ಪ್ರಧಾನಿ ಮೋದಿ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ; ಅವರು ಮಾನವೀಯತೆ ತೋರಿದ್ದಾರೆ: ಆಜಾದ್
ನಾನು ಮೋದಿ ಸಾಹಬ್ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ. ಅವರು ಗುಜರಾತ್ ಸಿಎಂ ಆಗಿದ್ದಾಗಲೇ ಮಾನವೀಯತೆ ತೋರಿದ್ದರು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದ ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ ಮಾತನಾಡಿದ ಕಾಂಗ್ರೆಸ್‌ನ ಮಾಜಿ ನಾಯಕ, ತಾನು ದೇಶದ ನಾಯಕನ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಒಬ್ಬ ಒರಟು ಮನುಷ್ಯ ಎಂದು ನಾನು ಭಾವಿಸುತ್ತಿದ್ದೆ. ಅವರಿಗೆ ಮಕ್ಕಳಿಲ್ಲ. ಆದರೆ ಅವರು ಮಾನವೀಯತೆಯನ್ನು ತೋರಿಸಿದರು" 73 ವರ್ಷದ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡ ಗುಲಾಂ ನಬಿ ಆಜಾದ್, "ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ... ಬಸ್ಸಿನೊಳಗೆ ಗ್ರೆನೇಡ್ ಸ್ಫೋಟಿಸಿತು, ಮತ್ತು ಅದು ಸಾವುನೋವುಗಳಿಗೆ ಕಾರಣವಾಯಿತು, ಒಂದು ಮಟ್ಟಿಗೆ ದೇಹಗಳು ಛಿದ್ರವಾಗಿದ್ದವು," ಹಾಗೂ, "ಮೋದಿ ಸಾಹಬ್ - ಆ ಸಮಯದಲ್ಲಿ ಗುಜರಾತ್ ಸಿಎಂ ಆಗಿದ್ದರು - ಅವರು ನನಗೆ ಕರೆ ಮಾಡಿದರು. ಆದರೆ ನಾನು ಅಳುತ್ತಿದ್ದೆ. ನಾನು ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅವರು ಕೇಳಿಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗೂ, ನನ್ನ ಜನರು ನನ್ನನ್ನು ಬಯಸುತ್ತಾರೆ ಎಂದು ನಾನು ಹೇಳಿದ್ದೆ ಎಂದು ಆಜಾದ್ ಸುದ್ದಿಗಾರರಿಗೆ ತಿಳಿಸಿದರು.
ಗುಲಾಂ ನಬಿ ರಾಜೀನಾಮೆಯ ಹಿಂದೆ ನಡೆದಿದ್ದೇನು? ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾಗ್ತಾರಾ?
“ನನಗೆ ಎರಡು ವಿಮಾನಗಳು ಬೇಕು ಎಂದು ನಾನು ಪ್ರಧಾನಿಗೆ ಹೇಳಿದೆ - ಒಂದು ಗಾಯಗೊಂಡವರಿಗೆ ಮತ್ತು ಒಂದು ಸತ್ತವರಿಗೆ. ನಂತರ, ನಾನು ಗಾಯಗೊಂಡವರನ್ನು ನೋಡಲು ಸಂತ್ರಸ್ತರನ್ನು ಭೇಟಿಯಾದಾಗ, ಅವರು ತಮ್ಮ ನೋವನ್ನು ನನ್ನೊಂದಿಗೆ ಹಂಚಿಕೊಂಡರು, ನಾನು ಮತ್ತೊಮ್ಮೆ ಅಳುತ್ತಿದ್ದೆ. "ಅದು ಟಿವಿ ಸುದ್ದಿ ದೃಶ್ಯಗಳಲ್ಲಿ ಸೆರೆಹಿಡಿಯಲ್ಪಟ್ಟಿದೆ ಮತ್ತು ಗುಜರಾತ್ ಸಿಎಂ (ಮೋದಿ) ನನಗೆ ಮತ್ತೆ ಕರೆ ಮಾಡಿದ್ದರು’’ ಎಂದು ಗುಲಾಂ ನಬಿ ಆಜಾದ್ ಹಮಚಿಕೊಂಡಿದ್ದಾರೆ.
