ಗಣರಾಜ್ಯೋತ್ಸವ ಸಮಾರಂಭ: ಸಚಿವ ಮುರುಗೇಶಿ ನಿರಾಣಿಯ ಹಳಸಲು ಭಾಷಣಕ್ಕೆ ಗೇಲಿ ಮಾಡಿದ ಜನರು!

ಗಣರಾಜೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮತನಾಡಿದ ಜಿಲ್ಲಾ ಸಚಿವ ಮುರುಗೇಶ ನಿರಾಣಿಯವರ ಮಾತುಗಳಲ್ಲಿ ಹಳಯ ಹಲವು ವಿಚಾರಗಳೇ ಹೆಚ್ಚು ಪ್ರಸ್ತಾಪಿತವಾಗಿ ಸೇರಿದ್ದ ಜನರಿಗೆ ಬೇಸರ ತರಿಸಿದವು.

Minister Murugeshi Nirani's stale speech in republicday at kalburagi rav

ಕಲಬುರಗಿ (ಜ.27) : ಗಣರಾಜೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮತನಾಡಿದ ಜಿಲ್ಲಾ ಸಚಿವ ಮುರುಗೇಶ ನಿರಾಣಿಯವರ ಮಾತುಗಳಲ್ಲಿ ಹಳಯ ಹಲವು ವಿಚಾರಗಳೇ ಹೆಚ್ಚು ಪ್ರಸ್ತಾಪಿತವಾಗಿ ಸೇರಿದ್ದ ಜನರಿಗೆ ಬೇಸರ ತರಿಸಿದವು.

ಇಸ್ರೆಲ್‌ ಮಾದರಿ ಕೃಷಿ, ಎಸ್ಸೆಸ್ಸೆಲ್ಸಿ ಫಲಿತಾಂಶ, ಟೆಕ್ಸಟೈಲ್‌ ಪಾರ್ಕ್, ಜಿಐ ಟ್ಯಾಗ್‌ ಹೊಂದಿರುವ ತೊಗರಿಗೆ ಉತ್ತೇಜನ, ಕೆಕೆಆರ್‌ಡಿಬಿ ಕಾಮಗಾರಿಗಳು ಸೇರಿದಂತೆ ಜಿಲ್ಲೆಯ ಸಂಬಂಧಿತ ಇಂತಹ ಹಲವು ಸಂಗತಿಗಳು ನಿರಾಣಿಯವರು ಜಿಲ್ಲಾ ಸಚಿವರಾದ ದಿನದಿಂದ ಹೇಳುತ್ತಲೇ ಹೊರಟಿದ್ದಾರೆ. ಗಣರಾಜ್ಯೋತ್ಸವದಲ್ಲಿಯೂ ಇಏ ವಿಷಯಗು ಪುನರಾವರ್ತನೆಯಾದವು. ದುರಂತವೆಂದರೆ ಅವರಾಡುತ್ತಿರುವ ಈ ಸಂಗತಿಗಳಲ್ಲಿ ಕಳೆದ 2 ವರ್ಷದಿಂದ ಒಂದಿಂಚೂ ಪ್ರಗತಿ ಕಂಡಿಲ್ಲ.

59 ಯೋಜನೆಗೆ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಏಕಗವಾಕ್ಷಿ ಸಮಿತಿ ಅನುಮೋದನೆ

ಬರೀ ಮಾತಲ್ಲೇ ವಿಷಯ ಪ್ರಸ್ತಾಪವಾಗುತ್ತಿದೆಯೇ ವಿನಹಃ ಕೃತಿಯಲ್ಲಿ ಏನಿದೆ? ಎಂದು ಸೇರಿದ್ದ ಜನತೆ ನಿರಾಣಿಯವರ ಮಾತುಗಳಲ್ಲಿನ ಹಳಸಲು ಸಂಗತಿಗಳನ್ನು ಹೆಕ್ಕಿ ಪರಸ್ಪರ ನಗಾಡಿದರು. ಇಂದಿನ ನಿರಾಣಿ ಮಾತುಗಳಲ್ಲಿ ಶೇ. 80 ರಷ್ಟುಹಳೆಯ ಸಂಗತಿಗಳೇ ಪುನರಾವರ್ತನೆಯಾದದ್ದು ಗಮನಾರ್ಹವಾಗಿತ್ತು. ಹೀಗಾಆಗಿ ಸೇರಿದ್ದವರು ಕಲಬುರಗಿ ಸಂಬಂಧಿತ ಹೊಸ ಸಂಗತಿಗಳೇ ಇಲ್ಲವೆ? ಎಂದು ಪ್ರಶ್ನಿಸುವಂತಾಯ್ತು.

ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ನಿರಾಣಿ ಸಾಹೇಬರೇ ಜಿಲ್ಲೆಯತ್ತ ಸುಳಿಯೋದಿಲ್ಲ, ಕೆಡಿಪಿಯಂತಹ ಮಹತ್ವದ ಸಬೆಗಳಾಗೋದಿಲ್ಲ, ಇನ್ಯಾವ ಪ್ರಗತಿ ಪರಿಶೀಲನೆ ನಡೀಬೇಕು? ಬರೀ ಮಾತಲ್ಲೇ ಪ್ರಗತಿ, ಕೃತಿಯಲ್ಲಿ ಹೀಂಗೆ ಹೊಂಟೈತಿ, ಕೋವಿಡ್‌ನಾಗ ಶಹಾಬಾದ್‌ನ ಇಎಸ್‌ಐ ದವಾಖಾನಿ ಚಾಲು ಮಾಡೋದಾಗಿ ನಿರಾಣಿ ನೀಡಿದ್ದ ಭರವಸೆಯೇ ಇಂದಿಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಜನ ಆಡಿಕೊಂಡಿದ್ದು ಕಂಡುಬಂತು. ಡಿನೋಟಿಫೈ ಕೇಸ್‌: ಬಿಎಸ್‌ವೈ, ನಿರಾಣಿಗೆ ತಾತ್ಕಾಲಿಕ ರಿಲೀಫ್‌

Latest Videos
Follow Us:
Download App:
  • android
  • ios