Asianet Suvarna News Asianet Suvarna News

59 ಯೋಜನೆಗೆ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಏಕಗವಾಕ್ಷಿ ಸಮಿತಿ ಅನುಮೋದನೆ

 ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 137ನೇ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಒಟ್ಟು 59 ಯೋಜನೆಗಳಿಗೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

59 projects got Approval for Capital Investment Proposal by the Monitoring Committee of Karnataka state govt akb
Author
First Published Jan 25, 2023, 6:40 PM IST

ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 137ನೇ ಏಕಗವಾಕ್ಷಿ ಸಮಿತಿ ಸಭೆಯಲ್ಲಿ  ಒಟ್ಟು 59 ಯೋಜನೆಗಳಿಗೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.  ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಹೆಚ್ಚಳಕ್ಕೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. 

ಮಂಗಳವಾರ ಸಂಜೆ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.  ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ತಿಳಿಸಿದ್ದಾರೆ. 

ರಾಜ್ಯವನ್ನು ಉತ್ಪಾದನಾ ತಾಣ ಮಾಡಲು ಮಸೂದೆ: ಸಿಎಂ ಬಸವರಾಜ ಬೊಮ್ಮಾಯಿ

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಗೂ ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ  ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ. 15 ಕೋಟಿ ರೂಪಾಯಿಯಿಂದ  50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.  ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ಗುಡಿ ಕೈಗಾರಿಕೆ ವೃತ್ತಿ ನಿರತರಿಗೆ 50,000: ಸಿಎಂ ಬೊಮ್ಮಾಯಿ
 
ಅನುಮೋದನೆ ನೀಡಿರುವ ಪ್ರಸ್ತಾವನೆಗಳು:
 

 ಮೈಸೂರ್ ಸ್ಟೀಲ್ಸ್ ಲಿಮಿಟೆಡ್-ಸ್ಥಳ: ಮೇಟಗಾನಹಳ್ಳಿ. ಮೈಸೂರು, ಹೂಡಿಕೆ 405.43 ಕೋಟಿ ರೂ, ಉದ್ಯೋಗ 200

 ಎನ್.ಐ.ಡಿ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್, ಸ್ಥಳ ಕೊಟೂರ್ ಬೇಲೂರ್ ಇಎಂಸಿ ಕೈಗಾರಿಕಾ ಪ್ರದೇಶ, ಹೂಡಿಕೆ 350 ಕೋಟಿ ರೂ, ಉದ್ಯೋಗ 730

 ಸಿಲಾನ್ ಬಿವೆರೇಜ್ ಲಿಮಿಟೆಡ್ ಸ್ಥಳ: ಎಪ್ ಎಮ್ ಸಿ ಜಿ ಕ್ಲಸ್ಟರ್ ಧಾರವಾಡ, ಹೂಡಿಕೆ 256.3 ಕೋಟಿ ರೂ, ಉದ್ಯೋಗ 200.

  ಬಾಲಾಜಿ ವೇರರ್ಸ್ ಪ್ರೈ  ಲಿಮೆಟೆಡ್  ಸ್ಥಳ: ಕಣಗಲ್  ಕೈಗಾರಿಕಾ ಪ್ರದೇಶ ಬೆಳಗಾವಿ ಜಿಲ್ಲೆ , ಹೂಡಿಕೆ 251.25 ಕೋಟಿ ರೂ, ಉದ್ಯೋಗ 500

 ಮಂಜುಶ್ರೀ ಟೆಕ್ನೋಪಾರ್ಕ್ ಲಿಮೆಟೆಡ್ ಸ್ಥಳ: ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ  ಪ್ರದೇಶ ಚಾಮರಾಜನಗರ , ಹೂಡಿಕೆ 253 ಕೋಟಿ ರೂ.,  ಉದ್ಯೋಗ 500

 ಕ್ಸಿಸೋಡ ಇಂಡಿಯಾ ಪ್ರೈ ಲಿಮೆಟೆಡ್  ಸ್ಥಳ:  ಶಿರಾ ಕೈಗಾರಿಕಾ  ಪ್ರದೇಶ ತುಮಕೂರು, ಹೂಡಿಕೆ 138 ಕೋಟಿ ರೂ, ಉದ್ಯೋಗ 160

 ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮೆಟೆಡ್ ಸ್ಥಳ: ಬೆಳಗಲ್ ಗ್ರಾಮ, ಬಳ್ಳಾರಿ, ಹೂಡಿಕೆ 90 ಕೋಟಿ ರೂ, ಉದ್ಯೋಗ 90

ಎ.ಸಿ.ಆರ್ ಪ್ರಾಜೆಕ್ಟ್  ಸ್ಥಳ: ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ,  ಹೂಡಿಕೆ 85 ಕೋಟಿ ರೂ, ಉದ್ಯೋಗ 350

ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್  ಸ್ಥಳ: ಎಎಲ್‍ಜಿಸಿ ಕ್ಲಸ್ಟರ್,  ಮಮ್ಮಿಗಟ್ಟಿ ಕೈಗಾರಿಕಾ  ಪ್ರದೇಶ, ಧಾರವಾಡ, ಹೂಡಿಕೆ  50 ಕೋಟಿ ರೂ, ಉದ್ಯೋಗ 563

 ಅಭಯ್ ಆಗ್ರೋ ಫುಡ್ ಪ್ರೈಲಿಮಿಟೆಡ್- ಸ್ಥಳ:-ಗಬಾರ ಗ್ರಾಮ, ಕೊಪ್ಪಳ ಜಿಲ್ಲೆ- ಹೂಡಿಕೆ 32.65 ಕೋಟಿ ರೂ,  ಉದ್ಯೋಗ -35

Follow Us:
Download App:
  • android
  • ios