ಕಳೆದ ವಾರ, ಆಜಾದ್ ಅವರು ಐದು ಪುಟಗಳ ರಾಜೀನಾಮೆಯನ್ನು ಬರೆದಾಗ ಕಾಂಗ್ರೆಸ್ ಭಾರಿ ಹಿನ್ನಡೆಯನ್ನು ಎದುರಿಸಿತು, ಅದರಲ್ಲಿ ಅವರು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು, ಹಾಗೂ ಕಳೆದ ಐದು ದಶಕಗಳಲ್ಲಿ ಕಾಂಗ್ರೆಸ್ ಜೊತೆಗಿನ ಅವರ ಪ್ರಯಾಣದ ಬಗ್ಗೆ ಮಾತನಾಡಿದರು ಮತ್ತು ಜಿ -23 ನಾಯಕರ ಬಗ್ಗೆಯೂ ಮಾತನಾಡಿದ್ದರು. ಈಗ ಕಾಂಗ್ರೆಸ್ ತೊರೆದ ದಿನಗಳ ನಂತರ ಮತ್ತೊಮ್ಮೆ ಕೈ ಪಕ್ಷದ ವಿರುದ್ದ ವಾಗ್ದಾಳಿ ಮಾಡಿದ ಗುಲಾಂ ನಬಿ ಆಜಾದ್, ‘’ಮೋದಿ ನೆಪ ಮಾತ್ರ, ಜಿ -23 ಪತ್ರವನ್ನು ಬರೆದಾಗಿನಿಂದ ಅವರು ನನ್ನೊಂದಿಗೆ ಸಮಸ್ಯೆ ಹೊಂದಿದ್ದಾರೆ" ಎಂದೂ ಸುದ್ದಿಗಾರರ ಎದುರು ಟೀಕೆ ಮಾಡಿದ್ದಾರೆ.
ಯಾರೊಬ್ಬರೂ ಅವರ ಬಗ್ಗೆ ಬರೆಯಲು, ಪ್ರಶ್ನಿಸಲು ಅವರು ಎಂದಿಗೂ ಬಯಸಿರಲಿಲ್ಲ. ಹಲವಾರು (ಕಾಂಗ್ರೆಸ್) ಸಭೆಗಳು ನಡೆದಿವೆ, ಆದರೆ ಒಂದೇ ಒಂದು ಸಲಹೆಯನ್ನು ಸಹ ಸ್ವೀಕರಿಸಲಾಗಿಲ್ಲ" ಎಂದು ಅವರು ಸೋನಿಯಾ ಗಾಂಧಿಗೆ ಸುಮಾರು 2 ವರ್ಷಗಳ ಹಿಂದೆ ಪತ್ರ ಬರೆದ 23 ಹಿರಿಯ ನಾಯಕರಲ್ಲಿ ಆಜಾದ್ ಒಬ್ಬರು ಎಂದು ಅವರು ಹೇಳಿದ್ದಾರೆ. ಪಕ್ಷದೊಳಗೆ ಅಗತ್ಯ ಸುಧಾರಣೆಗಳ ಬಗ್ಗೆ ಪತ್ರ ಬರೆದ ಈ ಗುಂಪನ್ನು G-23 ಎಂದು ಕರೆಯಲ್ಪಟ್ಟಿತು.
ಭಾರತ-ಕಾಂಗ್ರೆಸ್ ನಡುವೆ ಇಂದು ಕಂದಕ: ಮನೀಶ್ ತಿವಾರಿ
ಬಿಜೆಪಿಯೊಂದಿಗೆ ಮೈತ್ರಿ..?
ಗುಲಾಂ ನಬಿ ಆಜಾದ್ ಹೊಸ ಪಕ್ಷವನ್ನು ಆರಂಭಿಸುವ ಬಗ್ಗೆ ಇತ್ತೀಚೆಗೆ ಮಾತನಾಡಿದ ಹಿನ್ನೆಲೆ, ನೀವು ನಿಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತೀರಾ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಗುಲಾಂ ನಬಿ ಆಜಾದ್, "ಕಾಂಗ್ರೆಸ್‌ನಲ್ಲಿ ಅನಕ್ಷರಸ್ಥರು ಇದ್ದಾರೆ. ನನ್ನ ಮತದ ನೆಲೆಯಿಂದ ಬಿಜೆಪಿಗೆ ಲಾಭವಾಗುವುದಿಲ್ಲ. ಜಮ್ಮು ಕಾಶ್ಮೀರ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಜನರಿಗೆ ಇದು ಚೆನ್ನಾಗಿ ತಿಳಿದಿದೆ." ಎಂದು ಹೇಳಿದ್ದಾರೆ. ಈ ಮಧ್ಯೆ,, ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಇರಬಹುದೇ? ಎಂದು ಆಜಾದ್ ಅವರನ್ನು ಪ್ರಶ್ನಿಸಿದ್ದಕ್ಕೆ, "ನನ್ನದು ಒಂದೇ ಪಕ್ಷವಲ್ಲ... ಬೇರೆ ಪಕ್ಷಗಳೂ ಇವೆ" ಎಂದು ಅವರು ಹೇಳಿದರು.