Asianet Suvarna News Asianet Suvarna News

ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ

ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಮಂಗಳವಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ಹೊಸ ಪದವೊಂದು ಹುಟ್ಟಿಕೊಂಡಿದೆ. ಅದೇ ‘ಗ್ಯಾರಂಟಿ’ ಎಂಬ ಪದ. ಆದರೆ ಮೊನ್ನೆ ಪಟನಾದಲ್ಲಿ ವಿಪಕ್ಷ ನಾಯಕರ ಮುಖ ನೋಡಿದೆ. ಅವರೆಲ್ಲ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ಮಾಡಿದವರು. ಹಗರಣದಲ್ಲಿ ಕಾಂಗ್ರೆಸ್ಸೇ ಮುಂಚೂಣಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

opposition can only guarantee corruption says pm modi cites list of scam allegations ash
Author
First Published Jun 28, 2023, 8:43 AM IST

ಭೋಪಾಲ್‌ (ಜೂನ್ 28, 2023): ಇತ್ತೀಚೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ನೀಡಿದ ‘ಗ್ಯಾರಂಟಿ ಭರವಸೆ’ಗಳು ದೇಶದಲ್ಲಿ ಸದ್ದು ಮಾಡುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆಗಳು ಹಾಗೂ ವಿಪಕ್ಷಗಳ ವಿರುದ್ಧ ಪ್ರಹಾರ ನಡೆಸಿದ್ದಾರೆ. ‘ಬರೀ ಹಗರಣ ಮಾಡುವಲ್ಲಿ ಅನುಭವ ಹೊಂದಿರುವ ವಿಪಕ್ಷಗಳ ‘ಗ್ಯಾರಂಟಿ’ಗಳು ನಿಮಗೆ ಬೇಕಾ? ಅಥವಾ ಹಗರಣಕೋರರ ಮೇಲೆ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುವ ಬಿಜೆಪಿ ಬೇಕಾ? ನೀವೇ ನಿರ್ಣಯಿಸಿ’ ಎಂದು ಜನತೆಗೆ ಕರೆ ನೀಡಿದ್ದಾರೆ.

ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಮಂಗಳವಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಹೊಸ ಪದವೊಂದು ಹುಟ್ಟಿಕೊಂಡಿದೆ. ಅದೇ ‘ಗ್ಯಾರಂಟಿ’ ಎಂಬ ಪದ. ಆದರೆ ಮೊನ್ನೆ ಪಟನಾದಲ್ಲಿ ಸಭೆ ಮಾಡಿದವರ (ವಿಪಕ್ಷ ನಾಯಕರ) ಮುಖ ನೋಡಿದೆ. ಅವರೆಲ್ಲ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ಮಾಡಿದವರು. ಹಗರಣದಲ್ಲಿ ಕಾಂಗ್ರೆಸ್ಸೇ ಮುಂಚೂಣಿಯಲ್ಲಿದೆ’ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್‌

‘ಹೀಗಾಗಿ ಮತ್ತೆ ಜನರು ವಿಪಕ್ಷಗಳ ಬೆನ್ನು ಹತ್ತಿ ಹೋದರೆ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ‘ಗ್ಯಾರಂಟಿ’. ಆದರೆ ಬಿಜೆಪಿ ಮಾತ್ರ ಹಗರಣಕೋರರ ವಿರುದ್ಧ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುತ್ತದೆ. ಹೀಗೆ ಹಗರಣ ಮಾಡುವವರ ‘ಗ್ಯಾರಂಟಿ’ ಭರವಸೆಗಳು ನಿಮಗೆ ಬೇಕಾ ಅಥವಾ ಹಗರಣಗಳ ವಿರುದ್ಧ ಕ್ರಮ ‘ಗ್ಯಾರಂಟಿ’ ನೀಡುವ ಬಿಜೆಪಿ ಬೇಕಾ? ನೀವೇ ನಿರ್ಧರಿಸಿ’ ಎಂದು ಜನತೆಗೆ ಕರೆ ನೀಡಿದರು.

ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಹಲವು ‘ಗ್ಯಾರಂಟಿ’ ಭರವಸೆಗಳನ್ನು ಇತ್ತೀಚೆಗೆ ನೀಡಿತ್ತು. ಅವುಗಳಲ್ಲಿ ರೈತರ ಸಾಲ ಮನ್ನಾ, ಮಹಿಳೆಯರಿಗೆ ಮಾಸಿಕ 1500 ರೂ. ಹಣ - ಮೊದಲಾದವು ಸೇರಿವೆ.

ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್‌! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್‌, ಟಿಎಂಸಿ, ಸಿಪಿಎಂ

ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಪರ ಬ್ಯಾಟಿಂಗ್ ಮಾಡಿದ ಮೋದಿ, ‘ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಕೋರ್ಟೇ ಒಲವು ತೋರಿದೆ. ಆದರೆ ಮತ ಬ್ಯಾಂಕ್‌ ರಾಜಕೀಯದ ಕಾರಣ ವಿಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸಿ ಪ್ರಚೋದಿಸುತ್ತಿವೆ. 

ನೀವೇ ಹೇಳಿ. ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಮತ್ತೊಂದು ಕಾನೂನು ಇರಬೇಕೆ? ಹಾಗಿದ್ದಾಗ ಆ ಮನೆ ನಡೆಯಲು ಸಾಧ್ಯವಿದೆಯೆ? ಇಂಥ ಎರಡೆರಡು ವ್ಯವಸ್ಥೆಗಳ ಮೂಲಕ ದೇಶ ನಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು ಹಾಗೂ ‘ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್‌ ಷರತ್ತು

‘ಈ ಜನರು (ವಿಪಕ್ಷಗಳು), ನಮ್ಮ ವಿರುದ್ಧ ಆರೋಪ ಮಾಡುತ್ತಾರೆ. ಮುಸಲ್ಮಾನ, ಮುಸಲ್ಮಾನ ಎಂದು ಪಠಣ ಮಾಡುತ್ತಾರೆ. ಆದರೆ ಇವರು ಮುಸ್ಲಿಮರ ಹಿತಾಸಕ್ತಿಗೆ ಅನುಗುಣವಾಗಿಯೇ ಕೆಲಸ ಮಾಡಿದ್ದರೆ, ಮುಸ್ಲಿಂ ಕುಟುಂಬಗಳು ಇಂದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹಿಂದೆ ಬೀಳುತ್ತಿರಲಿಲ್ಲ’ ಎಂದರು.

‘ಆದರೆ ಅದೇ ಪಸ್ಮಾಂದಾ ಮುಸ್ಲಿಮರ (ಮುಸ್ಲಿಮರಲ್ಲೇ ಹಿಂದುಳಿದ ವರ್ಗ) ಬಗ್ಗೆ ವಿಪಕ್ಷಗಳು ನಿರ್ಲಕ್ಷ್ಯ ತಾಳಿದವು. ಏಕೆಂದರೆ ಅವರ ಸಂಖ್ಯೆ ಕಡಿಮೆ. ಇದರ ಹಿಂದೆ ಮತ ಬ್ಯಾಂಕ್‌ ರಾಜಕೀಯವಿದೆ’ ಎಂದು ಆರೋಪಿಸಿದರು.

ಇದನ್ನೂ ಓದಿ: ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

Follow Us:
Download App:
  • android
  • ios