BSNL ಪುನರುಜ್ಜೀವ, ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧ; ಸಂಸ್ಥೆ ಈಗ ಲಾಭದಲ್ಲಿದೆ: ಅಶ್ವಿನಿ ವೈಷ್ಣವ್
ಬಿಎಸ್‌ಎನ್‌ಎಲ್ ಗ್ರಾಮೀಣ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕಗಳು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದೆ. ಅದು ಈಗ ಲಾಭದಾಯಕವಾಗಿದೆ. ಅದು ನಮ್ಮ ಸರ್ಕಾರ ತೋರಿದ ಬಹುದೊಡ್ಡ ಬದ್ಧತೆ, ನಮ್ಮ ಪ್ರಧಾನಿ ತೋರಿದ ದೊಡ್ಡ ಬದ್ಧತೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹೊಸದಿಲ್ಲಿ (ಜುಲೈ 5, 2023) : ಸರ್ಕಾರಿ ಚಾಲಿತ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಪುನರುಜ್ಜೀವ ಮತ್ತು ಬೆಳವಣಿಗೆಗೆ ಸರ್ಕಾರಿ ಚಾಲಿತ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಪುನರುಜ್ಜೀವನ ಮತ್ತು ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕಂಪನಿಯು ಪ್ರಮುಖ ಮಾರುಕಟ್ಟೆ ಸ್ಥಿರೀಕರಣವನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಂವಹನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
"ನಮ್ಮ ಪ್ರಧಾನಿ ಮತ್ತು ಭಾರತ ಸರ್ಕಾರವು BSNL ಹಿಂದೆ ಬಂಡೆಯಂತೆ ನಿಂತಿದೆ. ಈ ಹಿನ್ನೆಲೆ ಬಿಎಸ್‌ಎನ್‌ಎಲ್ ಬೆಳೆಯುತ್ತದೆ, ಪುನರುಜ್ಜೀವಗೊಳ್ಳುತ್ತದೆ ಮತ್ತು ಇದು ಬಹಳ ಮುಖ್ಯವಾದ ಮಾರುಕಟ್ಟೆ ಸ್ಥಿರಕಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಅಶ್ವಿನಿ ವೈಷ್ಣವ್ ಹೇಳಿದರು. ಹಾಗೂ, ಬಿಎಸ್‌ಎನ್‌ಎಲ್ ಗ್ರಾಮೀಣ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕಗಳು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದೆ ಎಂದೂ ಅವರು ಹೇಳಿದರು. ‘’ಅದು ಈಗ ಲಾಭದಾಯಕವಾಗಿದೆ. ಅದು ನಮ್ಮ ಸರ್ಕಾರ ತೋರಿದ ಬಹುದೊಡ್ಡ ಬದ್ಧತೆ, ನಮ್ಮ ಪ್ರಧಾನಿ ತೋರಿದ ದೊಡ್ಡ ಬದ್ಧತೆ’’ ಎಂದೂ ಹೇಳಿದ್ದಾರೆ.
ಇದನ್ನು ಓದಿ: 2024ರ ಅಂತ್ಯಕ್ಕೆ ಮೊದಲ ಸ್ವದೇಶಿ ನಿರ್ಮಿತ ಸೆಮಿ ಕಂಡಕ್ಟರ್ ಚಿಪ್: ಅಶ್ವಿನಿ ವೈಷ್ಣವ್
ಜೂನ್‌ನಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಂಕಷ್ಟದಲ್ಲಿರುವ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ಗೆ ಒಟ್ಟು 89,047 ಕೋಟಿ ರೂ. ಮೂರನೇ ಪುನರುಜ್ಜೀವ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಈಕ್ವಿಟಿ ಇನ್ಫ್ಯೂಷನ್ ಮೂಲಕ 4G ಮತ್ತು 5G ಸ್ಪೆಕ್ಟ್ರಮ್ ಹಂಚಿಕೆಯನ್ನು ಸಹ ಇದು ಒಳಗೊಂಡಿದೆ ಎಂದೂ ತಿಳಿದುಬಂದಿದೆ.
ಹಾಗೂ, ಬಿಎಸ್‌ಎನ್‌ಎಲ್‌ನ ಅಧಿಕೃತ ಬಂಡವಾಳವನ್ನು 1,50,000 ಕೋಟಿಯಿಂದ 2,10,000 ಕೋಟಿಗೆ ಹೆಚ್ಚಿಸಲಾಗುವುದು. ಇದರೊಂದಿಗೆ, BSNL "ಸ್ಥಿರ ದೂರಸಂಪರ್ಕ ಸೇವಾ ಪೂರೈಕೆದಾರ" ಆಗಿ ಹೊರಹೊಮ್ಮುತ್ತದೆ, ಇದರಿಂದ ಭಾರತದ ದೂರದ ಭಾಗಗಳಿಗೆ ಸಂಪರ್ಕ ಒದಗಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸುತ್ತದೆ. 2019 ರಲ್ಲಿ 69,000 ಕೋಟಿ ರೂಪಾಯಿಗಳ BSNL/MTNL ಗಾಗಿ ಮೊದಲ ರೀವೈವಲ್ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಕಳೆದ ವರ್ಷ ಜುಲೈನಲ್ಲಿ 1.64 ಲಕ್ಷ ಕೋಟಿ ಮೊತ್ತದ ಎರಡನೇ ಪುನರುಜ್ಜೀವನ ಪ್ಯಾಕೇಜ್ ಅನ್ನು ಅನುಮೋದಿಸಲಾಗಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!
"... ಭಾರತವು ಪ್ರಕಾಶಮಾನವಾದ ತಾಣವಾಗಿದ್ದರೆ, ಟೆಲಿಕಾಂ ಪ್ರಕಾಶಮಾನವಾದ ತಾಣಗಳಲ್ಲಿ ಒಂದಾಗಿದೆ" ಎಂದೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಈ ಮಧ್ಯೆ, ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ದೇಶದ ನಗರಗಳಾದ್ಯಂತ ಐದನೇ ತಲೆಮಾರಿನ ಅಥವಾ 5 ಜಿ ಸೇವೆಗಳನ್ನು ನೀಡುತ್ತಿರುವ ನಡುವೆ, ಬಿಎಸ್‌ಎನ್‌ಎಲ್ 1 ಲಕ್ಷ 4G ಸೈಟ್‌ಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮತ್ತು ITI ಲಿಮಿಟೆಡ್‌ಗೆ ಖರೀದಿ ಆದೇಶವನ್ನು (PO) ನೀಡಿದೆ ಎಂದು ವರದಿಯಾಗಿದೆ. ವೊಡಾಫೋನ್ ಐಡಿಯಾ ಸಹ 5G ಆರಂಭಿಸಲು ಮಾರಾಟಗಾರರೊಂದಿಗೆ ಸುಧಾರಿತ ಚರ್ಚೆಯಲ್ಲಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..