Asianet Suvarna News Asianet Suvarna News

PM Modi In Karnataka: ಮೈಸೂರಿಗೆ ಆಗಮಿಸಿದ ಮೋದಿ, ಮಂಡ್ಯದತ್ತ ಪ್ರಯಾಣ!

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿದ್ದ ವಿಶೇಷ ಸೇನಾ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಶೇಷ ಹೆಲಿಕಾಪ್ಟರ್‌ ಮೂಲಕ ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ.
 

PM Narendra Modi In Karnataka arrived in mysore Mandya  Bengaluru Mysuru Expressway IIT Dharwad san
Author
First Published Mar 12, 2023, 11:21 AM IST | Last Updated Mar 12, 2023, 11:31 AM IST

ಮೈಸೂರು (ಮಾ. 12): ಬರೋಬ್ಬರಿ 15 ಸಾವಿರ ಕೋಟಿಗಿಂತಲೂ ಅಧಿಕ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಅಲ್ಲಿಂದ ವಿಶೇಷ ಸೇನಾ ಹೆಲಿಕಾಪ್ಟರ್‌ ಮೂಲಕ ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ನಿರ್ಮಾಣವಾಗಿರುವ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಇಳಿಯಲಿದೆ. ಅಲ್ಲಿಂದ 1.8 ಕಿಲೋಮೀಟರ್‌ ರೋಡ್‌ಶೋನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ರೋಡ್‌ ಶೋಗಾಗಿ ಮಂಡ್ಯ ಐಬಿ ವೃತ್ತದಲ್ಲಿ ಸೆಕ್ಯುರಿಟಿ ಚೆಕಪ್ ನಡೆಸಲಾಗಿದೆ. ಸಮಾವೇಶ ನಡೆಸುವ ಸ್ಥಳದಲ್ಲಿ ಪರಿಶೀಲನೆಯನ್ನೂ ಮಾಡಲಾಗಿದೆ. ರೋಡ್‌ ಶೋ ನಡೆಯುವ ರಸ್ತೆಯ ಎರಡೂ ಬದಿಗಳಲ್ಲಿ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಶ್ವಾನದಳ, ಬಾಂಬ್ ಸ್ಕ್ವಾಡ್ ನಿಂದ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಮೋದಿ ಸ್ವಾಗತ ಕೋರಲು ತಂದ ಹೂ, ಕಲಾವಿದರ ಪರಿಕರಗಳು ಸೇರಿ ಸಂಪೂರ್ಣ ಪರಿಶೀಲನೆ. ಈಗಾಗಲೇ ಭದ್ರತಾ ಮಾಹಿತಿ ಪಡೆದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್. ಐಬಿ ವೃತ್ತದಲ್ಲಿ ಭದ್ರತೆ ವೀಕ್ಷಣೆ. ಭದ್ರತೆ ಕುರಿತು ಮಂಡ್ಯ ಎಸ್ಪಿ ಯತೀಶ್‌ರಿಂದ ಮಾಹಿತಿ ಪಡೆದಿದ್ದಾರೆ.

PM Modi In Karnataka: 44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ!

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗುವ ಹಿನ್ನಲೆಯಲ್ಲಿ ಮೋದಿ ಕಾಣಲು ತಂಡೋಪ ತಂಡವಾಗಿ ಜನರು ಆಗಮಿಸುತ್ತಿದ್ದಾರೆ. ಮಂಡ್ಯದ ಸಂಜಯ ವೃತ್ತದಲ್ಲಿ ಜನಸಾಗರವೇ ನೆರೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ಮೋದಿ ಕಾಣಲು ಜನರು ಕಾದು ನಿಂತಿದ್ದಾರೆ. ಕೇಸರಿ ಬಾವುಟ ಹಿಡಿದು, ಮೋದಿ ಮುಖವಾಡ ಧರಿಸಿ ಮೋದಿ ಪರ ಘೋಷಣೆ. ಮೋದಿ ಮೋದಿ ಎನ್ನುತ್ತ ಜನರ ಹರ್ಷೋದ್ಘಾರ. ಭಾರತ್ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮುಗಿಲು ಮುಟ್ಟಿದೆ.

PM Modi In Karnataka: ಮಂಡ್ಯದ ಪ್ರಾಮುಖ್ಯತೆಯನ್ನು ಮೋದಿ ಗುರುತಿಸಿದ್ದಾರೆ ಅದೇ ನನಗೆ ಖುಷಿ: ಸುಮಲತಾ!

