Asianet Suvarna News Asianet Suvarna News

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ಮಂಡ್ಯ​ದಂತೆ ರಾಮ​ನ​ಗ​ರ​ದ​ಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆಯಿತು. ನಾನು ಸೋತಿದ್ದಕ್ಕೆ ನೀವ್ಯಾರು ಎದೆಗುಂದಬೇಡಿ. ರಾಮ​ನ​ಗರ ಕ್ಷೇತ್ರ​ದಲ್ಲಿಯೇ ನಾನು ರಾಜ​ಕೀಯ ಮರು​ ಜನ್ಮ ಪಡೆ​ಯು​ತ್ತೇನೆ ಎಂದು ಜೆಡಿ​ಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು.

Politics is reborn in Ramanagara constituency itself Says Nikhil Kumaraswamy gvd
Author
First Published May 19, 2023, 8:44 PM IST

ರಾಮ​ನ​ಗರ (ಮೇ.19): ಮಂಡ್ಯ​ದಂತೆ ರಾಮ​ನ​ಗ​ರ​ದ​ಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆಯಿತು. ನಾನು ಸೋತಿದ್ದಕ್ಕೆ ನೀವ್ಯಾರು ಎದೆಗುಂದಬೇಡಿ. ರಾಮ​ನ​ಗರ ಕ್ಷೇತ್ರ​ದಲ್ಲಿಯೇ ನಾನು ರಾಜ​ಕೀಯ ಮರು​ ಜನ್ಮ ಪಡೆ​ಯು​ತ್ತೇನೆ ಎಂದು ಜೆಡಿ​ಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು. ರಾಮನಗರ ಕ್ಷೇತ್ರದ ಮತದಾರರ ಕೃತ​ಜ್ಞತಾ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ನಾನು ಮಂಡ್ಯ ಅಥವಾ ಮೈಸೂರು ಜಿಲ್ಲೆಗೆ ಹೋಗು​ವು​ದಿಲ್ಲ. ರಾಮ​ನ​ಗರ ಕ್ಷೇತ್ರ​ದಲ್ಲಿ ಸೋತಿ​ದ್ದೇನೆ. ಈ ಕ್ಷೇತ್ರ​ದಿಂದಲೇ ಗೆದ್ದು ರಾಜ​ಕೀಯ ಜೀವನ ಆರಂಭಿ​ಸು​ತ್ತೇನೆ ಎಂದು ಪಕ್ಷದ ಕಾರ್ಯ​ಕ​ರ್ತರಲ್ಲಿ ಧೈರ್ಯ ತುಂಬಿ​ದ​ರು.

ಚುನಾ​ವ​ಣೆ​ಗ​ಳಲ್ಲಿ ದೇವೇ​ಗೌಡ, ವಾಜ​ಪೇಯಿ, ಕುಮಾ​ರ​ಸ್ವಾಮಿ ಅವ​ರಂತಹ ಘಟಾನುಘಟಿಗಳೇ ಸೋಲು ಕಂಡವರು. ಇನ್ನು ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಆದರೆ, ನನ್ನ ಸೋಲಿಗೆ ಕುತಂತ್ರ ರಾಜ​ಕಾ​ರಣ ಒಂದು ಭಾಗ​ವಾ​ಯಿತು. ನಮ್ಮ​ಲ್ಲಿನ ಕೆಲ ಲೋಪ​ದೋ​ಷ​ಗಳನ್ನು ಸರಿ​ಪ​ಡಿ​ಸಿ​ಕೊ​ಳ್ಳ​ಬೇ​ಕಿದೆ. ನಾನು ಶಾಸಕ ಆಗ​ಲೇ​ಬೇ​ಕೆಂದು ಆಸೆ​ ಪಟ್ಟವ​ನಲ್ಲ. ದೇವೇ​ಗೌಡ ಮತ್ತು ಕುಮಾ​ರ​ಸ್ವಾ​ಮಿ ಆಶೀ​ರ್ವಾ​ದ​ದಿಂದ 10 ವರ್ಷ​ಗಳ ಹಿಂದೆಯೇ ಶಾಸ​ಕ​ನಾ​ಗು​ತ್ತಿದ್ದೆ. ನನಗೆ ಶಾಸಕ ಅಧಿ​ಕಾರ ಇಲ್ಲ​ದಿ​ರ​ಬ​ಹುದು. ಚುನಾ​ವಣೆಯಲ್ಲಿ ಸೋತಿ​ರ​ಬ​ಹುದು ಜನರ ಪ್ರೀತಿ ವಿಶ್ವಾ​ಸಕ್ಕೆ ಕೊರತೆ ಆಗ​ಲಿಲ್ಲ. ದೇವೇ​ಗೌ​ಡರ ಬಳಿ ಬಿ ಫಾರಂ ಪಡೆ​ಯು​ವಾಗ ಕಣ್ಣೀರು ಹಾಕಿದ್ದೆ. 

ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!

ಸೋತ ನಂತರ ಕಣ್ಣೀರು ಹಾಕ​ಲಿಲ್ಲ. ಕಣ್ಣೀರು ಹಾಕು​ವು​ದ​ರಿಂದ ಏನು ಪ್ರಯೋ​ಜನ ಆಗಲ್ಲ. ರಾಮ​ನ​ಗರ ಜಿಲ್ಲೆ​ ಮಾತ್ರವಲ್ಲ. ಹಳೇ ಮೈಸೂರು ಭಾಗ ಹಾಗೂ ಕಲ್ಯಾಣ ಕರ್ನಾ​ಟಕ ಭಾಗ​ದ​ಲ್ಲಿ ಪಕ್ಷ ಸಂಘ​ಟ​ನೆ​ಗಾಗಿ ಮತ್ತೆ ಪ್ರವಾಸ ಆರಂಭಿ​ಸು​ತ್ತೇನೆ ಎಂದು ನಿಖಿಲ್‌ ಹೇಳಿ​ದರು. 1994ರಲ್ಲಿ ದೇವೇ​ಗೌ​ಡರು, 2004, 2008, 2013ರವ​ರೆಗೆ ಕುಮಾ​ರ​ಸ್ವಾಮಿ ಹಾಗೂ 2018ರಲ್ಲಿ ಅನಿ​ತಾ​ಕುಮಾರಸ್ವಾಮಿ ಕ್ಷೇತ್ರ ಪ್ರತಿ​ನಿ​ಧಿ​ಸಿ​ದ​ರು. ರಾಮ​ನ​ಗ​ರ​ವನ್ನು ಜಿಲ್ಲೆ​ಯಾಗಿ ಘೋಷಣೆ ಮಾಡಿ​ದರು. ಆಡ​ಳಿತ ಭವನ, ವಿವಿಧ ಕಾಲೇ​ಜು​ಗಳು ತಲೆ ಎತ್ತಿ​ದ​ವು. ಹಾರೋ​ಹ​ಳ್ಳಿ​ಯನ್ನು ತಾಲೂಕು ಘೋಷಣೆ ಮಾಡಿ​ಸಿ​ದರು. ಕ್ಷೇತ್ರ​ದಲ್ಲಿ ಅಭಿ​ವೃದ್ಧಿ ಕಾರ್ಯ​ಗಳಿಗೆ ಕೊರತೆ ಇರ​ಲಿಲ್ಲ. ಮತ​ದಾ​ರರು ಇದ್ಯಾ​ವು​ದನ್ನು ಪರಿ​ಗ​ಣಿ​ಸ​ಲಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

