ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಇದೀಗ ರಾಜಸ್ಥಾನ ರಾಜಕೀಯಕ್ಕೆ ರಂಗಪ್ರವೇಶ

ನವದೆಹಲಿ (ನ.12) : ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ಇದೀಗ ರಾಜಸ್ಥಾನ ರಾಜಕೀಯಕ್ಕೆ (Politics) ರಂಗಪ್ರವೇಶ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ (Ashok Gehlot) ಮತ್ತು ಯುವ ನಾಯಕ ಸಚಿನ್‌ ಪೈಲಟ್‌ (Sachin pilot) ಬಣದ ಮುಸುಕಿನ ಗುದ್ದಾಟ, ಪಕ್ಷಕ್ಕೆ ಮುಳುವಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಿರುವ ಪ್ರಿಯಾಂಕಾ (Priyanka), ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ತಕ್ಷಣವೇ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಅದರಲ್ಲಿ ಸಚಿನ್‌ ಬಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗೆಹ್ಲೋಟ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ರಾಹುಲ್‌ (Rahul Gandhi) ನಿವಾಸದಲ್ಲೇ ಸಭೆ ನಡೆದರೂ, ರಾಹುಲ್‌ ಗಾಂಧಿ ಗೈರಾಗಿದ್ದರು ಎನ್ನಲಾಗಿದೆ.

ಈ ಹಿಂದೆ ಉತ್ತರಪ್ರದೇಶ (Uttara pradesh) ಕಾಂಗ್ರೆಸ್‌ ಕೈತಪ್ಪಿತ್ತು. ಬಳಿಕ ರಾಹುಲ್‌ ವಿಳಂಬ ನೀತಿಗಳಿಂದ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ (Congress) ಸರ್ಕಾರ ಪತನವಾಗಿತ್ತು. ಪಂಜಾಬ್‌ನಲ್ಲೂ (Punjab) ಬಿಕ್ಕಟ್ಟು ಉಂಟಾಗಿತ್ತು. ರಾಜಸ್ಥಾನದಲ್ಲೂ ಹೆಚ್ಚು ಕಡಿಮೆ ಅದೇ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ರಾಹುಲ್‌ ನಿರ್ಧಾರಕ್ಕೆ ಕಾಯದೇ ಸ್ವತಃ ತಾವೇ ನಿರ್ಧಾರ ಕೈಗೊಳ್ಳಲು ಪ್ರಿಯಾಂಕಾ ಮುಂದಾಗಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಈ ನಾಲ್ಕೂ ರಾಜ್ಯಗಳಲ್ಲಿ ಪಕ್ಷದ ಈ ಸ್ಥಿತಿಗೆ ರಾಹುಲ್‌ ಕಾರಣ ಎಂಬ ಆರೋಪವಿದೆ.

ಉದ್ಯೋಗಕ್ಕೆಂದು ಪ್ರತ್ಯೇಕ ಸಚಿವಾಲಯ : 

 ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ. ಕಾಂಗ್ರೆಸ್ ಗೆದ್ದು ಬಂದರೆ ಉದ್ಯೋಗಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ನೀಡಿದೆ ಕಾಂಗ್ರೆಸ್.

ಪಬ್ಲಿಕ್ ಸೆಕ್ಟರ್ನಲ್ಲಿ 5 ಲಕ್ಷ ಉದ್ಯೋಗ ಮತ್ತು ಪ್ರೈವೇಟ್ ಸೆಕ್ಟರ್ನಲ್ಲಿ ಸುಮಾರು 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದೆ ಕಾಂಗ್ರೆಸ್.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!

ಇತ್ತೀಚೆಗೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಪಕ್ಷದ 5 ಭರವಸೆ ಅಭಿಯಾನವನ್ನು ಲಾಂಚ್ ಮಾಡಿದ್ದರು. ತೇಝ್ಪುರನಲ್ಲಿ ಚುನಾವಣೆ ಪ್ರಚಾರ ಸಂದರ್ಭ ಇದನ್ನು ಲಾಂಚ್ ಮಾಡಿದ್ದರು ಪ್ರಿಯಾಂಕ.

ಸಿಎಎ ರದ್ದು ಮಾಡುವ ಕಾನೂನು, 5 ಲಕ್ಷ ಸರ್ಕಾರಿ ಕೆಲಸ, ಚಹಾ ಕೆಲಸಗಾರರ ವೇತನ 365ಕ್ಕೆ ಏರಿಸುವುದು, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಮಾಸಿಕ ವೇತನ ಇವು ಕಾಂಗ್ರೆಸ್ ನೀಡಿದ ಭರವಸೆಗಳು.

ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ

ಪ್ರಚಾರ ಅಭಿಯಾನದಲ್ಲಿ ಮತ್ತೊಮ್ಮೆ ಭರವಸೆಗಳ ಕುರಿತು ಮಾತನಾಡಿ ಇದು ಪ್ರಾಮಿಸ್ ಅಲ್ಲ, ಗ್ಯಾರಂಟಿ ಎಂದು ಹೇಳಿದ್ದಾರೆ. ಈ ಭರವಸೆಗಳಿಗೆ ಸಂಬಂಧಿಸಿದ ಎಲ್ಲಾ ಹೋಂವರ್ಕ್ಗಳೂ ಮುಗಿದಿವೆ. ಅನುಷ್ಠಾನಕ್ಕೆ ಬೇಕಾದ ಕಾರ್ಯಗಳನ್ನು ಮುಗಿಸುತ್ತಿದ್ದೇವೆ ಎಂದಿದ್ದಾರೆ.

ಯುವ ಜನರು ಉದ್ಯೋಗವಿಲ್ಲದೆ ಕಷ್ಟಪಡುತ್ತಿದ್ದಾರೆ. ಸಿಕ್ಕಿದವರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟೋರು ಸಿಎಎ ಕೊಟ್ಟಿದ್ದಾರೆ ಎಂದಿದ್ದಾರೆ.

ಇದೇ ಅಭಿಯಾನದಲ್ಲಿ ಕಾಂಗ್ರೆಸ್ ಆನ್ಲೈನ್ ಉದ್ಯೋಗ ನೋಂದಣಿ ವೆಬ್ಸೈಟ್ ಆರಂಭಿಸಿದೆ. www.congressor5guarantee.in. ನಲ್ಲಿ ನೋಂದಣಿ ಮಾಡಬಹುದಾಗಿದೆ.

  • ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆ
  •  ರಾಜಸ್ಥಾನದಲ್ಲಿ ಸರ್ಕಾರ ಉಳಿಸಲು ಪ್ರಿಯಾಂಕಾ ವಾದ್ರಾ ರಂಗಪ್ರವೇಶ
  • ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಇದೀಗ ರಾಜಸ್ಥಾನ ರಾಜಕೀಯಕ್ಕೆ ರಂಗಪ್ರವೇಶ