R Shankar: ಬಿಜೆಪಿ ಎಂಎಲ್‌ಸಿ ಆರ್. ಶಂಕರ್ ಕಚೇರಿಯಲ್ಲಿದ್ದ ಸೀರೆ, ತಟ್ಟೆ ಜಪ್ತಿ
ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಆರ್. ಶಂಕರ(R Shankar) ಕಚೇರಿಯಲ್ಲಿಟ್ಟಿದ್ದ ಸೀರೆ, ತಟ್ಟೆ, ಲೋಟ ಹಾಗೂ ಸ್ಕೂಲ್ ಬ್ಯಾಗ್‌ಗಳನ್ನು ಅಕ್ರಮ ದಾಸ್ತಾನು ಆರೋಪದಡಿ ಶುಕ್ರವಾರ ಪೊಲೀಸರು ಜಪ್ತಿ ಮಾಡಿದರು.
ರಾಣಿಬೆನ್ನೂರು (ಮಾ.18) : ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಆರ್. ಶಂಕರ(R Shankar) ಕಚೇರಿಯಲ್ಲಿಟ್ಟಿದ್ದ ಸೀರೆ, ತಟ್ಟೆ, ಲೋಟ ಹಾಗೂ ಸ್ಕೂಲ್ ಬ್ಯಾಗ್‌ಗಳನ್ನು ಅಕ್ರಮ ದಾಸ್ತಾನು ಆರೋಪದಡಿ ಶುಕ್ರವಾರ ಪೊಲೀಸರು ಜಪ್ತಿ ಮಾಡಿದರು.
ಇಲ್ಲಿಯ ಬೀರೇಶ್ವರ ನಗರದಲ್ಲಿರುವ ಶಂಕರ ಅವರ ಕಚೇರಿಗೆ ಬೆಳಗ್ಗೆ ಬಂದ ಪೊಲೀಸರು ಕೋಟ್ಯಂತರ ರು. ಮೌಲ್ಯದ ಆರ್. ಶಂಕರ ಚಿತ್ರವಿದ್ದ ಸೀರೆ, ತಟ್ಟೆ, ಲೋಟ, ಸ್ಕೂಲ್ ಬ್ಯಾಗ್ ಜಪ್ತಿ ಮಾಡಿದರು. ಎಲ್ಲ ಸಾಮಗ್ರಿಗಳನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ಪ್ಯಾಕ್ ಮಾಡಿ ವಾಹನಗಳ ಮೂಲಕ ಶಹರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.
ಹಾವೇರಿಯಲ್ಲಿ ಕುಕ್ಕರ್ ಪಾಲಿಟಿಕ್ಸ್: ಎಂಎಲ್‌ಸಿ ಆರ್. ಶಂಕರ್'ರಿಂದ 'ಬೇಳೆ' ಬೇಯಿಸುವ ಪ್ರಯತ್ನ
ಘಟನೆ ಹಿನ್ನೆಲೆ:
ಮಾ. 14ರಂದು ಉಪ ವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಮಾಜಿ ಸಚಿವ ಆರ್. ಶಂಕರ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಕಚೇರಿಯಲ್ಲಿದ್ದ ವಸ್ತುಗಳಿಗೆ ಎರಡು ದಿನದಲ್ಲಿ ಬಿಲ್ ನೀಡುವಂತೆ ಸೂಚಿಸಿದ್ದರು. ಆದರೆ, ಆರ್. ಶಂಕರ್ ಇನ್ನೂ ಬಿಲ್ ನೀಡದ ಕಾರಣ ಅವರ ವಿರುದ್ಧ ತಹಸೀಲ್ದಾರ್ ಕೆ. ಗುರುಬಸವರಾಜ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಿಸಿದ್ದರು.
ಅದರಲ್ಲಿ ಉಲ್ಲೇಖಿಸಿರುವಂತೆ, ಶಂಕರ್ ಅವರು ಚುನಾವಣೆ(Assembly election) ಸಮೀಪದ ದಿನದಲ್ಲಿ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರ(Ranebennur assembly constituency)ದ ಮತದಾರರ ಪಟ್ಟಿಹಿಡಿದು ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಲಂ 171ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಷತ್ ಚುನಾವಣೆ ಸಭೆಯಲ್ಲಿ ಬಿಜೆಪಿ ನಾಯಕರ ಕಿತ್ತಾಟ..!
ಪೊಲೀಸರು ಕಾನೂನು ಪ್ರಕಾರ ಅವರ ಕೆಲಸ ಮಾಡಿದ್ದಾರೆ. ನನ್ನ ಬಳಿ ಎಲ್ಲ ವಸ್ತುಗಳ ಖರೀದಿಗೂ ಬಿಲ್‌ಗಳಿವೆ. ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಸ್ತುಗಳನ್ನು ವಾಪಸ್ ಪಡೆದುಕೊಳ್ಳುವೆ.
ಆರ್. ಶಂಕರ್ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