ಸೂಲಿಬೆಲೆ ಜೈಲ್‌ಗೆ ಹಾಕ್ತೇವೆ ಅನ್ನೋಕೆ ಎಂಬಿ ಪಾಟೀಲ್ ಯಾರು? ಗೃಹಮಂತ್ರಿನಾ? ಸಂಸದ ಸಂಗಣ್ಣ ಕರಡಿ ವಾಗ್ದಾಳಿ

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯೇ? ಯಾರು ಏನೂ ಮಾತನಾಡುವಂತೆ ಇಲ್ಲವಾ? ವಾಕ್‌ ಸ್ವಾತಂತ್ರ್ಯ ಸರ್ಕಾರ ಕಿತ್ತುಕೊಂಡಿದೆಯಾ? ಎಂ.ಬಿ. ಪಾಟೀಲರೇನು ಗೃಹ ಸಚಿವರಾ ಜೈಲಿಗೆ ಹಾಕಲು? ಗೃಹ ಸಚಿವರಾದರೂ ತಾವೇ ಜೈಲಿಗೆ ಹಾಕ್ತಾರಾ ?

MP sanganna karadi outraged against mb patil statement at koppal rav

,ಕೊಪ್ಪಳ (ಜೂ.7) ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯೇ? ಯಾರು ಏನೂ ಮಾತನಾಡುವಂತೆ ಇಲ್ಲವಾ? ವಾಕ್‌ ಸ್ವಾತಂತ್ರ್ಯ ಸರ್ಕಾರ ಕಿತ್ತುಕೊಂಡಿದೆಯಾ? ಎಂ.ಬಿ. ಪಾಟೀಲರೇನು ಗೃಹ ಸಚಿವರಾ ಜೈಲಿಗೆ ಹಾಕಲು? ಗೃಹ ಸಚಿವರಾದರೂ ತಾವೇ ಜೈಲಿಗೆ ಹಾಕ್ತಾರಾ ?

ಇದು, ಸಚಿವ ಎಂ.ಬಿ. ಪಾಟೀಲ್‌ ಅವರು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದಿರುವ ಕುರಿತು ಸಂಸದ ಸಂಗಣ್ಣ ಕರಡಿ ನೀಡಿರುವ ತೀಕ್ಷ$್ಣ ಪ್ರತಿಕ್ರಿಯೆ.

ಕಾಂಗ್ರೆಸ್ ಮಧ ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ: ಸಿ.ಟಿ.ರವಿ

ಮಂಗಳವಾರ ಇಲ್ಲಿ ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ತನಿಖೆ ಮಾಡುವುದಾಗಿ ಹೇಳಿರುವುದಕ್ಕೆ ನಮ್ಮದೇನು ತಕರಾರು ಇಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿಗಳೇ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಇವರು ಯಾವ ತನಿಖೆಯನ್ನಾದರು ಮಾಡಲಿ. ಆದರೆ, ರಾಜ್ಯ ಸರ್ಕಾರದ ಆಡಳಿತ ವಿಮರ್ಶೆ ಮಾಡಿದರೆ ತಪ್ಪೇನು? ಏಕಾಏಕಿ ಜೈಲಿಗೆ ಹಾಕುತ್ತೇವೆ ಎಂದರೇ ಏನರ್ಥ? ಇವರೇ ನೇರವಾಗಿ ಜೈಲಿಗೆ ಹಾಕಲು ಯಾವ ಅಧಿಕಾರ ಇದೆ? ಅದಕ್ಕೆ ಪೊಲೀಸ್‌ ವ್ಯವಸ್ಥೆ ಇದೆ. ಕಾನೂನು ಇದೆ. ಇವರಾರ‍ಯರು ಜೈಲಿಗೆ ಹಾಕಲು. ಅಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆ ಮಾಡಿರುವ ತಪ್ಪಾದರೂ ಏನು? ಎಂದು ಕಿಡಿಕಾರಿದರು.

ಸಚಿವ ಎಂ.ಬಿ.ಪಾಟೀಲ್‌ ಅವರು ಮಾತಿನ ಮೇಲೆ ನಿಗಾ ಇಟ್ಟುಕೊಂಡಿರಬೇಕು. ಈ ರೀತಿಯಾಗಿ ಮಾತನಾಡಬಾರದು ಎಂದರು.

ಸಚಿವ ಶಿವರಾಜ ತಂಗಡಗಿ ಏಕಾಏಕಿ ನವಲಿ ಜಲಾಶಯ ಕೈಬಿಡುತ್ತೇವೆ, ನಾವು ಹದಿನೈದು ನವಲಿ ಸಮಾಂತರ ಜಲಾಶಯ ನಿರ್ಮಾಣ ಮಾಡುತ್ತೇವೆ ಎಂದು ಹೇಳಿರುವುದು ಸರಿಯಲ್ಲ ಎಂದು ಸಂಸದ ಸಂಗಣ್ಣ ಕರಡಿ ಆಕ್ಷೇಪಿಸಿದರು.

ಸಚಿವರು ಮೊದಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಬೇಕು, ನಂತರ ಆ ಕುರಿತು ಹೇಳಿಕೆ ನೀಡಬೇಕು. ಆದರೆ, ಏಕಾಏಕಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ನಮ್ಮ ಸರ್ಕಾರ ನವಲಿ ಜಲಾಶಯ ನಿರ್ಮಾಣ ಮಾಡಲು ಹಣ ತೆಗೆದಿರಿಸಿದೆ. ಅದರಲ್ಲೂ ಡಿಪಿಆರ್‌ ಸಹ ಮಾಡಿದೆ. ಅದನ್ನು ಕೈಬಿಡುವುದು ಎಷ್ಟುಸರಿ? ಹಾಗೆ ಮಾಡಿದರೆ ಇದರಲ್ಲಿಯೂ ಅವರು ರಾಜಕೀಯ ಮಾಡಿದಂತಾಗುತ್ತದೆ ಎಂದರು.

ಒಬ್ಬ ಮಂತ್ರಿಯಾಗಿ ಸಾಮಾನ್ಯ ಪ್ರಜೆಗೆ ಆಡುವ ಮಾತಾ ಇದು: ಎಂ.ಬಿ.ಪಾಟೀಲ್‌ ಹೇಳಿಕೆಗೆ ಸೂಲಿಬೆಲೆ ತಿರುಗೇಟು

ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಹೇಳಿರುವುದು ಸರಿಯಲ್ಲ. ಇದನ್ನು ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದರ ವಿರುದ್ಧ ಬೀದಿಗೀಳಿದು ಹೋರಾಟ ಮಾಡುತ್ತೇವೆ ಎಂದರು.

ಖಾಸಗಿ ಬಸ್ಸಿನಲ್ಲಿಯೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಬೇಕು. ಬಹುತೇಕ ಭಾಗಗಳಲ್ಲಿ ಖಾಸಗಿ ಬಸ್‌ಗಳೇ ಇವೆ. ಹೀಗಾಗಿ, ಅದರಲ್ಲಿ ಸುತ್ತಾಡುವ ಮಹಿಳೆಯರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದರು.

Latest Videos
Follow Us:
Download App:
  • android
  • ios