ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 1.5 ಲಕ್ಷ ಕೋಟಿ ಲೂಟಿ ಆಗಿದೆ. ಇನ್ನು ಪ್ರಧಾನಮಂತ್ರಿಗಳಿಗೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಡಬಲ್‌ ದರೋಡೆಯಾಗಿದೆ. 

ಬೆಂಗಳೂರು (ಮೇ.08): ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 1.5 ಲಕ್ಷ ಕೋಟಿ ಲೂಟಿ ಆಗಿದೆ. ಇನ್ನು ಪ್ರಧಾನಮಂತ್ರಿಗಳಿಗೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಡಬಲ್‌ ದರೋಡೆಯಾಗಿದೆ. ಪ್ರಧಾನಮಂತ್ರಿಗಳೇ 40% ಕಮಿಷನ್‌ ಲಂಚದಲ್ಲಿ ಯಾವ ಎಂಜಿನ್‌ಗೆ ಎಷ್ಟು ಪಾಲು ದೊರೆತಿದೆ. ದೆಹಲಿ ಸರ್ಕಾರಕ್ಕೆ ಇದರಲ್ಲಿ ಪಾಲು ಇಲ್ಲದಿದ್ದರೆ ಯಾಕೆ ಈವರೆಗೆ ತನಿಖೆ ನಡೆಸಿಲ್ಲ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು.

ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ ಅವರು ಬೆಂಗಳೂರಿನ ಆನೇಕಲ್‌, ಪುಲಕೇಶಿನಗರ ಹಾಗೂ ಶಿವಾಜಿನಗರದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್‌ ಶಾಸಕರನ್ನು ಕಳ್ಳತನ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗಲೂ ಕಳ್ಳತನ, ಲೂಟಿ ಮಾಡುತ್ತಿದೆ. ಬಿಜೆಪಿ ಸರ್ಕಾರಕ್ಕೆ 40 ಸಂಖ್ಯೆ ಎಂಬುದು ಅತ್ಯಾಪ್ತವಾದದ್ದು. ನಾಲ್ಕು ವರ್ಷದಿಂದ 40 ಪರ್ಸೆಂಟ್‌ ಲೂಟಿ ಮಾಡಿದ್ದಾರೆ. ಹೀಗಾಗಿ ನೀವು ಅವರಿಗೆ 40 ಸೀಟು ಮಾತ್ರ ನೀಡಿ. ಕಾಂಗ್ರೆಸ್‌ಗೆ ಈ ಬಾರಿ 150 ಕ್ಷೇತ್ರಗಳಲ್ಲಿ ಗೆಲುವು ನೀಡಿ. ಇಲ್ಲದಿದ್ದರೆ ಮತ್ತೆ ಶಾಸಕರ ಕಳ್ಳತನ ಆರಂಭಿಸುತ್ತಾರೆ ಎಂದು ಕರೆ ನೀಡಿದರು.

ಅಬ್ಬರದ ಬಹಿರಂಗ ಪ್ರಚಾರ ಇಂದು ಸಂಜೆ 6ಕ್ಕೆ ಅಂತ್ಯ: ಮದ್ಯ ಮಾರಾಟಕ್ಕೂ ನಿಷೇಧ

ಭಯೋತ್ಪಾದನೆ ಬಗ್ಗೆ ನಮಗೆ ಪಾಠ ಮಾಡುತ್ತೀರಾ?: ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹತ್ಯೆಯ ಕುರಿತು ಮಾತನಾಡಿದರೆ ಆ ಬಗ್ಗೆ ಮೋದಿಯವರು ಒಂದು ಮಾತನ್ನೂ ಆಡುವುದಿಲ್ಲ. ಆದರೆ, ಕಾಂಗ್ರೆಸ್‌ ಬಗ್ಗೆ ಭಯೋತ್ಪಾದನೆ ಹೆಸರಿನಲ್ಲಿ ಸುಳ್ಳು ಟೀಕೆ ಮಾಡಲು ಯತ್ನಿಸುತ್ತಿದ್ದಾರೆ. ನನ್ನ ಮನೆಯಲ್ಲೇ ಭಯೋತ್ಪಾದನೆಯ ಕಾರಣಕ್ಕೆ ಇಬ್ಬರು ಹುತಾತ್ಮರಾಗಿದ್ದಾರೆ, ನಮಗೆ ಭಯೋತ್ಪಾದನೆಯ ಬಗ್ಗೆ ಪಾಠ ಹೇಳಲು ಬರುತ್ತೀರಾ? ಎಂದು ಮೋದಿ ವಿರುದ್ಧ ಹರಿಹಾಯ್ದರು.

ಬಿಜೆಪಿ ಸರ್ಕಾರ ದೇಶದಲ್ಲೇ ದೊಡ್ಡ ಭ್ರಷ್ಟಸರ್ಕಾರ: ಕರ್ನಾಟಕ ಬಿಜೆಪಿ ಸರ್ಕಾರ ದೇಶದಲ್ಲೇ ದೊಡ್ಡ ಭ್ರಷ್ಟಸರ್ಕಾರವಾಗಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಚಕಾರ ಎತ್ತುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಭೂತರಾಮನಹಟ್ಟಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್‌ ಚುನವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 3 ವರ್ಷದ ಹಿಂದೆ ನೀವು ಸರ್ಕಾರ ಆಯ್ಕೆ ಮಾಡಿದ್ದೀರಿ. ಬಿಜೆಪಿಯವರು ಆ ಸರ್ಕಾರವನ್ನು ನಿಮ್ಮಿಂದ ಕದ್ದುಕೊಂಡರು. 

ದುಡ್ಡು ನೀಡಿ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚನೆ ಮಾಡಿತು. ಕಳ್ಳತನದ ಸರ್ಕಾರ ಮಾಡಿ ಕಳ್ಳತನವನ್ನೇ ಮಾಡಿದೆ. ಬಿಜೆಪಿ ಕರ್ನಾಟಕದಲ್ಲಿ ಕಳ್ಳತನದಲ್ಲಿ ದಾಖಲೆ ಮುರಿದಿದೆ. ದೇಶದಲ್ಲೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟಸರ್ಕಾರವಾಗಿದೆ ಎಂದು ಟೀಕಿಸಿದರು. ಹಿಂದಿನ 3 ವರ್ಷ ಕಾಲ ಬಿಜೆಪಿ ಸರ್ಕಾರ ನಿಮ್ಮನ್ನು ಲೂಟಿ ಮಾಡಿದೆ. ಮುಂದಿನ ಐದು ವರ್ಷಗಳ ಕಾಲ ಏನು ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಎಲ್ಲಿಯೂ ಹೇಳಲ್ಲ. ಮತ ಕೇಳುವ ಮೊದಲು ಪ್ರಧಾನಿ 40 ಪರ್ಸೆಂಟ್‌ ಸರ್ಕಾರದ ಬಗ್ಗೆ ಮಾತನಾಡಬೇಕು. ಮುಂದಿನ ಎದು ವರ್ಷ ಏನು ಮಾಡುತ್ತಾರೆ ಎಂಬುದನ್ನು ಹೇಳಬೇಕು. 

ಇದನ್ನು ಬಿಟ್ಟು ಉಗ್ರವಾದದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದದ ಬಗ್ಗೆ ನಾನು ತಿಳಿದಿದ್ದೇನೆ. ನನ್ನು ಕುಟುಂಬದಲ್ಲಿ ನನ್ನ ಅಜ್ಜಿ, ತಂದೆಯನ್ನು ಉಗ್ರರುಹತ್ಯೆ ಮಾಡಿದ್ದಾರೆ. ಪ್ರಧಾನಿಗಿಂತ ಹೆಚ್ಚು ಉಗ್ರವಾದ ಏನು? ಏನಾಗುತ್ತದೆ ಎಂಬುದು ನನಗೆ ಗೊತ್ತಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮರೆತ ಕಾಂಗ್ರೆಸ್‌: ಸಚಿವ ಅಮಿತ್‌ ಶಾ ಕಿಡಿ

‘ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿಯನ್ನು ತೆರೆದಿದ್ದೇನೆ. ದ್ವೇಷವೋ, ಪ್ರೀತಿಯೋ ಯಾರು ಗೆಲ್ಲುತ್ತಾರೆಂದು ನೋಡೋಣ. ಪ್ರೀತಿ, ಸೌಹಾರ್ದತೆಯ ಸಂಕೇತವೇ ಭಾರತದ ಇತಿಹಾಸ. ಪ್ರತಿಯೊಬ್ಬರನ್ನೂ ಪ್ರೀತಿಸುವುದು ದೇಶದ ನೀತಿ. ಮೋದಿಜಿ ಜನರ ನಡುವಿನ ಈ ಪ್ರೀತಿಯನ್ನು ನಿಮ್ಮಿಂದ ಅಳಿಸಲಾಗದು’.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