Asianet Suvarna News Asianet Suvarna News

Assembly election: ನಿರಾಣಿ ಹೇಳಿಕೆ ಹಿನ್ನೆಲೆ; ಕಲಬುರಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!

ಕಲಬುರಗಿ ಉತ್ತರದಲ್ಲಿ ಎಂಎಲ್‌ಸಿ ಬಿಜಿ ಪಾಟೀಲರ ಪುತ್ರ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ್‌ ಮುಂಬರೋ ಅಸೆಂಬ್ಲಿ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿಕೆ ಜಿಲ್ಲೆಯ ಬಿಜೆಪಿಯಲ್ಲಿ ಭಾರಿ ಭಿನ್ನಮತಕ್ಕೆ ಕಾರಣವಾಗಿದೆ.

Nirani statement background; Dissent erupted in Kalaburagi BJP rav
Author
First Published Jan 27, 2023, 2:10 PM IST

ಕಲಬುರಗಿ (ಜ.27) : ಕಲಬುರಗಿ ಉತ್ತರದಲ್ಲಿ ಎಂಎಲ್‌ಸಿ ಬಿಜಿ ಪಾಟೀಲರ ಪುತ್ರ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ್‌ ಮುಂಬರೋ ಅಸೆಂಬ್ಲಿ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿಕೆ ಜಿಲ್ಲೆಯ ಬಿಜೆಪಿಯಲ್ಲಿ ಭಾರಿ ಭಿನ್ನಮತಕ್ಕೆ ಕಾರಣವಾಗಿದೆ.

ನಿರಾಣಿ ಹೇಳಿಕೆ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ.. ನಮ್ಮಲ್ಲಿ ಕೋರ ಕಮಿಟಿಯಲ್ಲಿ ಟಿಕೆಟ್‌ ನಿರ್ಣಯ ಮಾಡಲಾಗುತ್ತದೆ. ಅದಕ್ಕೂ ಮುನ್ನವೇ ಇಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಿರಾಣಿಗೆ ನೀಡಿದವರು ಯಾರು? ಎಂದು ಮಾಲೀಕಯ್ಯಾ ಗುಡುಗಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭ: ಸಚಿವ ಮುರುಗೇಶಿ ನಿರಾಣಿಯ ಹಳಸಲು ಭಾಷಣಕ್ಕೆ ಗೇಲಿ ಮಾಡಿದ ಜನರು!

ನಮ್ಮಲ್ಲಿ ಯಾರ ಟಿಕೆಟ್‌ ಸಹ ಇನ್ನೂ ನಿರ್ಣಯವಾಗಿಲ್ಲ, ಸ್ವತಃ ನಿರಾಣಿ ಅವರಿಗೇ ಟಿಕೆಟ್‌ ಸಿಗುತ್ತೋ ಇಲ್ಲವೋ ಎನ್ನುವುದು ಕನ್‌ಫಮ್‌ರ್‍ ಇಲ್ಲ, ಕುಟುಂಬ ರಾಜಕಾರಣಕ್ಕೆ ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ. ಹೀಗಿರುವಾಗ ನಿರಾಣಿ ಅಭ್ಯರ್ಥಿ ಘೋಷಣೆ ಮಾಡಿದ್ದು ನಾನು ಖಂಡಿಸುತ್ತೇನೆ. ಇದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಈ ವಿಚಾರ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸುವೆ ಎಂದೂ ಮಾಲೀಕಯ್ಯಾ ಹೇಳಿದ್ದಾರೆ.

ಈ ಬೆಳವಣಿಗೆಯಿಂದಾಗಿ ಸಚಿವ ಮುರುಗೇಶ ನಿರಾಣಿ ವಿರುದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಆಕ್ರೋಶ ಬಹಿರಂಗವಾಗಿದೆ. ಇದರೊಂದಿಗೆ ಸ್ಥಳೀಯವಾಗಿಯೂ ಬಿಜೆಪಿಯಲ್ಲಿ ಭಾರಿ ಇರಿರಸು ಮುರುಇಸಿನ ವಾತಾವರಣ ಉಂಟಾಗಿದೆ.

ಟಿಕೆಟ್‌ ಘೋಷಣೆ ಹಕ್ಕು ನನಗಿಲ್ಲ:

ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಚಂದು ಪಾಟೀಲ್‌ ಬಿಜೆಪಿ ಅಭ್ಯರ್ಥಿ ಎಂದು ಸಚಿವ ನಿರಾಣಿ ಘೋಷಣೆ ವಿಚಾರ ಸದ್ಯ ಕಲಬುರಗಿ ಬಿಜೆಪಿಯಲ್ಲಿ ಭಿನ್ನಮತದ ಸ್ಫೋಟಿಸುವಂತೆ ಮಾಡಿದೆ. ನಿರಾಣಿಗೆ ಅಧಿಕಾರ ಕೊಟ್ಟವರಾರು ? ನಿರಾಣಿಗೆ ತನ್ನ ಟಿಕೆಟೇ ಕನ್ಪಮ್‌ರ್‍ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿರುಗೇಟು ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ನಿರಾಣಿ ಟಿಕೆಟ್‌ ಘೋಷಣೆಯ ರೈಟ್ಸ್‌ ನನಗೆ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

59 ಯೋಜನೆಗೆ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಏಕಗವಾಕ್ಷಿ ಸಮಿತಿ ಅನುಮೋದನೆ

ಕಳೆದ ಬಾರಿ ಬಹಳ ಕಡಿಮೆ ಅಂತರದಿಂದ ಚಂದು ಪಾಟೀಲ್‌ ಸೋತಿದ್ದಾರೆ, ಅಲ್ಲದೇ ನಮ್ಮ ಪಕ್ಷದ ಹಿರಿಯರು ಇನ್‌ ಡೈರೆಕ್ಟ… ಆಗಿ ನೀವೆ ನೋಡಿಕೋಳ್ಳಿ, ಇವರೇ ಕ್ಯಾಂಡಿಡೆಟ್‌ ಅಂತ ಹೇಳಿದ್ದಾರೆ. ಆ ಕ್ಷೇತ್ರಕ್ಕೆ ಒಬ್ಬರೇ ಇರುವ ಕಾರಣ ಘೋಷಣೆ ಮಾಡಿದ್ದೇನೆ. ಉಳಿದ ಕಡೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಟಿಕೆಟ್‌ ಘೋಷಣೆ ಮಾಡ್ತಾರೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios