Karnataka Politics: ಕಂಡವರ ಮಕ್ಕಳ ಬಾವಿಗೆ ತಳ್ಳಿ ಆಳ ನೋಡಿದ್ರು MTB,ಅಶ್ವತ್ಥ್ ನಾರಾಯಣ್

  • ಆಡಳಿತ ಪಕ್ಷಕ್ಕೆ ಸಮನಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು
  •  ಚಿಕ್ಕಮಗಳೂರು ಮತ್ತು ಗುಲ್ಬರ್ಗದಲ್ಲಿ ಕಡಿಮೆ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ
  • ಚುನಾವಣೆಯ ಫಲಿತಾಂಶ ಮುಂದೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ದಿಕ್ಸೂಚಿ
MTB  Ashwath Narayan Reason behind BJP Failure in Bengaluru Rural Says Congress New MLC Ravi snr

 ದೇವನಹಳ್ಳಿ (ಡಿ.16):   ವಿಧಾನ ಪರಿಷತ್‌ ಚುನಾವಣೆಯ (MLC Election) ಮತಗಳ ಎಣಿಕೆ ಮಂಗಳವಾರ ನಡೆದಿದ್ದು, ಇದರಲ್ಲಿ ಆಡಳಿತ ಪಕ್ಷಕ್ಕೆ ಸಮನಾಗಿ ಕಾಂಗ್ರೆಸ್‌ (Congress) ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು (Chikkamagaluru) ಮತ್ತು ಗುಲ್ಬರ್ಗದಲ್ಲಿ ಕಡಿಮೆ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ ಎಂದು ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಎಸ್‌. ರವಿರವರು ತಿಳಿಸಿ ಈ ಚುನಾವಣೆಯ ಫಲಿತಾಂಶ ಮುಂದೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್‌ (Congress) ಪಕ್ಷ ಅಧಿಕಾರಕ್ಕೆ ಬರಲು ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲಾ ಹಾಗೂ ದೇವನಹಳ್ಳಿ ತಾಲೂಕು ಕಾಂಗ್ರೆಸ್‌ (Congress) ಪಕ್ಷದ ಕಾರ್ಯಕರ್ತರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬೆಂಗಳೂರು (Bengaluru) ಗ್ರಾಮಾಂತರ ಹಾಗೂ ರಾಮನಗರ (Ramanagar) ಜಿಲ್ಲೆಯಿಂದ ಜಯಗಳಿಸಿರುವ ಎಸ್‌. ರವಿರವರಿಂದ ಪತ್ರಿಕಾಗೋಷ್ಠಿ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ರವಿರವರು ಮಾತನಾಡಿ, ಎರಡು ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಒಮ್ಮತದ ಅಭ್ಯರ್ಥಿಯಾಗಲು ಸಹಕರಿಸಿದ ಎಲ್ಲ ಮುಖಂಡರಿಗೂ ಅಲ್ಲದೆ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ಮಾಜಿ ಸಚಿವ ಕೃಷ್ಣ ಭೈರೇಗೌಡ ಅಲ್ಲದೆ ಎಲ್ಲ ಹಾಲಿ ಮತ್ತು ಮಾಜಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿ ಮುಖ್ಯವಾಗಿ ನಾನು ಅಭೂತಪೂರ್ವವಾಗಿ ಜಯ ಗಳಿಸಲು ಕಾರಣಕರ್ತರಾದ ಪ್ರಜ್ಞಾವಂತ ಮತದಾರರು ಹಾಗೂ ಮತಹಾಕಲು ಪ್ರೇರೇಪಣೆ ನೀಡಿದವರಿಗೂ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಅಭ್ಯಾಸ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಎಂಟಿಬಿ ನಾಗರಾಜು (MTB Nagaraj) ಹಾಗೂ ಅಶ್ವತ್ಥನಾರಾಯಣ್‌ ಇವರು ಎರಡು ಜಿಲ್ಲೆಯಿಂದ ಸುಮಾರು 660 ಮತಗಳಿದ್ದರೂ ಬಿಜೆಪಿ (BJP) ಅಭ್ಯರ್ಥಿಗೆ ಮತ ಕೊಡಿಸುವಲ್ಲಿ ಏಕೆ ವಿಫಲರಾದರು, ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಅಮಾಯಕ ಬಿಸಿ ನಾರಾಯಣಸ್ವಾಮಿಗೆ ಕತ್ತು ಕೊಯ್ಯುವ ಕೆಲಸ ಏಕೆ ಮಾಡಿದರು ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು (HD Kumaraswamy) ಬೇಜವಾಬ್ದಾರಿ ಹೇಳಿಕೆ ಕೊಡುವಲ್ಲಿ ನಂಬರ್‌ ಒನ್‌ ಆಗಿದ್ದಾರೆ. ಅಲ್ಲದೆ ಅವರು ಸತ್ಯ ಹರಿಶ್ಚಂದ್ರನ ಕೊನೆ ತುಂಡು ಎಂದು ಭಾವಿಸಿ ನಾನು ಏನು ಹೇಳಿದರೂ ಜನ ಕೇಳ್ತಾರೆ, ನಾನು ಹುಟ್ಟಿರೋದೆ ಅಧಿಕಾರ ಮಾಡೋದಿಕ್ಕೆ ಅನ್ನುವ ಭಾವನೆ ಹೊಂದಿದ್ದು ಸುಳ್ಳೇ ಅವರ ಮನೆದೇವರು ಎಂದು ಭಾವಿಸಿ ಸುಳ್ಳೇಶ್ವರರಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಶಕರುಗಳಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ (KPCC)  ಎ.ಸಿ. ಶ್ರೀನಿವಾಸ್‌, ಮಾಜಿ ಸಂಸದ ಸಿ. ನಾರಾಯಣಸ್ವಾಮಿ. ಮುಖಮಡರಾದ ಸಿ. ಜಗನ್ನಾಥ್‌, ಅನಂತಕುಮಾರಿ ಚಿನ್ನಪ್ಪ, ಚೇತನ್‌ಗೌಡ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌ ಸ್ವಾಗತ ಕೋರಿದರು.

ಕಾಂಗ್ರೆಸ್ ಮತ್ತಷ್ಟು ಭದ್ರ :  ಸಾಲು ಸಾಲು ಚುನಾ​ವ​ಣೆ​ಗ​ಳ (Election)​ ಸೋಲಿಗೆ ಪ್ರತೀಕಾರವಾಗಿ ವಿಧಾನ ಪರಿಷತ್‌ ಚುನಾವಣಾ (MLC Election) ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್‌, (JDS) ಮತ್ತೊಮ್ಮೆ ಸೋಲು ಅನು​ಭ​ವಿ​ಸಿ​ರು​ವುದು ಡಿಕೆ ಸಹೋ​ದ​ರರ ಕೋಟೆ​ಯಲ್ಲಿ ಕಾಂಗ್ರೆಸ್‌ (Congress) ಮತ್ತಷ್ಟು ಭದ್ರ​ಗೊಂಡಂತಾ​ಗಿದೆ.  ವಿಧಾನ ಪರಿ​ಷತ್‌ ಚುನಾ​ವ​ಣೆ​ಯನ್ನು ಎಚ್‌ಡಿಕೆ (HD Kumaraswamy) ಮತ್ತು ಡಿಕೆಶಿ ಕಾಳ​ಗ ಎಂದೇ ಬಿಂಬಿ​ತ​ವಾ​ಗಿತ್ತು. ಈ ಕಾಳ​ಗ​ದಲ್ಲಿ ಡಿಕೆ ಸಹೋ​ದ​ರರು ಹೂಡಿದ ರಣ​ತಂತ್ರಕ್ಕೆ ಪ್ರತಿ​ತಂತ್ರ ರೂಪಿ​ಸು​ವಲ್ಲಿ ಎಡ​ವಿದ ಕುಮಾ​ರ​ಸ್ವಾಮಿ ಸೋಲಿಗೆ ಶರ​ಣಾ​ಗಿದ್ದು, ಜೆಡಿ​ಎಸ್‌ ತನ್ನ ಭದ್ರಕೋಟೆಯನ್ನು ಛಿದ್ರಗೊಳಿಸಿಕೊಂಡಿದೆ.ಬೆಂಗ​ಳೂರು ಗ್ರಾಮಾಂತರ (Bengaluru Rural) ಹಾಗೂ ರಾಮ​ನ​ಗರ ಜಿಲ್ಲೆಯ ವ್ಯಾಪ್ತಿ​ಯ 8 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ 5ರಲ್ಲಿ ಜೆಡಿ​ಎಸ್‌ ಶಾಸ​ಕರೇ ಇದ್ದರು. ಕೆಲ​ವೆಡೆ ಮತ​ದಾ​ರ​ರ ಸಂಖ್ಯಾ​ಬ​ಲ​ವನ್ನೂ ಹೊಂದಿತ್ತು. ಆದರೂ ದಳ ಶರ​ಣಾ​ಗಿ​ರು​ವುದು ಚರ್ಚೆಗೆ ಗ್ರಾಸ​ವಾ​ಗಿ​ದೆ.

ಶಾಸ​ಕರು ಹಾಗೂ ಸ್ಥಳೀಯವಾಗಿ ಅಧಿ​ಕಾರ ಪ್ರಾಬ​ಲ್ಯ​ವನ್ನು ಹೊಂದಿ​ದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ  ವಿರುದ್ಧ ಪರಾ​ಭ​ವ​ಗೊಂಡಿ​ರು​ವುದು ಜೆಡಿ​ಎಸ್‌ ನಾಯ​ಕರ ಅಸಂಘ​ಟಿತ ಹೋರಾ​ಟಕ್ಕೂ ಸಾಕ್ಷಿ​ಯಾ​ಗಿ​ದೆ. ಅಲ್ಲದೆ, ದಳ​ಪ​ತಿ​ಗಳ ಅತಿ​ಯಾದ ಆತ್ಮ​ವಿ​ಶ್ವಾ​ಸವೋ ಅಥವಾ ನಾಯ​ಕತ್ವದ ಕೊರ​ತೆಯೋ ಎನ್ನು​ವ ಪ್ರಶ್ನೆ​ ಕಾಡ​ತೊ​ಡ​ಗಿ​ದೆ.

ಪ್ರತಿ ಚುನಾ​ವ​ಣೆ​ಯಂತೆ ಈ ಚುನಾ​ವ​ಣೆ​ಯ​ಲ್ಲಿಯೂ ಜೆಡಿಎಸ್‌ (JDS), ನಾಯಕತ್ವದ ಸವಾಲನ್ನು ಎದುರಿಸುತ್ತಲೇ ಬಂದಿತು. ಆರಂಭ​ದಲ್ಲಿ ಜೆಡಿ​ಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸಾರಥ್ಯದಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದವು. ಅಂತಿ​ಮ​ವಾಗಿ ಜವಾ​ಬ್ದಾರಿ ವಹಿ​ಸಿ​ಕೊಂಡ ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ ಅವರೇ ಚುನಾ​ವ​ಣೆ​ಯನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸ​ಲಿಲ್ಲ ಎಂಬ ಮಾತು​ಗಳು ಜೆಡಿ​ಎಸ್‌ ವಲ​ಯ​ದ​ಲಿಯೇ ಕೇಳಿ ಬರುತ್ತಿದೆ.

Latest Videos
Follow Us:
Download App:
  • android
  • ios