Asianet Suvarna News Asianet Suvarna News

ಉಪಸಮರದಲ್ಲಿ ಬಿಜೆಪಿ ಮೇಲುಗೈ: ಹಿಮಾಚಲ, ಪ. ಬಂಗಾಳದಲ್ಲಿ ಹಾನಿ!

* ಉಪಸಮರ: ಬಿಜೆಪಿ ಮೇಲುಗೈ ಉಪಸಮರ: ಬಿಜೆಪಿ ಮೇಲುಗೈ

* 29 ವಿಧಾನಸಭಾ ಸ್ಥಾನದಲ್ಲಿ ಬಿಜೆಪಿಗೆ 13ರಲ್ಲಿ ಜಯ

* ಬಿಜೆಪಿ, ಸೇನೆ, ಕಾಂಗ್ರೆಸ್‌ಗೆ ತಲಾ 1 ಲೋಕ ಸ್ಥಾನ

TMC sweeps Bengal Cong in Himachal and Rajasthan BJP holds MP pod
Author
Bangalore, First Published Nov 3, 2021, 10:21 AM IST

 

ನವದೆಹಲಿ(ನ.03): 13 ರಾಜ್ಯಗಳ 29 ವಿಧಾನಸಭೆ (Assembly Eletions) ಮತ್ತು 3 ಲೋಕಸಭೆ ಕ್ಷೇತ್ರಗಳಿಗೆ (Loksabha Seats) ನಡೆದ ಉಪ ಚುನಾವಣೆ /(By Election) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 29 ವಿಧಾನಸಭಾ ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ ಹಾಗೂ ಮಿತ್ರರು ಗೆದ್ದು ಮೇಲುಗೈ ಸಾಧಿಸಿದ್ದಾರೆ. 8ರಲ್ಲಿ ಕಾಂಗ್ರೆಸ್‌ (Congress) ಗೆಲುವು ಸಾಧಿಸಿದ್ದರೆ, 8 ಸ್ಥಾನ ಇತರೆ ಪಕ್ಷಗಳ ಪಾಲಾಗಿವೆ. ಈ ಪೈಕಿ ಬಂಗಾಳ ಹಾಗೂ ಹಿಮಾಚಲದಲ್ಲಿ (Himachal Pradesh) ಬಿಜೆಪಿಗೆ (BJP) ಹಿನ್ನಡೆ ಆಗಿದೆ. ಇನ್ನು 3 ಲೋಕಸಭಾ ಕ್ಷೇತ್ರಗಳ ಪೈಕಿ ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್‌ನಲ್ಲಿ ಮೊದಲ ಬಾರಿ ಶಿವಸೇನೆ, ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ಇಲ್ಲಿ ಬಿಜೆಪಿಗೆ 1 ಸ್ಥಾನ ನಷ್ಟವಾಗಿದೆ.

ಬಂಗಾಳ: ದೀದಿ ಮೇಲುಗೈ, ಬಿಜೆಪಿಗೆ ಸೋಲು

ಪಶ್ಚಿಮ ಬಂಗಾಳದಲ್ಲಿ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶದಿಂದಾಗಿ ಬಿಜೆಪಿಗೆ 2 ಕ್ಷೇತ್ರ ನಷ್ಟವಾಗಿದ್ದು, ಟಿಎಂಸಿಗೆ 2 ಕ್ಷೇತ್ರ ಲಾಭವಾಗಿದೆ. ದಿನ್ಹಾಟ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಉದಯನ್‌ 1.63 ಲಕ್ಷ, ಗೋಸಬಾ ಕ್ಷೇತ್ರದಲ್ಲಿ 1.43 ಲಕ್ಷ ಮತಗಳ ಅಂತರದಿಂದ ಟಿಎಂಸಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ. 4ರ ಪೈಕಿ 3ರಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ.

ಹಿಮಾಚಲದ ಎಲ್ಲ 4 ಕ್ಷೇತ್ರ ಕಾಂಗ್ರೆಸ್‌ಗೆ

ಹಿಮಾಚಲ ಪ್ರದೇಶದ ಫತೇಪುರ, ಜುಬ್ಬಲ್‌-ಕೊಟ್ಟಾಯ್‌ ಮತ್ತು ಆರ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಈ 3 ಕ್ಷೇತ್ರಗಳ ಪೈಕಿ 2 ಹಿಂದೆಯೂ ಕಾಂಗ್ರೆಸ್‌ ಬಳಿಯೇ ಇದ್ದವು. ಕಾಂಗ್ರೆಸ್‌ಗೆ 1 ಕ್ಷೇತ್ರ ಹೆಚ್ಚುವರಿಯಾಗಿ ಲಭಿಸಿದೆ. ಬಿಜೆಪಿಗೆ 1 ಕ್ಷೇತ್ರ ನಷ್ಟವಾಗಿದೆ. ಇನ್ನು ಹಿಮಾಚಲದ ಮಂಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಜಿ ಸಿಎಂ ವೀರಭದ್ರ ಸಿಂಗ್‌ರ ಪತ್ನಿ ಪ್ರತಿಭಾ ಸಿಂಗ್‌ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ಕಾರ್ಗಿಲ್‌ ವೀರ ನಿವೃತ್ತ ಬ್ರಿಗೇಡಿಯರ್‌ ಕುಶಾಲ್‌ ಠಾಕೂರ್‌ ವಿರುದ್ಧ ಜಯಿಸಿದ್ದಾರೆ.

ರಾಜಸ್ಥಾನ: ಕಾಂಗ್ರೆಸ್‌ಗೆ 2 ಸ್ಥಾನ

ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಎರಡೂ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಬಿಜೆಪಿಯ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ಪಾಲಾಗಿಸಿಕೊಂಡಿದೆ.

ಅಸ್ಸಾಂ ಬಿಜೆಪಿಗೆ 4 ಸ್ಥಾನ ಲಾಭ

ಅಸ್ಸಾಂನಲ್ಲಿ ಕಣಕ್ಕಿಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿದ್ದು, ಇನ್ನುಳಿದ 2 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಯುಪಿಪಿಎಲ್‌ ಪಕ್ಷದ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಅಸ್ಸಾಂನ ಈ 5 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಮಾತ್ರ ಎನ್‌ಡಿಎ ಮೈತ್ರಿ ಕೂಟದಲ್ಲಿತ್ತು. ಉಳಿದ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದುಕೊಂಡಿದೆ.

ಹರಾರ‍ಯಣದಲ್ಲಿ ಚೌಟಾಲಾಗೆ ಗೆಲುವು:

ಹರ್ಯಾಣದ ಎಲ್ಲೆನಾಬಾದ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳದ ಅಭಯ್‌ ಸಿಂಗ್‌ ಚೌಟಾಲಾ, ಬಿಜೆಪಿಯ ಗೋವಿಂದ್‌ ಕಾಂಡಾ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ ಈ ಸೀಟು ಪುನಃ ಆರ್‌ಎಲ್‌ಡಿಗೆ ದಕ್ಕಿದೆ.

ಬಿಹಾರ, ತೆಲಂಗಾಣ, ಮ.ಪ್ರ.ದಲ್ಲಿ ಬಿಜೆಪಿಗೆ ಲಾಭ:

ಬಿಹಾರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಜೆಡಿಯು ಗೆಲುವು ಸಾಧಿಸಿದೆ. ಈ ಹಿಂದೆಯೂ ಈ ಎರಡೂ ಕ್ಷೇತ್ರಗಳು ಜೆಡಿಯು ಬಳಿಯೇ ಇದ್ದವು. ಅದೇ ರೀತಿ ಮಧ್ಯಪ್ರದೇಶದ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇಲ್ಲಿ ಬಿಜೆಪಿಗೆ 1 ಸ್ಥಾನ ಲಾಭವಾಗಿದೆ. ಕಾಂಗ್ರೆಸ್‌ಗೆ 1 ನಷ್ಟವಾಗಿದೆ. ಇನ್ನು ತೆಲಂಗಾಣದ ಟಿಆರ್‌ಎಸ್‌ ವ್ಯಾಪ್ತಿಯಲ್ಲಿದ್ದ ಒಂದು ಕ್ಷೇತ್ರವು ಬಿಜೆಪಿ ಮಡಿಲಿಗೆ ಜಾರಿದೆ.

ಮೇಘಾಲಯ, ಮಿಜೋರಂ

ಮೇಘಾಲಯದ ರಾಜಬಲ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಫುಟ್ಬಾಲ್‌ ಆಟಗಾರ ಯುಗೆನೆಸಾನ್‌ ಲಿಂಗ್ಡಾಹ್‌ ಅವರು ಜಯಿಸಿದ್ದಾರೆ. ಮಿಜೋರಾಂನ 1 ಸ್ಥಾನದಲ್ಲಿ ಎನ್‌ಡಿಎ ಮೈತ್ರಿಕೂಟದ ಎಂಎನ್‌ಎಫ್‌ ಪಕ್ಷ ಜಯಿಸಿದೆ.

Follow Us:
Download App:
  • android
  • ios