ಸ್ವಾಗತಕ್ಕೆ ಕಹಳೆ ತಂಡ: 10 ಜನ ಕಲಾವಿರದ ಕಹಳೆ‌ ತಂಡ ಮೋದಿ ಸ್ವಾಗತಕ್ಕೆ ಸಜ್ಜಾಗಿದೆ. ಮಂಡ್ಯದ ಪ್ರವಾಸಿ ಮಂದಿರದ ಮುಂದೆ ಕಹಳೆ ತಂಡ ಸಜ್ಜುಗೊಂಡಿದೆ. ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದಿಂದ ಈ ಕಲಾವಿದರು ಬಂದಿದ್ದಾರೆ. 44 ವರ್ಷಗಳ ನಂತರ ಪ್ರಧಾನಿ ಮಂಡ್ಯಕ್ಕೆ ಆಗಮನವಾಗಿದೆ. 'ಪ್ರಧಾನಿ ಆಗಮನದಿಂದ ಸಂತೋಷ ಆಗುತ್ತಿದೆ. ನಾವೂ ಮೋದಿಗೆ ಬೆಂಬಲ ನೀಡುತ್ತೇವೆ. ಇತರರಿಗೂ ಬೆಂಬಲ ನೀಡುವಂತೆ ಕೇಳುತ್ತೇವೆ ಎಂದು ಕಲಾವಿದರ ತಂಡದ ಮುಖ್ಯಸ್ಥ ಮಂಜುನಾಥ್ ಹೇಳಿದ್ದಾರೆ.

ರೋಡ್ ಶೋಗೆ ಜನ ಬರಲು ಬಿಡಿ:  ರೋಡ್‌ ಶೋಗೆ ಹೆಚ್ಚಿನ ಜನರು ಬರಲು ಬಿಡಿ ಎಂದು ಎಡಿಜಿಪಿ ಅಲೋಕ್ ಕುಮಾರ್, ಮಂಡ್ಯ ಎಸ್ಪಿ ಎನ್.ಯತೀಶ್‌ಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮನವಿ ಮಾಡಿದ್ದಾರೆ. ಸಂಜಯ ವೃತ್ತಕ್ಕೆ ಬಂದ ಅಲೋಕ್ ಕುಮಾರ್ ಅವರಿಗೆ ಉಮೇಶ್‌ ಮನವಿ ಮಾಡಿದ್ದಾರೆ. ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬಂದ್ ಮಾಡದಂತೆ ಒತ್ತಾಯ. ರೋಡ್ ಶೋಗೆ ನಿರೀಕ್ಷಿತ ಜನರು ಬರದಿರೋದಕ್ಕೆ ಬಂದೋಬಸ್ತ್ ಕಾರಣ. ಬಂದೋಬಸ್ತ್ ಸಡಿಲಗೊಳಿಸಿ ಜನರನ್ನು ಬಿಡುವಂತೆ ಒತ್ತಾಯ ಮಾಡಿದ್ದಾರೆ. ತಪಾಸಣೆ ಮಾಡದೇ ಬಿಡಲು ಸಾಧ್ಯವಿಲ್ಲ, ಬಂದೋಬಸ್ತ್ ಮಾಡಲೇಬೇಕು.  ವಾಹನಗಳನ್ನು ಬಿಡಲು ಸಾಧ್ಯವಿಲ್ಲ .ನಡೆದುಕೊಂಡು ಬರುವವರಿಗೆ ತಪಾಸಣೆಗೆ ಬಿಡುವುದಾಗಿ ಅಲೋಕ್ ಕುಮಾರ್ ಹೇಳಿದ್ದಾರೆ.

ಮೋದಿ ನೋಡಲು ಕಾದ ಮಹಿಳಾ ಅಭಿಮಾನಿಗಳು: ಮಂಡ್ಯದಲ್ಲಿ ಬೆಳಿಗ್ಗಿನಿಂದ ಮೋದಿ ಆಗಮನಕ್ಕಾಗಿ ಕಾದು ನಿಂತ ಮಹಿಳಾ ಅಭಿಮಾನಿಗಳು. 'ನಮ್ಮ ಬಹುದಿನಗಳ ಕನಸು ನನಸಾಗುತ್ತಿದೆ. ನಮ್ಮ ದೇವರನ್ನು ನೋಡಲು ಕಾತುರರಾಗಿದ್ದೇವೆ. ಮೋದಿ ಆಡಳಿತದಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ. ವಿಶ್ವನಾಯಕನ್ನು ನೋಡುವುದೆ ಒಂದು ಸಂಭ್ರಮ‌‌ ಎಂದು ಹೇಳುವ ಮೂಲಕ ಮೋದಿ ಕಾಣುವ ಖುಷಿಯನ್ನು ಮಹಿಳಾ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios