ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಮತ್ತೆ ‘ಕೈ’ ಹೊಗಳಿದ Ghulam Nabi Azad..!

ನಾನು ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದರೂ, ಅವರ ಜಾತ್ಯತೀತ ನೀತಿಯ ವಿರುದ್ಧ ನಾನು ಇರಲಿಲ್ಲ.  ಪಕ್ಷದ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದಕ್ಕೆ ಮಾತ್ರ ನಾನು ಪಕ್ಷ ತೊರೆದಿರುವುದಕ್ಕೆ ಕಾರಣ ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. 

only congress can challenge bjp ghulam nabi azad praises his old party ash

ಗುಜರಾತ್ (Gujarat) ಮತ್ತು ಹಿಮಾಚಲ ಪ್ರದೇಶ (Himachal Pradesh) ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ (Congress) ಮಾತ್ರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) (BJP) ಸವಾಲು ಹಾಕಬಹುದು ಎಂದು  ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಭಾನುವಾರ ಮತ್ತೆ ತಮ್ಮ ಮಾಜಿ ಪಕ್ಷವನ್ನು ಹೊಗಳಿದ್ದಾರೆ. ಕೈ ಪಕ್ಷ ತೊರೆದ ತಿಂಗಳ ನಂತರ ಜಮ್ಮು ಕಾಶ್ಮೀರದ (Jammu and Kashmir) ಮಾಜಿ ಮುಖ್ಯಮಂತ್ರಿ ಮತ್ತೆ ಕಾಂಗ್ರೆಸ್‌ ಅನ್ನು ಹೊಗಳಿದ್ದಾರೆ. ಹಾಗೂ, ಆಮ್ ಆದ್ಮಿ ಪಕ್ಷವು (Aam Aadmi Party) ಕೇವಲ ದೆಹಲಿ ಕೇಂದ್ರಾಡಳಿತ ಪ್ರದೇಶದ ಪಕ್ಷವಾಗಿದೆ ಎಂದೂ ಭಾನುವಾರ ಅವರು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷದೊಂದಿಗಿನ ದಶಕಗಳ ಕಾಲದ ಒಡನಾಟವನ್ನು ತೊರೆದ ತಿಂಗಳ ನಂತರ ಗುಲಾಂ ನಬಿ ಆಜಾದ್‌, ತಾನು ಜಾತ್ಯತೀತತೆಯ ನೀತಿಯ ವಿರುದ್ಧವಲ್ಲ, ಆದರೆ ಅದರ ದುರ್ಬಲ ಪಕ್ಷದ ವ್ಯವಸ್ಥೆಗೆ ವಿರುದ್ಧವಾಗಿದ್ದೇನೆ ಎಂದು ಹೇಳಿದರು. "ನಾನು ಕಾಂಗ್ರೆಸ್‌ನಿಂದ ಬೇರ್ಪಟ್ಟಿದ್ದರೂ, ಅವರ ಜಾತ್ಯತೀತ ನೀತಿಯ ವಿರುದ್ಧ ನಾನು ಇರಲಿಲ್ಲ.  ಪಕ್ಷದ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದಕ್ಕೆ ಮಾತ್ರ ನಾನು ಪಕ್ಷ ತೊರೆದಿರುವುದಕ್ಕೆ ಕಾರಣ. ಗುಜರಾತ್‌ನಲ್ಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ಎಎಪಿಗೆ ಅದು ಸಾಧ್ಯವಿಲ್ಲ’’ ಎಂದೂ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. 

ಇದನ್ನು ಓದಿ: ಕಾಂಗ್ರೆಸ್‌ಗೆ ಭಾರಿ ಹಿನ್ನಡೆ, ಮಾಜಿ ಉಪ ಮುಖ್ಯಮಂತ್ರಿ ಸೇರಿ 50 ಹಿರಿಯ ನಾಯಕರು ರಾಜೀನಾಮೆ!

ಹಾಗೂ, ಕಾಂಗ್ರೆಸ್‌ ಪಕ್ಷವು ಹಿಂದೂ ಮತ್ತು ಮುಸ್ಲಿಮರನ್ನು ಹಾಗೂ ರೈತರನ್ನು ತನ್ನತ್ತ ಕರೆದುಕೊಂಡು ಹೋಗುತ್ತದೆ. ಈ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷವು ಏನನ್ನೂ ಮಾಡಲು ಸಾಧ್ಯವಿಲ್ಲ, ಅವರು ಪಂಜಾಬ್‌ನಲ್ಲಿ ವಿಫಲರಾಗಿದ್ದಾರೆ ಮತ್ತು ಪಂಜಾಬ್‌ನ ಜನರು ಮತ್ತೆ ಅವರಿಗೆ ಮತ ಹಾಕುವುದಿಲ್ಲ ಎಂದೂ ಗುಲಾಂ ನಬಿ ಆಜಾದ್‌ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ವಿರುದ್ಧ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   

ಆಮ್ ಆದ್ಮಿ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಗುಲಾಂ ನಬಿ ಆಜಾದ್, "ಎಎಪಿ ಕೇವಲ ದೆಹಲಿ ಕೇಂದ್ರಾಡಳಿತ ಪಕ್ಷವಾಗಿದೆ. ಅವರು ಪಂಜಾಬ್ ಅನ್ನು ಸಮರ್ಥವಾಗಿ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಸವಾಲು ಹಾಕಬಹುದು. ಏಕೆಂದರೆ ಅವರು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಹೊಂದಿದ್ದಾರೆ’’ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು: ಆಜಾದ್‌ ಕಿಡಿ

ಇನ್ನು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆಯಲ್ಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿದ್ದೇನೆ ಮತ್ತು ಕೇಂದ್ರ ಸರ್ಕಾರವು ಅದನ್ನು ಮಾಡಿದರೆ ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದರು.

ಗುಲಾಂ ನಬಿ ಆಜಾದ್ ಅವರು ದೋಡಾ ಪ್ರವಾಸದಲ್ಲಿದ್ದು, ಅಲ್ಲಿ ಅವರು ಅನೇಕ ನಿಯೋಗಗಳನ್ನು ಭೇಟಿ ಮಾಡಲಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಅನೇಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 26 ರಂದು, ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದೊಂದಿಗಿನ 52 ವರ್ಷಗಳ ಸುದೀರ್ಘ ಒಡನಾಟವನ್ನು ತೊರೆದರು. ಅಕ್ಟೋಬರ್‌ನಲ್ಲಿ, ತಮ್ಮ ಹೊಸ ರಾಜಕೀಯ ಸಂಘಟನೆ 'ಡೆಮಾಕ್ರಟಿಕ್ ಆಜಾದ್ ಪಾರ್ಟಿ'ಯನ್ನು ಘೋಷಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ; ಅವರು ಮಾನವೀಯತೆ ತೋರಿದ್ದಾರೆ: ಆಜಾದ್‌

ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ, ಗುಲಾಂ ನಬಿ ಆಜಾದ್‌ ಅವರು, ಕಳೆದ 9 ವರ್ಷಗಳಿಂದ ಪಕ್ಷವನ್ನು ನಡೆಸುತ್ತಿರುವ ರೀತಿ, ಪಕ್ಷದ ನಾಯಕತ್ವವನ್ನು ವಿಶೇಷವಾಗಿ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ. 

Latest Videos
Follow Us:
Download App:
  • android
  • ios