ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ-ಸಚಿವ ಸಿ.ಸಿ. ಪಾಟೀಲ

ಚುನಾವಣೆ ಘೋಷಣೆಯಾದ ದಿನವೇ ಕೊಣ್ಣೂರ, ಬೂದಿಹಾಳ, ಬೆಳ್ಳೇರಿಯ ಕಾಂಗ್ರೆಸ್‌ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ನಾನು ಮಾಡಿದ ಅಭಿವೃದ್ಧಿ ಮೆಚ್ಚಿ ನಮ್ಮ ಪಕ್ಷಕ್ಕೆ ನೂರಾರು ಜನ ಸೇರುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳಿದರು.

No politics in development work issue says minister cc patil at gadag rav

ನರಗುಂದ (ಮಾ.31) : ಚುನಾವಣೆ ಘೋಷಣೆಯಾದ ದಿನವೇ ಕೊಣ್ಣೂರ, ಬೂದಿಹಾಳ, ಬೆಳ್ಳೇರಿಯ ಕಾಂಗ್ರೆಸ್‌ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ನಾನು ಮಾಡಿದ ಅಭಿವೃದ್ಧಿ ಮೆಚ್ಚಿ ನಮ್ಮ ಪಕ್ಷಕ್ಕೆ ನೂರಾರು ಜನ ಸೇರುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ(CC Patil) ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ(Congress worker join bjp) ಸೇರ್ಪಡೆ ಕಾರ್ಯಕ್ರಮದಲ್ಲಿ ಅವ​ರು ಮಾತನಾಡಿದರು. ಚುನಾವಣೆ ಘೋಷಣೆಯ ಅವಧಿಯ ಕೊನೆಯವರೆಗೂ ಅಭಿವೃದ್ಧಿ ಮಾಡಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಬುಧವಾರ ಬೆಳಗ್ಗೆ ಗದಗ ತಾಲೂಕಿನಲ್ಲಿ . 5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿರುವೆ. ಜತೆಗೆ ನರಗುಂದ ಕ್ಷೇತ್ರಕ್ಕೆ . 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

ಮೋದಿ(Narendra Modi)ಯವರ ನಾಯಕತ್ವದಲ್ಲಿ ದೇಶ ವಿಶ್ವಮಾನ್ಯವಾಗುತ್ತಿದೆ. ಮುಂದಿನ ಹತ್ತು ವರ್ಷವಾದರೂ ಮೋದಿಯವರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಟೀಕೆ ಟಿಪ್ಪಣಿ ಇರಬೇಕು, ಅವುಗಳು ಸತ್ಯವಿದ್ದರೆ ನಾನು ಒಪ್ಪಿಕೊಳ್ಳುವೆ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಿ ಮತಗಳು ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು. ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸ. ಟೀಕೆ ಬಿಟ್ಟು ಸ್ವಾಗತ ಮಾಡಲು ಬರುತ್ತದೆಯೇ ಅವರಿಗೆ. ಪಕ್ಷದಲ್ಲಿ ತಪ್ಪು ಆಗುವುದು ಸಹಜ, ಅವುಗಳನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಚುನಾವಣೆ ಸಂದರ್ಭವಿದೆ ಹಳೆ ನೀರು, ಹೊಸ ನೀರು ಎಲ್ಲರೂ ಒಗ್ಗಟ್ಟಿನಿಂದ ಕೂಡಿಕೊಂಡು ಚುನಾವಣೆ ಎದುರಿಸೋಣ ಎಂದರು.

ಕೊಣ್ಣೂರ ಗ್ರಾಮದಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಲವಾರು ಮಂಗಲ ಕಾರ್ಯಗಳು ಜರುಗುತ್ತಿವೆ. ಹೀಗಾಗಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ . 1 ಕೊಟಿ ಅನುದಾನ ನೀಡಿದ್ದೇನೆ. ಆರೇಳು ದಶಕಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ ನಾಡಿನ ಜನತೆಯ ಅಭಿವೃದ್ಧಿಗಾಗಿ ಏನನ್ನು ಮಾಡದೇ, ಗ್ಯಾರಂಟಿ ಇಲ್ಲದ ಕಾಂಗ್ರೆಸ್‌ ಇವಾಗ ಪುಕ್ಕಟ್ಟೆಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಹೊರಟಿದೆ ಎಂದು ಲೇವಡಿ ಮಾಡಿದರು.

ಬಾಬಣ್ಣ ಹಿರೆಹೊಳಿ ಮಾತನಾಡಿ, ರೈತನಾಯಕ ಎಂದು ಸೋಗು ಹಾಕುವವರು ರೈತನಾಯಕರಲ್ಲ. ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಿದ ಪಾಟೀಲರು ನಿಜವಾದ ರೈತನಾಯಕರಾಗಿದ್ದಾರೆ. ಈಗ ರಾಜ್ಯದ ಪ್ರಭಾವಿ ನಾಯಕರು ಮತ್ತೊಮ್ಮೆ ಚುನಾಯಿತರಾದರೆ ಸರ್ಕಾರದಲ್ಲಿ ಉನ್ನತ ಸ್ಥಾನಹೊಂದಿ ಎಲ್ಲರಿಗೂ ಆಲದ ಮರದಂತೆ ನೆರಳಾಗಿ ಸೇವೆ ಮಾಡುತ್ತಾರೆಂದು ಹೇಳಿದರು.

BIG 3: ಗದಗ ಹುಲ್ಲೂರು ಪಿಯು ಕಾಲೇಜು ಎತ್ತಂಗಡಿ ಇಲ್ಲ, ಸಿ ಸಿ ಪಾಟೀಲ್ ಭರವಸೆ

ಕೊಣ್ಣೂರ 32, ಬೂದಿಹಾಳ 9, ಬೆಳ್ಳೇರಿ 12 ಸೇರಿದಂತೆ 53 ಜನರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಅಜ್ಜನಗೌಡ ಪಾಟೀಲ, ನೇತಾಜಿಗೌಡ ಕೆಂಪನಗೌಡ್ರ, ನಿಂಗಪ್ಪ ಸೋಮಾಪೂರ, ಬಿ.ಬಿ. ಐನಾಪುರ, ಹನುಮಂತಗೌಡ ಪಾಟೀಲ, ಶ್ರೀಕಾಂತಯ್ಯ, ಚಂದ್ರು ದಂಡಿನ, ಬಸವಣ್ಣಪ್ಪ ಸುಂಕದ, ಪ್ರಕಾಶಗೌಡ ತಿರಕನಗೌಡ್ರ, ಶಂಕರ ವಾಲಿ, ರುದ್ರಗೌಡ ಚಲವಾದಿ, ಶಂಕರಗೌಡ ನಡುಮನಿ, ಶೇಖಪ್ಪ ಮರ್ಚಕ್ಕನವರ, ಎಸ್‌.ಆರ್‌. ಸಾಲಿಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios