ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ
ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವಂತೆ ದೀದಿ ಹೊಸ ಟ್ರಿಕ್ | 5 ರೂಪಾಯಿಯ ಮಾ ಕ್ಯಾಂಟೀನ್ ಆರಂಭ
ಕೊಲ್ಕತ್ತಾ(ಮಾ.05): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾ ಕ್ಯಾಂಟೀನ್ ಯೋಜನೆ ಆರಂಭಿಸಿದ್ದಾರೆ. ಫೆಬ್ರವರಿಯಲ್ಲಿ ಯೋಜನೆ ಲಾಂಚ್ ಮಾಡಲಾಗಿದೆ.
ಇದೀಗ ಮಾ ಕ್ಯಾಂಟೀನ್ನಲ್ಲಿ 5 ರೂಪಾಯಿಗೆ ಆಹಾರ ಒದಗಿಸಲಾಗುತ್ತಿದೆ. ಕ್ಯಾಂಟೀನ್ಗಳು 12.30 ರಿಂದ 3 ಗಂಟೆಯ ತನಕ ತೆರೆದಿರಲಿದೆ. ಅನ್ನ, ದಾಲ್, ಸಾರು, ಮೊಟ್ಟೆ ಸಾರನ್ನೂ ನೀಡಲಾಗುತ್ತಿದೆ. ಕ್ಯಾಂಟೀನ್ ಭಾರೀ ಫೇಮಸ್ ಆಗಿದ್ದು ಕ್ಯಾಂಟೀನ್ ಮುಚ್ಚುವ ಮುನ್ನವೇ ಆಹಾರ ಖಾಲಿಯಾಗುತ್ತಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!
ಆಹಾರ ಚೆನ್ನಾಗಿದೆ. ನಾವೆಲ್ಲರೂ ಆಹಾರ 5 ರೂಪಾಯಿಗೆ ಪಡೆಯುತ್ತಿದ್ದೇವೆ. ಇಲ್ಲದಿದ್ದರೆ ಪ್ರತಿದಿನ ಊಟಕ್ಕೆ 35 ರೂಪಾಯಿ ವ್ಯಯಿಸುತ್ತಿದೆ. ಈಗ ಹೆಚ್ಚು ಹಣ ಸೇವ್ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಜಾಕಿರ್ ನಾಸ್ಕರ್.
ಆಹಾರ ಪಡೆಯಲು ಸಾಲಿನಲ್ಲಿದ್ದ ಇತರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಈ ಯೋಜನೆ ಅನುಷ್ಠಾನಗೊಳಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಶ್ಲಾಘಿಸಿ ಆಹಾರ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.
ಚಿನ್ನ ಸಾಲ ಮನ್ನಾ: ಚುನಾವಣೆ ಪ್ರಕಟಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಭರ್ಜರಿ ಗಿಫ್ಟ್!
ಟಿಎಂಸಿ ಎಂಪಿ ಪ್ರತಿಕ್ರಿಯಿಸಿ ಇದು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆ ಎಂದಿದ್ದಾರೆ. ಚುನಾವಣೆ ಸಮೀಪಿಸುವಾಗಲೇ ಯೋಜನೆ ಆರಂಭಿಸಿದ್ದರ ಬಗ್ಗೆ ಪ್ರತಿಕ್ರಿಯಸಿ, ಚುನಾವಣೆಗೆ ಮೊದಲು ಅಲ್ಲದಿದ್ದರೆ, ಮತ್ತೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.