ಕುಮಾ​ರ​ಸ್ವಾ​ಮಿ​ರ​ವರು ಅನೇಕ ಕ್ಷೇತ್ರ​ದಲ್ಲಿ ಪಂಚ​ರತ್ನ ಯಾತ್ರೆ​ಯಲ್ಲಿ ತೊಡ​ಗಿ​ದ್ದರು. ರಾಮ​ನ​ಗರದಲ್ಲಿ ಕುತಂತ್ರ ರಾಜ​ಕಾ​ರಣ ನಡೆ​ಯು​ತ್ತಿ​ರು​ವು​ದನ್ನು ತಿಳಿದು ಅವ​ರೊಂದಿಗೆ ಪ್ರವಾ​ಸಕ್ಕೆ ಹೋಗದೆ ಕಾರ್ಯ​ಕ​ರ್ತ​ರಿಗೆ ಹಿನ್ನಡೆ ಆಗ​ಬಾ​ರ​ದೆಂಬ ಉದ್ದೇ​ಶ​ದಿಂದ ಕ್ಷೇತ್ರ​ದ​ಲ್ಲಿಯೇ ಉಳಿ​ದು​ಕೊಂಡಿದ್ದೆ. ನನ್ನ ಸೋಲನ್ನು ನಾನು ಮಾತ್ರ​ವಲ್ಲ ನಾಡಿನ ಜನರು ನಿರೀಕ್ಷೆ ಮಾಡಿ​ರ​ಲಿಲ್ಲ. ಜನರು ತೀರ್ಪಿಗೆ ತಲೆ​ಬಾಗುತ್ತೇನೆ. ಕ್ಷೇತ್ರದ ಮತ​ದಾ​ರರು ಸ್ವಾಭಿ​ಮಾ​ನಿ​ಗಳು. ಆದರೆ, ಕಾಂಗ್ರೆಸ್‌ ಗಿಫ್‌್ಟ ಕಾರ್ಡ್‌ ನೀಡಿ ಆಮಿ​ಷ​ವೊ​ಡ್ಡಿ​ ದಾರಿ ತಪ್ಪಿ​ಸಿ​ದರು. ಆ ಹಣ​ವಾ​ದರು ಜನ​ರ ಕೈಗೆ ತಲು​ಪಿ​ಸುವ ಕೆಲ​ಸ​ ಮಾಡಲಿ ಎಂದರು.

ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್‌

ರಾಮ​ನ​ಗರ ಕ್ಷೇತ್ರ ಚುನಾವಣೆ ಫಲಿತಾಂಶ ಪ್ರತಿಯೊಬ್ಬರಿಗೂ ಆಘಾತ ನೀಡಿದೆ. ಇದ​ರಿಂದ ಕಾರ್ಯ​ಕ​ರ್ತರು ಧೃತಿಗೆಡಬೇಡಿ. ನೀವೆ​ಲ್ಲ​ರು ಶಕ್ತಿ ಮೀರಿ ಪ್ರಾಮಾಣಿಕವಾಗಿ ಹೋರಾಡಿದ್ದೀರಿ. ಪಕ್ಷ ಹಾಗೂ ವೈಯಕ್ತಿಕವಾಗಿ ಸೋತಿರಬಹುದು. ತಾಯಂದಿರ ಆಶೀ​ರ್ವಾದ, ಯುವಕರ ಸಹ​ಕಾರ ಮತ್ತು ಪ್ರೀತಿಗೆ ಕೊರತೆ ಇಲ್ಲ. ಅದನ್ನು ಮರೆ​ಯಲು ಎಂದಿಗೂ ಸಾಧ್ಯ​ವಿಲ್ಲ. ನನ್ನ ಸೋಲಿಗೆ ಪಕ್ಷಾ​ತೀ​ತ​ವಾಗಿ ಎಲ್ಲೆ​ಡೆ​ಯಿಂದ ಬೇಸರ ವ್ಯಕ್ತ​ವಾ​ಗಿ​ದೆ.
- ನಿಖಿಲ್‌, ರಾಜ್ಯಾ​ಧ್ಯ​ಕ್ಷರು, ಜೆಡಿ​ಎಸ್‌ ಯುವ ಘಟಕ

Follow Us:
Download App:
  • android
  • ios