Bengaluru: ರೋಡ್ ಶೋ ವೇಳೆ ಮಕ್ಕಳಿಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ಪ್ರಿಯಾಂಕಾ ಗಾಂಧಿ!

ಮಹದೇವಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಅವರು, ಸಾರ್ವಜನಿಕರತ್ತ ಹೂ ಎಸೆದು ಕೈಬೀಸಿದರು. ಈ ವೇಳೆ ಮನೆಯ ಮಹಡಿ ಮೇಲೆ ನಿಂತಿದ್ದ ಮಕ್ಕಳಿಗೆ ಎರಡು ಫ್ಲೈಯಿಂಗ್‌ ಕಿಸ್‌ ಕೊಟ್ಟರು. 

Karnataka Election 2023 Priyanka Gandhi gave flying kiss to children At Bengaluru gvd

ಬೆಂಗಳೂರು (ಮೇ.08): ಮಹದೇವಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಅವರು, ಸಾರ್ವಜನಿಕರತ್ತ ಹೂ ಎಸೆದು ಕೈಬೀಸಿದರು. ಈ ವೇಳೆ ಮನೆಯ ಮಹಡಿ ಮೇಲೆ ನಿಂತಿದ್ದ ಮಕ್ಕಳಿಗೆ ಎರಡು ಫ್ಲೈಯಿಂಗ್‌ ಕಿಸ್‌ ಕೊಟ್ಟರು. ಅದಕ್ಕೆ ಪ್ರತಿಯಾಗಿ ಮಕ್ಕಳೂ ಪ್ರಿಯಾಂಕಾ ಅವರಿಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಸಂಭ್ರಮಿಸಿದರು.

ಭಾರೀ ಗಾತ್ರದ ಹೂವಿನ ಹಾರ: ರೋಡ್‌ ಶೋ ವೇಳೆ ದಾರಿಯುದ್ದಕ್ಕೂ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರಿಯಾಂಕಾ ಗಾಂಧಿ ಅವರಿಗೆ ಹೂ ಮಳೆಗೈದರು. ಜತೆಗೆ, ಸುಮಾರು 100 ಅಡಿಯ ಬೃಹತ್‌ ಗಾತ್ರದ ಹೂವಿನ ಹಾರವನ್ನು ಪ್ರಿಯಾಂಕಾ ಅವರಿಗೆ ಅರ್ಪಿಸಿದರು. ರೋಡ್‌ ಶೋ ವೇಳೆ ಜೈ ಕಾಂಗ್ರೆಸ್‌ ಎಂಬ ಘೋಷಣೆ ಮೊಳಗುತ್ತಿತ್ತು. ಕಲಾ ಮೇಳಗಳು ಸಾಥ್‌ ನೀಡಿದವು.

2ನೇ ದಿನವೂ ಮೋದಿ ರೋಡ್‌ ಶೋ ಕಮಾಲ್‌: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ

ಯುವರಾಣಿ ನೋಡಲು ಕಾದು ನಿಂತ ಜನರು: ಕಾಂಗ್ರೆಸ್‌ನ ಯುವರಾಣಿ ಪ್ರಿಯಾಂಕಾ ಗಾಂಧಿ ಅವರನ್ನು ನೋಡುವುದಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡದ ಮಹಡಿ ಮೇಲೆ ನೂರಾರು ಮಂದಿ ಕಾದು ನಿಂತುಕೊಂಡು ದೃಶ್ಯಗಳು ಕಂಡು ಬಂದವು. ಮೆರವಣಿಗೆಯಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಎನ್‌ಎಸ್‌ಯುಐನ ಧ್ವಜಗಳ ರಾರಾಜಿಸಿದವು.

ಭರ್ಜರಿ ರೋಡ್‌ ಶೋ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಭಾನುವಾರ ನಗರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದರು. ಮಹದೇವಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ನಾಗೇಶ್‌ ಪರ ಮಾರತ್‌ಹಳ್ಳಿ ಸೇತುವೆಯಿಂದ ದೊಡ್ಡನೆಕ್ಕುಂದಿ ರಸ್ತೆವರೆಗೂ ತೆರೆದ ವಾಹನದಲ್ಲಿ 3 ಕಿ.ಮೀ. ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ರೋಡ್‌ ಶೋ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕಾಂಗ್ರೆಸ್‌ ಪರ ಘೋಷಣೆಗಳನ್ನು ಕೂಗಿದ್ದು ಕಂಡುಬಂತು. ಆದರೆ ವಿಳಂಬ ಹಾಗೂ ಮಳೆ ಕಾರಣ ಶಿವಾಜಿನಗರದಲ್ಲಿ ಪ್ರಿಯಾಂಕಾ ರೋಡ್‌ ಶೋ ನಡೆಸಲಿಲ್ಲ. ಪ್ರಿಯಾಂಕಾ ಗಾಂಧಿ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿಯವರೇ ಶಿವಾಜಿನಗರದ ಸಭೆಯಲ್ಲಿ ಮಾತನಾಡಿದರು.

ಬಿರುಸಿನ ಪ್ರಚಾರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಭಾನುವಾರ ನಗರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಬೃಹತ್‌ ಹೂವಿನ ಹಾರ ಹಾಕಿ ಅವರನ್ನು ಸ್ವಾಗತಿಸಲಾಯಿತು. ಮಹದೇವಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ನಾಗೇಶ್‌ ಪರ ಮಾರತ್‌ಹಳ್ಳಿ ಸೇತುವೆಯಿಂದ ದೊಡ್ಡನೆಕ್ಕುಂದಿ ರಸ್ತೆವರೆಗೂ ತೆರೆದ ವಾಹನದಲ್ಲಿ 3 ಕಿ.ಮೀ. ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ರೋಡ್‌ ಶೋ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕಾಂಗ್ರೆಸ್‌ ಪರ ಘೋಷಣೆಗಳನ್ನು ಕೂಗಿದ್ದು ಕಂಡುಬಂತು. ಅನೇಕ ಕಲಾ ತಂಡಗಳೂ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದು ಆಕರ್ಷಕ ಪ್ರದರ್ಶನ ನೀಡಿದವು. ರಸ್ತೆ ಬದಿಯ ಕಟ್ಟಡಗಳ ಮೇಲೆ ನಿಂತು ಜನರು ರೋಡ್‌ ಶೋ ಅನ್ನು ಕಣ್ತುಂಬಿಕೊಂಡರು. ರೋಡ್‌ ಶೋ ನಡೆದ ರಸ್ತೆಯಲ್ಲಿ ಕಾಂಗ್ರೆಸ್‌ ಬಾವುಟಗಳು ರಾರಾಜಿಸಿದವು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಹಲವೆಡೆ ಪುಷ್ಪ ಮಳೆಗೆರೆದರು. ಬಳಿಕ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡರು.

ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

ನಂತರ ಶಿವಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ಶಿವಾಜಿನಗರದಲ್ಲಿ ಮುಖಂಡರು ಕಾಯುತ್ತಿದ್ದರು. ಆದರೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಗಾಂಧಿ ಆಗಮಿಸುವುದು ತಡವಾಯಿತು. ಜೊತೆಗೆ ಮಳೆಯೂ ಆರಂಭವಾಗಿದ್ದರಿಂದ ಪ್ರಿಯಾಂಕಾ ಗಾಂಧಿ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿಯವರೇ ಶಿವಾಜಿನಗರದ ಸಭೆಯಲ್ಲಿ ಮಾತನಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios