ಭವಿಷ್ಯ ರೂಪಿಸುವ ತಾಕತ್ತು ಬಿಜೆಪಿಗೆ ಮಾತ್ರ: ಪ್ರಧಾನಿ ಮೋದಿ
ಹೊಸ ಪೀಳಿಗೆಗೆ ಭವಿಷ್ಯ ಕಟ್ಟಿಕೊಡುವ ತಾಕತ್ತು ಕಾಂಗ್ರೆಸ್‌ಗೆ ಇದೆಯಾ?, ಕರ್ನಾಟಕವನ್ನು ವಿಕಾಸಗೊಳಿಸುವ ಯೋಜನೆಯೇನಾದರೂ ಅವರ ಬಳಿ ಇದೆಯಾ?, ಇಲ್ಲ. ಈ ದೇಶದ ಯುವಶಕ್ತಿಗೆ ಉತ್ತಮ ಭವಿಷ್ಯ ರೂಪಿಸುವ ತಾಕತ್ತು ಇರುವುದು ಬಿಜೆಪಿಗೆ ಮಾತ್ರ.
ಶಿವಮೊಗ್ಗ (ಮೇ.08): ಹೊಸ ಪೀಳಿಗೆಗೆ ಭವಿಷ್ಯ ಕಟ್ಟಿಕೊಡುವ ತಾಕತ್ತು ಕಾಂಗ್ರೆಸ್‌ಗೆ ಇದೆಯಾ?, ಕರ್ನಾಟಕವನ್ನು ವಿಕಾಸಗೊಳಿಸುವ ಯೋಜನೆಯೇನಾದರೂ ಅವರ ಬಳಿ ಇದೆಯಾ?, ಇಲ್ಲ. ಈ ದೇಶದ ಯುವಶಕ್ತಿಗೆ ಉತ್ತಮ ಭವಿಷ್ಯ ರೂಪಿಸುವ ತಾಕತ್ತು ಇರುವುದು ಬಿಜೆಪಿಗೆ ಮಾತ್ರ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬಿಜೆಪಿಗೆ ಮತ ಚಲಾಯಿಸಿ ಎಂದು ಪ್ರಧಾನಿ ಮೋದಿಯವರು ಯುವ ಮತದಾರರಿಗೆ ಮನವಿ ಮಾಡಿದರು. ಶಿವಮೊಗ್ಗ ಸಮೀಪದ ಆಯನೂರಿನಲ್ಲಿ ಬಿಜೆಪಿ ಪರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಯುವ ಮತದಾರರನ್ನು ಸೆಳೆಯುವ ಯತ್ನ ನಡೆಸಿದರು. ನೀವು ಮತ ಚಲಾಯಿಸುವ ಮೊದಲು ಯೋಚಿಸಿ.
ನಿಮ್ಮ ಭವಿಷ್ಯ ಬಿಜೆಪಿಯ ಹೊರತಾಗಿ ಇನ್ನಾರಿಂದಲಾದರೂ ಸಾಧ್ಯವಾ ಎಂಬುದನ್ನು ಮನನ ಮಾಡಿಕೊಳ್ಳಿ ಎಂದು ಕರೆ ನೀಡಿದರು. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಮಾಡಿತು?. ಪ್ರತಿ ವರ್ಷ 2 ಲಕ್ಷದಂತೆ ಐದು ವರ್ಷಕ್ಕೆ 10 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿತು. ಆದರೆ, ಏನನ್ನೂ ಮಾಡಲಿಲ್ಲ. ಆದರೆ ಬಿಜೆಪಿ 13 ಲಕ್ಷ ಉದ್ಯೋಗ ಸೃಷ್ಟಿಮಾಡಿತು. ಕರ್ನಾಟಕಕ್ಕೆ ವಿದೇಶಿ ಮತ್ತು ದೇಶಿ ಬಂಡವಾಳ ಹೂಡಿಕೆ ಆಗದಿದ್ದರೆ ಯುವಕರಿಗೆ ಉದ್ಯೋಗ ಸಿಗುವುದಾದರೂ ಹೇಗೆ? ಅದಕ್ಕೆ ವೇದಿಕೆ ರೂಪಿಸಬೇಕಿದೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಬಂಡವಾಳ ಹೂಡಿಕೆದಾರರನ್ನು ಹೊರ ಹಾಕುತ್ತಿದ್ದರೆ, ನಾವು ಅವರನ್ನು ಕರೆ ತರುತ್ತಿದ್ದೇವೆ ಎಂದರು.
