ಬೇಲೂರಿನಿಂದ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಮೋದಿ ರೋಡ್ ಶೋಗೆ ಜನಸಾಗರವೇ ಹರಿದುಬಂದಿತ್ತು. ಮೋದಿ ಮೋದಿ ಜಯ ಘೋಷಣೆ, ಹೂಮಳೆ ಸ್ವಾಗತ, ಸಾಂಸ್ಕೃತಿ ಕಲಾ ಪ್ರದರ್ಶನ ರೋಡ್ ಶೋ ಮೆರುಗು ಹೆಚ್ಚಿಸಿತ್ತು. 

ಮೈಸೂರು(ಏ.30): ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮೇನಿಯಾ ಬಿಜೆಪಿ ಉತ್ಸಾಹ ಹೆಚ್ಚಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿರುವ ಮೋದಿ, ನಿನ್ನೆ ಬೆಂಗಳೂರಿನಲ್ಲಿ ಅಬ್ಬರದ ರೋಡ್ ಶೋ ನಡೆಸಿದ್ದರು. ಇದೀಗ ಮೈಸೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಬೇಲೂರಿನಿಂದ ಮೈಸೂರುಗೆ ತೆರಳಿದೆ ಮೋದಿ, ರೋಡ್ ಶೋ ನಡೆಸಿದ್ದಾರೆ. ದಾರಿಯುದ್ದಕ್ಕೂ ಜನರು ಮೋದಿಗೆ ಹೂಮಳೆ ಸ್ವಾಗತ ನೀಡಿದ್ದಾರೆ. ಹಳೇ ಮೈಸೂರು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಮೋದಿ, ಸಾಂಸ್ಕೃತಿಕ ನಗರಿಯಲ್ಲಿ 4.3 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. 

ಮೈಸೂರಿನ ಓವಲ್ ಮೈದಾನಕ್ಕೆ ಆಗಮಿಸಿದ ಮೋದಿ ಕಾರಿನ ಮೂಲಕ ಮೈಸೂರು ವಿವಿ ಕ್ರಾಫರ್ಡ್ ಹಾಲ್‌ಗೆ ತೆರಳಿದರು. ವಿದ್ಯಾಪೀಠ ವೃತ್ತದಲ್ಲಿ ನಿಂತಿದ್ದ ತೆರೆದ ವಾಹನ ಏರಿದ ಮೋದಿಯನ್ನು ಸಚಿವ ರಾಮದಾಸ್ ಮೈಸೂರು ಪೇಟ ಹಾಗೂ ಕೇಸರಿ ಶಾಲು ತೊಡಿಸಿ ಸ್ವಾಗತಿಸಿದರು. ಬಳಿಕ ಮೋದಿ ಅಬ್ಬದ ರೋಡ್ ಶೋ ಆರಂಭಗೊಂಡಿತು. ಮೋದಿ ಜೊತೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆಎಸ್ ಈಶ್ವರಪ್ಪ, ಎಸ್ ಎ ರಾಮದಾಸ್ ತೆರದ ವಾಹನದ ಮೂಲಕ ರೋಡ್ ಶೋನಲ್ಲಿ ಪಾಲ್ಗೊಂಡರು. ಮೋದಿ ರೋಡ್ ಶೋ ನೋಡಲು ಜನಸಾಗರವೇ ಹರಿದು ಬಂದಿತ್ತು. ಕಲಾ ತಂಡಗಳ ಪ್ರದರ್ಶನ ರೋಡ್ ಶೋ ಮೆರುಗು ಹೆಚ್ಚಿಸಿತ್ತು. ನಮ್ಮ ಮೋದಿ ನಮ್ಮ ಹೆಮ್ಮೆ ಸೇರಿದಂತೆ ಹಲವು ಪ್ಲಕಾರ್ಡ್‌ಗಳು, ಮೋದಿ ಮೋದಿ ಜಯಘೋಷ ಮೊಳಗಿತ್ತು.

ಮಾಗಡಿ ರಸ್ತೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ ಸ್ವಾಗತ!

ನಿನ್ನೆ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಿದ್ದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಬೆಂಗಳೂರಲ್ಲಿ ಭರ್ಜರಿ ರೋಡ್‌ಶೋ ನಡೆಸಿದರು. ದೆಹಲಿಯಿಂದ ವಿಶೇಷವಾಗಿ ತರಿಸಲಾದ ತೆರದ ವಾಹನವು ಬುಲೆಟ್‌ಫä್ರಫ್‌ನಿಂದ ಕೂಡಿತು. ಮಾಗಡಿ ರೋಡ್‌ ನೈಸ್‌ ಜಂಕ್ಷನ್‌ನಿಂದ ಆರಂಭಗೊಂಡ ರೋಡ್‌ ಶೋ ಸುಮನಹಳ್ಳಿ ಜಂಕ್ಷನ್‌ವರೆಗೆ ಸುಮಾರು 5.3 ಕಿ.ಮೀ. ನಡೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ರೋಡ್‌ ಶೋ ವೇಳೆ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಗಳ ಇಕ್ಕೆಲಗಳಲ್ಲಿ ಜನರು ನೆರೆದಿದ್ದರು. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ಮೇಲೆ ಹೂವಿನ ಮಳೆಗರೆದು ಜೈಕಾರ ಕೂಗಿದರು. ರೋಡ್‌ಶೋನಲ್ಲಿ ಜನಸಾಗರವೇ ಹರಿದು ಬಂದಿತು.

Modi Roadshow: ಬೆಂಗಳೂರು ಸಂಜೆಯ ಆಗಸಕ್ಕೆ ಮೋದಿ ಕೇಸರಿ ಕಮಾನು!

ಬೆಳಗಾವಿಯಲ್ಲಿ ಪ್ರಚಾರ ಮುಗಿಸಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಬಳಿಯ ಹೆಲಿಪ್ಯಾಡ್‌ಗೆ ಬಂದಿಳಿದರು. ಬಳಿಕ ರಸ್ತೆಯ ಮೂಲಕ ಮಾಗಡಿ ರಸ್ತೆ ಜಂಕ್ಷನ್‌ಗೆ ತೆರಳಿದರು. ಮಾಗಡಿ ರಸ್ತೆ ಜಂಕ್ಷನ್‌ನಿಂದ ರೋಡ್‌ ಶೋ ಆರಂಭವಾಗುತ್ತಿದ್ದಂತೆ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಜನಸಾಗರದಿಂದ ಹೂಮಳೆ ಸ್ವಾಗತ ದೊರಕಿತು. ಜನರತ್ತ ಕೈ ಬೀಸಿದ ಮೋದಿಗೆ ಹೂವು ಹಾಕಿ ಜೈಕಾರ ಕೂಗಿದರು. ಮೋದಿಯ ಸ್ವಾಗತಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳನ್ನು ಆಯೋಜನೆ ಮಾಡಲಾಗಿದ್ದು, ಈಸ್‌ವೆಸ್ಟ್‌ ಜಂಕ್ಷನ್‌ ಬಳಿಕ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ ಮಾಡಲಾಯಿತು. ರಸ್ತೆಯುದ್ದಕ್ಕೂ ಬಿಜೆಪಿ ಬಾವುಟ, ಕೇಸರಿ ಶಾಲು ರಾರಾಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.