ಹೊರಗಿನವರ ಮಾತಿಗೆ ಕಿವಿಗೊಡಲ್ಲ, ನನಗೆ ಕ್ಷೇತ್ರದ ಜನರು ಮುಖ್ಯ: ಸಚಿವ ಚಲುವರಾಯಸ್ವಾಮಿ
ನಾಗಮಂಗಲದಲ್ಲಿ ಗಲಭೆ ಸಂಭವಿಸಲು ಕಾಂಗ್ರೆಸ್ ಕಾರಣ ಎಂದಿದ್ದಾರೆ, ಬಿಜೆಪಿಯವರೂ ಅದನ್ನೇ ಹೇಳಿದ್ದಾರೆ. ಹೊರಗಿನವರು ನೂರು ರೀತಿ ಮಾತನಾಡಲಿ. ನನಗೆ ನಾಗಮಂಗಲ ಕ್ಷೇತ್ರದ ಜನರ ಹಿತ ಮುಖ್ಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಸೆ.15): ನಾಗಮಂಗಲದಲ್ಲಿ ಗಲಭೆ ಸಂಭವಿಸಲು ಕಾಂಗ್ರೆಸ್ ಕಾರಣ ಎಂದಿದ್ದಾರೆ, ಬಿಜೆಪಿಯವರೂ ಅದನ್ನೇ ಹೇಳಿದ್ದಾರೆ. ಹೊರಗಿನವರು ನೂರು ರೀತಿ ಮಾತನಾಡಲಿ. ನನಗೆ ನಾಗಮಂಗಲ ಕ್ಷೇತ್ರದ ಜನರ ಹಿತ ಮುಖ್ಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಲಭೆ ಸಮಯದಲ್ಲಿ ಮೊದಲು ಬೆಂಕಿ ಹಾಕಿದವರು ಯಾರು, ಯಾವ ಅಂಗಡಿಗೆ ಬೆಂಕಿ ಹಾಕಿದರು ಎಂಬೆಲ್ಲಾ ಮಾಹಿತಿಯೂ ಇದೆ. ಆದರೆ, ನಾನು ಈ ಸಮಯದಲ್ಲಿ ಯಾವುದೇ ಪಕ್ಷ ಅಥವಾ ಸಮುದಾಯದ ಬಗ್ಗೆ ಮಾತನಾಡುವುದಿಲ್ಲ. ಮೊದಲು ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು.
ಪ್ರಕರಣ ಕುರಿತಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಅಗತ್ಯಬಿದ್ದರೆ ಉನ್ನತಮಟ್ಟದ ಸಮಿತಿ ರಚಿಸಿ ವಿಶೇಷ ತನಿಖೆ ಮಾಡೋಣ ಎಂದು ತಿಳಿಸಿದರು. ಗಲಭೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಆಧರಿಸಿ ಬಂಧಿಸಿದರೆ ೫೦೦ ಜನ ಆಗುತ್ತಾರೆ. ಗಣೇಶನ ಮೆರವಣಿಗೆ ತಂಡದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಪುತ್ರ ಇದ್ದ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದು ನಿಜ. ಚಾರ್ಜ್‌ಶೀಟ್‌ನಲ್ಲಿ ಅವರನ್ನು ಕೈಬಿಡಲು ಸೂಚನೆ ನೀಡಿದ್ದೇನೆ. ಇಡೀ ಪ್ರಕರಣಕ್ಕೆ ಕಾರಣಕರ್ತ ಯಾರೆಂದು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.
ಎರಡೂ ಧರ್ಮೀಯರಿಂದ ಒಗ್ಗಟ್ಟಿನ ಮಂತ್ರ: ಎರಡೂ ಧರ್ಮದವರು ಇನ್ನು ಮುಂದೆ ಒಗ್ಗಟ್ಟಾಗಿರುವುದಾಗಿ ಹೇಳಿದ್ದಾರೆ. ಗಣಪತಿ ಹಬ್ಬವನ್ನೂ ಮಾಡುತ್ತೇವೆ, ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೋರುವುದಾಗಿ ತಿಳಿಸಿದ್ದಾರೆ. ಗಲಭೆಯಲ್ಲಿ ನಷ್ಟಕ್ಕೊಳಗಾದವರಿಗೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಪರಿಹಾರ ನೀಡುವ ಜೊತೆಗೆ ಅಮಾಯಕರ ಬಿಡುಗಡೆಗೆ ಕ್ರಮ ವಹಿಸುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಬಿಂಡಿಗನವಿಲೆ ರಸ್ತೆಯಲ್ಲಿರುವ ಕೃಷ್ಣಪ್ಪ ಸಮದಾಯ ಭವನದಲ್ಲಿ ಉಭಯ ಕೋಮಿನವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.
ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು: ಅನಾಥವಾಯ್ತು ಒಂದು ವರ್ಷದ ಹೆಣ್ಣು ಮಗು!
ಈ ವಿಚಾರ ಮುಂದುವರೆಸಬೇಡಿ: ಯಾವುದೋ ಕೆಟ್ಟ ಘಳಿಗೆ, ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರಂತಿದ್ದ ನಾಗಮಂಗಲದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಂಬಲಸಾಧ್ಯವಾದ ಘಟನೆ ನಡೆದುಹೋಗಿದೆ. ಇನ್ನು ಮುಂದೆ ಈ ವಿಚಾರವನ್ನು ರಾಜಕಾರಣಿಗಳು, ಸಂಘಟನೆಗಳು ಮುಂದುವರೆಸುವುದು ಬೇಡ, ಇದನ್ನು ಇಲ್ಲಿಗೇ ನಿಲ್ಲಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರ ರೀತಿ ಕುಳಿತಿದ್ದರು. ಈ ಕ್ಷಣದಿಂದ ನಾವು ಒಟ್ಟಾಗಿರುತ್ತೇವೆ ಎಂದಿದ್ದಾರೆ. ಗಣಪತಿ ಹಬ್ಬವನ್ನೂ ಮಾಡುತ್ತೇವೆ. ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೋರುವುದಾಗಿ ಹೇಳಿದ್ದಾರೆ. ಸೋಮವಾರ ಮುಸ್ಲಿಮರ ಹಬ್ಬ ಈದ್ ಮಿಲಾದ್ ಇರುವ ಕಾರಣ ಗಣಪತಿ ವಿಸರ್ಜನೆ ಬೇಡ ಎಂದು ಹೇಳಿದ್ದೇವೆ. ಅದಕ್ಕೆ ಸಹಮತ ವ್ಯಕ್ತವಾಗಿದೆ ಎಂದು ತಿಳಿಸಿದರು.