ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ನಡೆದುಕೊಳ್ತಿದ್ದಾರೆ; ಸಂಸದ ಬಿವೈ ರಾಘವೇಂದ್ರ ಕಿಡಿ

ಕಾಂಗ್ರೆಸ್‌ನವರು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರೂ ಸಹ ಕಾಂಗ್ರೆಸ್ ಕಾರ್ಯಕರ್ತರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

Police are behaving like Congress workers MP BY Raghvendra outraged at shivamogga rav

ಶಿವಮೊಗ್ಗ (ಡಿ.16): ಕಾಂಗ್ರೆಸ್‌ನವರು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರೂ ಸಹ ಕಾಂಗ್ರೆಸ್ ಕಾರ್ಯಕರ್ತರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಗೆ ಮೊದಲು ಕಾರು ಜಖಂ ಮಾಡಿದ್ದರು, ನಂತರ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಭದ್ರಾವತಿಗೆ ಕಳಂಕ ತರುವಂತಹ ಕೆಲಸವನ್ನು ‌ಕಿಡಿಗೇಡಿಗಳು ಮಾಡ್ತಿದ್ದಾರೆ. ಮಟ್ಕಾ, ಜೂಜು, ಇಸ್ಪೀಟು ದಂಧೆ ನಡೆಯುತ್ತಿದೆ. ಇಂಥ ಕಾನೂನು ಬಾಹಿರ, ಅಕ್ರಮಗಳನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ವಿರುದ್ದ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ಇವರ ಗೂಂಡಾಗಿರಿ ಮಿತಿ ಮೀರಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಈ ರೀತಿ ಗೂಂಡಾಗಿರಿ ಮಾಡುವುದು ಸರಿಯಲ್ಲ. ರಾಜಕಾರಣ ಮಾಡಲು ಕಾರ್ಯಕರ್ತರಿದ್ದಾರೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಹಾಕಿಕೊಂಡಿರುವ ಯೂನಿಫಾರ್ಮ್ ಗೆ ಮರ್ಯಾದೆ ಕೊಟ್ಟು ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡುವ ಒಳ್ಳೆಯ ಕೆಲಸದ ಮೇಲೆ ಹಣೆಬರಹ ಬರೆಯುತ್ತದೆ. ಗೂಂಡಾಗಿರಿ ನಡೆಯುವುದಿಲ್ಲ ಎಚ್ಚರಿಸಿದರು.

ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

ಕೆಲವು ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಇಂತಹ ಕೃತ್ಯಕ್ಕೆ ಷಡ್ಯಂತ್ರ ಮಾಡ್ತಿದ್ದಾರೆ. ಶಿವಮೊಗ್ಗದಲ್ಲಿ ಇಂತಹ ಕೆಟ್ಟ ರಾಜಕಾರಣ ಹಿಂದೆ ನಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಧಿಕಾರ ದುರುಪಯೋಗಡಿಸಿಕೊಂಡು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಾರ್ಲಿಮೆಂಟ್ ದಾಳಿ ಇದು ಅತ್ಯಂತ ಗಂಭೀರ ವಿಚಾರವಾಗಿದೆ. 3-4 ವ್ಯಕ್ತಿಗಳು ಎರಡು‌ ಮೂರು ತಿಂಗಳಿನಿಂದ ಮಾಕ್ ಟ್ರಯಲ್ ಮಾಡಿದ್ದಾರೆ. ವಿದ್ಯಾವಂತರಿದ್ದಾರೆ ಈ ರೀತಿ ಕೆಟ್ಟ ಕೆಲಸ ಮಾಡಲು ಏನು ಕಾರಣ ಏನು ಎಂಬುದು ತನಿಖೆ ಮುಖಾಂತರ ಹೊರಗೆ ಬರಲಿದೆ. ನಾನೇ ಆದರೂ ಕರ್ನಾಟಕದವರು ಅಂದ್ರೆ ದೆಹಲಿಯಲ್ಲಿ ಹೆಚ್ಚು ಪ್ರೀತಿ, ಗೌರವ ಇದೆ. ಹೀಗಾಗಿ ಸಹಜವಾಗಿ ಮೈಸೂರಿನವರು ಅಂತಾ ಪಾಸ್ ಕೊಟ್ಟಿದ್ದಾರೆ.ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಮೋದಿ ಅವರನ್ನು ಅಪಶಕುನಿ ಅಂದ್ರು. ಹಿಂದುಳಿದ ವರ್ಗದ ನಾಯಕನಿಗೆ ಕೀಳು ಮಟ್ಟದ ಪದ ಉಪಯೋಗಿಸಿದ್ದಾರೆ. ಸುಳ್ಳು ಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.

ಭದ್ರಾವತಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ; ಬಿವೈ ವಿಜಯೇಂದ್ರ ಗರಂ

Latest Videos
Follow Us:
Download App:
  • android
  • ios