ರಾಜ್ಯದಲ್ಲಿ 4 ವರ್ಷದಲ್ಲಿ 1.5 ಲಕ್ಷ ಕೋಟಿ ಲೂಟಿ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ
ಕಳೆದ 9 ವರ್ಷದಲ್ಲಿ ದೇಶದಲ್ಲಿ 2 ದಿನಕ್ಕೊಮ್ಮೆ ಒಂದು ಕಾಲೇಜು, ಪ್ರತಿ ವಾರಕ್ಕೊಂದು ಯೂನಿವರ್ಸಿಟಿ ಸ್ಥಾಪನೆ ಮಾಡಿದ್ದೇವೆ. 300 ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ್ದೇವೆ. ಮುದ್ರಾ ಯೋಜನೆಯಲ್ಲಿ 20 ಲಕ್ಷ ರು.ಗಳವರೆಗೆ ಯಾವುದೇ ಭದ್ರತೆಯಿಲ್ಲದೆ ಸಾಲ ನೀಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುತ್ತಿದ್ದೇವೆ. ಎಲ್ಲ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಇದೇ ವೇಳೆ, ಮೋದಿಯವರಿಗೆ ಅಭಿಮಾನಿಯೊಬ್ಬರು ಈ ಹಿಂದೆಯೇ ರೂಪಿಸಿದ್ದ ‘ನರೇಂದ್ರ ದಾಮೋದರ ಮೋದಿ’ ಎಂದು ಹೆಸರು ಕೆತ್ತಿರುವ ಶ್ರೀಗಂಧದ ಕೆತ್ತನೆಯನ್ನು ನೀಡಿ ಗೌರವಿಸಲಾಯಿತು.
ಬಿಎಸ್‌ವೈ-ಈಶ್ವರಪ್ಪರನ್ನು ಸ್ಮರಿಸಿದ ಮೋದಿ: ಕಳೆದ ಬಾರಿ ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನದಂದು ವಿಮಾನ ನಿಲ್ದಾಣ ಲೋಕಾರ್ಪಣೆಗೆ ಆಗಮಿಸಿದ್ದೆ. ಬಳಿಕ, ಈಶ್ವರಪ್ಪನವರ ಜೊತೆ ಮಾತನಾಡಿದ್ದೇನೆ. ಯಡಿಯೂರಪ್ಪ ಅವರು ಬಹುಮತ ಗಳಿಸಿಕೊಡುವ ಭರವಸೆ ನೀಡಿದ್ದಾರೆ. ಇಂದು ನೀಟ್ ಪರೀಕ್ಷೆ ಇರುವ ಕಾರಣ ನಾನು ಬೆಂಗಳೂರಿನಲ್ಲಿ ನನ್ನ ರೋಡ್‌ಶೋ ದೂರವನ್ನು ಕಡಿಮೆ ಮಾಡಿದೆ. ಎಕ್ಸಾಮ್ ಶೆಡ್ಯೂಲ್ ಕಾರಣಕ್ಕೆ ಅವರಿಗೆ ಅನುಕೂಲವಾಗುವಂತೆ ಶೆಡ್ಯೂಲ್ ಬದಲಿಸಿದೆವು ಎಂದರು.
ರೋಡ್ ಶೋ ವೇಳೆ ಮಕ್ಕಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಪ್ರಿಯಾಂಕಾ ಗಾಂಧಿ!
ಜೊತೆಗೆ, ತಮ್ಮ ಭಾಷಣದಲ್ಲಿ ಅವರು ಅಡಕೆ ಬೆಳೆಗಾರರ ಬವಣೆ ಪ್ರಸ್ತಾಪಿಸಿ, ಹಿಂದೆಯೂ ಅಡಕೆ ಬೆಳೆಗಾರರ ಹಿತ ಕಾದಿದ್ದೇನೆ. ಈಗಲೂ ಕಾಯುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ, ಪಶ್ಚಿಮಘಟ್ಟ, ಜೋಗ ಜಲಪಾತ, ಸಾಗರದ ಸಿಗಂದೂರು ಚೌಡೇಶ್ವರಿ, ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ, ವರದಳ್ಳಿಯ ಆಧ್ಯಾತ್ಮದ ಕ್ಷೇತ್ರ ಶ್ರೀಧರಾಶ್ರಮ, ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಗಳನ್ನು ಸ್ಮರಿಸಿದರು. ‘ಏಸೂರು ಕೊಟ್ಟರೂ ಈಸೂರು ಬಿಡೆವು’ ಎಂಬ ಈಸೂರು ಸ್ವಾತಂತ್ರ್ಯ ಹೋರಾಟದ ಘೋಷವಾಕ್ಯಗಳನ್ನು ನೆನಪಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.