Modi Roadshow: ಬೆಂಗಳೂರು ಸಂಜೆಯ ಆಗಸಕ್ಕೆ ಮೋದಿ ಕೇಸರಿ ಕಮಾನು!
ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ 5.3 ಕಿಲೋಮೀಟರ್ ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಜನರು ಹೂಗಳನ್ನು ಮೋದಿಯತ್ತ ಎಸೆದು ಸಂಭ್ರಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಧಿಕೃತವಾಗಿ ರಾಜ್ಯ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲಿ ಅಪಾರ ಜನಸ್ತೋಮದ ಎದುರು ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಪ್ರಧಾನಿ ಮೋದಿ ತೆರೆದ ಕ್ಯಾಂಟರ್‌ನಲ್ಲಿಸಾಗುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರು ಅಕ್ಕಪಕ್ಕದಲ್ಲಿ ಇದ್ದರು.
ಇಡೀ ರಸ್ತೆಯುದ್ಧಕ್ಕೂ ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಮೋದಿ ಮೋದಿ ಎಂದು ಜೈಕಾರ ಕೂಗುತ್ತಾ ಕೈಯಲ್ಲಿದ್ದ ಹೂಗಳನ್ನು ಅವರ ವಾಹನದತ್ತ ಎಸೆದರು.
ದೊಡ್ಡವರಲ್ಲದೆ, ಚಿಕ್ಕ ಮಕ್ಕಳೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಣ್ತುಂಬಿಕೊಂಡರು. ಮೋದಿ ರೋಡ್ ಶೋನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಕೇಸರಿ ಬಣ್ಣದ ಕ್ಯಾಪ್ ಧರಿಸಿದ್ದ ಪ್ರಧಾನಿ ಮೋದಿ, ರಸ್ತೆಯುದ್ಧಕ್ಕೂ ಅಕ್ಕಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗಳಿಗೆ ಕೈಬೀಸುತ್ತಾ ಸಾಗಿದೆ.
ರಸ್ತೆಗಳು ಸಂಪೂರ್ಣವಾಗಿ ಕಡುಗೆಂಪು ಬಣ್ಣದಿಂದ ಕೂಡಿದ್ದರೆ, ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ರಸ್ತೆಯ ಮೇಲೆ ಪ್ರದರ್ಶಿಸಿದರು. ಪ್ರಸಿದ್ಧ ‘ಡೊಳ್ಳು ಕುಣಿತ’ ಕೂಡ ರಸ್ತೆಯಲ್ಲಿ ನಡೆಯಿತು.
ಒಟ್ಟು 5.3 ಕಿಮೀ ಉದ್ದದ ರೋಡ್ ಶೋ ಉತ್ತರ ಬೆಂಗಳೂರಿನ ಮಾಗಡಿ ರಸ್ತೆ ಮತ್ತು ನೈಸ್ ರಸ್ತೆಯ ಜಂಕ್ಷನ್ ಮೂಲಕ ಸುಮನಹಳ್ಳಿವರೆಗೆ ವಿಸ್ತರಿಸಿತು. ಮೋದಿಯವರ ರೋಡ್ ಶೋ ಸಂಚಾರಕ್ಕೂ ಅಡ್ಡಿಪಡಿತು.
ಪ್ರಧಾನಿ ರೋಡ್ ಶೋ ಸಾಗುವ ಕೆಲವು ರಸ್ತೆಗಳಲ್ಲಿ ಪ್ರವೇಶಿಸದಂತೆ ಪೊಲೀಸರು ಈ ಹಿಂದೆ ಸಾರ್ವಜನಿಕರಿಗೆ ಎಚ್ಚರಿಸಿದರು. ಪ್ರಧಾನಿ ಮೋದಿ ರೋಡ್ ಶೋ ಸಾಗುವ ಮಾರ್ಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.