ್ದಾರೆ. ಆರೋಪಿಯಿಂದ ಅಂದಾಜು 30 ಕೋಟಿ ಮೌಲ್ಯದ 30 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಗಾಂಜಾವನ್ನು ವಿಶಾಖಪಟ್ಟಣಂನಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅನಂತ ಬಿಕಾಂ ಪದವೀಧರನಾಗಿದ್ದು, ಎಐ ವಿಡಿಯೋ ಡೆವಲೊಪರ್ ಆಗಿ ಉತ್ತಮ ಸಂಬಳದ ಉದ್ಯೋಗದಲ್ಲಿದ್ದರೂ, ಹೆಚ್ಚುವರಿ ಹಣದ ಆಸೆಗೆ ಗಾಂಜಾ ಪೆಡ್ಲಿಂಗ್‌ಗೆ ಇಳಿದಿದ್ದಾನೆ. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಈತನನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಔಷಧಿ
ಕ್ರೈಮ್ ನ್ಯೂಸ್
ಪೊಲೀಸ್

Latest Videos
Recommended Stories
Recommended image1
ರಾಜ್ಯದ ಕೈ ಶಾಸಕರು ಹಾಗೂ ಸಚಿವರ ವಿದೇಶ ಪ್ರವಾಸ: ಎಲ್ಲರ ಗುಟ್ಟು ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ!
Recommended image2
10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ
Recommended image3
US Ambassador: ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಮೆರಿಕ ರಾಯಭಾರಿ; ಬೆಂಗಳೂರೇ ಇಂಡೋ-ಯುಎಸ್ ಸಂಬಂಧದ ಕಿರೀಟ!
Related Stories
Recommended image1
ಮೈಸೂರು: ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ ಮೈಸೂರು ಪೊಲೀಸರು! ಕೆಮಿಕಲ್ ಫ್ಯಾಕ್ಟರಿ ಮೇಲೆ ದಾಳಿ
Recommended image2
ಮೈಸೂರು ಡ್ರಗ್ಸ್ ತಯಾರಿಕೆಗೆ ‘ಸೇಫ್ ಜೋನ್’ ಆಗುತ್ತಿದೆಯೇ? ಯಾಂದಹಳ್ಳಿ ಬಳಿ ದಂಪತಿಯ ಘಟಕ ಪತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved