ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ: ಮೀಟಿಂಗ್‌ನಲ್ಲಿ ಈ 6 ವಿಚಾರಗಳ ಚರ್ಚೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಎರಡು ದಿನಗಳ ಕಾಲ ವಿಪಕ್ಷಗಳ ಮಹತ್ವದ ಸಭೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿದೆ. ಈ ವೇಳೆ 6 ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಬೆಂಗಳೂರು (ಜುಲೈ 17, 2023): ನಗರದ ಖಾಸಗಿ ಹೊಟೇಲ್‌ನಲ್ಲಿ ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ ಆಯೋಜನೆಯಾಗಿದೆ. ಎರಡು ದಿನಗಳ ಕಾಲ ಮಹತ್ವದ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿದೆ. ಈ ಸಭೆಯಲ್ಲಿ 23 ಪಕ್ಷದ 49 ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ.
ಇನ್ನು, ಇಂದಿನ ಸಭೆಯಲ್ಲಿ 6 ಪ್ರಮುಖ ವಿಚಾರಗಳ ಚರ್ಚೆಯಾಗಲಿದೆ.
ಇದನ್ನು ಓದಿ: ಮೋದಿ ಮಣಿಸಲು ಬೆಂಗ್ಳೂರಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಸಭೆ: 26 ಪಕ್ಷಗಳ ಮುಖಂಡರಿಗೆ ಆಹ್ವಾನ
1) ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆ
ಇದು ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷ ಮೈತ್ರಿಕೂಟಗಳ ಸೇತುವೆಯಾಗಲಿದ್ದು, ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನ ನಡೆಸುವ ಕೆಲಸ ಮಾಡಲಿದೆ.
ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಸಡ್ಡು: ನಾಳೆ ದಿಲ್ಲಿಯಲ್ಲಿ ಎನ್‌ಡಿಎ ಬಲ ಪ್ರದರ್ಶನ; 30 ರಾಜಕೀಯ ಪಕ್ಷಗಳ ನಾಯಕರು ಭಾಗಿ ನಿರೀಕ್ಷೆ
2) ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆ ಉಪಸಮಿತಿ ರಚನೆ ಬಗ್ಗೆ ಚರ್ಚೆ
ದೇಶಾದ್ಯಂತ ಎಲ್ಲೆಲ್ಲಿ ರಾಜಕೀಯ ರ್‍ಯಾಲಿಗಳನ್ನ ಆಯೋಜನೆ ಮಾಡಬೇಕು. ಸಮಾವೇಶಗಳನ್ನು ಎಲ್ಲಿ ಮಾಡಬೇಕು, ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿ ಜನಾಂದೋಲನ ರೂಪಿಸಬೇಕು.
ಈ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ಈ ಸಮಿತಿ ನಿರ್ವಹಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ
3) ಸೀಟು ಹಂಚಿಕೆ ಬಗ್ಗೆ ಗಂಭೀರ ಚರ್ಚೆ
ಯಾವ ರಾಜ್ಯದಲ್ಲಿ ಯಾವ ಪಕ್ಷ ಪ್ರಬಲವಾಗಿದೆಯೋ ಆ ಪಕ್ಷಕ್ಕೆ ಹೆಚ್ಚಿನ ಮನ್ನಣೆ. ಈ ಸಂದರ್ಭದಲ್ಲಿ ತಮ್ಮ ತಮ್ಮ ರಾಜ್ಯ ರಾಜಕೀಯ ಸ್ಥಿತಿಗತಿಗಳ ವಿವರಣೆಯನ್ನು ನಾಯಕರು ನೀಡಲಿದ್ದಾರೆ.
ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್, ಟಿಎಂಸಿ, ಸಿಪಿಎಂ
4) EVM ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸುವುದು
ಹಾಗೂ, ಈ ಚರ್ಚೆಯ ಬಳಿಕ ಚುನಾವಣಾ ಆಯೋಗಕ್ಕೆ ಒಂದಷ್ಟು ಸಲಹೆಗಳನ್ನು ನೀಡುವುದು ಈ ಸಭೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ.
5) ವಿಪಕ್ಷಗಳ ಮೈತ್ರಿಕೂಟಕ್ಕೆ ಇಡಬೇಕಾದ ಹೆಸರಿನ ಬಗ್ಗೆ ಮಾತುಕತೆ
- ಎಲ್ಲರಿಗೂ ಒಮ್ಮತ ಮೂಡುವ ಹೆಸರನ್ನು ಸಭೆಯಲ್ಲಿ ನಾಯಕರು ಪೈನಲ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್ ಷರತ್ತು
6) ಮೈತ್ರಿಕೂಟ ಮುನ್ನೆಡಸಲು ಸಂಚಾಲಕರನ್ನು ನೇಮಕ ಮಾಡುವುದು
ಒಟ್ಟಾರೆ, ಈ ಆರು ಪ್ರಮುಖ ವಿಚಾರಗಳು ವಿಪಕ್ಷಗಳ ಒಕ್ಕೂಟದ ಮಹತ್ವದ ಸಭೆಯಲ್ಲಿ ಚರ್ಚೆ ಆಗಲಿದೆ.
ಇದನ್ನೂ ಓದಿ: 2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್ ‘ಲೋಕ’ಸಭೆ!
ಸಭೆಯ ಮಿನಿಟ್ to ಮಿನಿಟ್ ಪ್ರೋಗ್ರಾಂ ಮಾಹಿತಿ ಲಭ್ಯ
ಬೆಂಗಳೂರಿನಲ್ಲಿ ನಡೆಯಲಿರೋ ಜುಲೈ 17ರ ಸೋಮವಾರ ಸಭೆಯ ವಿವರಣೆ ಹೀಗಿದೆ ನೋಡಿ..
ಕೇಂದ್ರ ವಿಪಕ್ಷಗಳ ನಾಯಕರು ಸಂಜೆ 6 ಗಂಟೆಗೆ ಸಭೆಗೆ ಸೇರಲಿದ್ದು, ಈ ವೇಳೆ ಸಭೆಗೆ ಆಗಮಿಸಿದ ನಾಯಕರಿಗೆ ಸ್ವಾಗತ ಕೋರಲಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತ ಕೋರಲಿದ್ದಾರೆ. ಬಳಿಕ ಸಂಜೆ 6.10 ಕ್ಕೆ ಸಭೆಯಲ್ಲಿ ಚರ್ಚಿಸುವ ಆರು ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾಪವಾಗಲಿದೆ. ನಂತರ, 7 ಗಂಟೆಗೆ ನಾಳೆ ಸಭೆಯ ಕಾರ್ಯಸೂಚಿಗಳ ಬಗ್ಗೆ ಪ್ರಸ್ತಾಪ. ಹಾಗೂ, 7.30ಕ್ಕೆ ವಿಪಕ್ಷಗಳ ಒಕ್ಕೂಟದ ನಾಯಕರಿಗೆ ಔತಣಕೂಟವನ್ನು ಏರ್ಪಾಡು ಮಾಡಲಾಗಿದೆ. ರಾಜ್ಯ
ಸಿಎಂ ಸಿದ್ದರಾಮಯ್ಯ ಈ ಎಲ್ಲ ನಾಯಕರಿಗೆ ಔತಣಕೂಟ ಆಯೋಜನೆ ಮಾಡಿದ್ದಾರೆ.
ಅಲ್ಲದೆ, ಜುಲೈ 18 ಮಂಗಳವಾರ ಸಭೆಯ ಸಂಪೂರ್ಣ ವಿವರಣೆ ಹೀಗಿದೆ ನೋಡಿ..
ಬೆಳಗ್ಗೆ ಮೈತ್ರಿಕೂಟದ ನಾಯಕರ ಸಭೆ ಆರಂಭವಾಗಲಿದ್ದು, 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. 11:10 ರಿಂದ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಮತ್ತೆ ಚರ್ಚೆ ನಡೆಯಲಿದೆ. ಹಾಗೂ, ಸಭೆಯ ಅಜೆಂಡಾಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮವಿರಲಿದ್ದು, ಬಳಿಕ, 2.30 ಕ್ಕೆ ಉಪಸಮಿತಿಗಳ ರಚನೆ ಮಾಡುವುದು, ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆಯಾಗಲಿದೆ. ನಂತರ, 3 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯವಾಗಲಿದ್ದು, 4 ಗಂಟೆಗೆ ಸುದ್ದಿಗೋಷ್ಠಿ ಆಯೋಜನೆಯಾಗಿದೆ. ಮೈತ್ರಿಕೂಟದ ಪ್ರಮುಖ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ಈ ವೇಳೆ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.