Asianet Suvarna News Asianet Suvarna News

Breaking: ಬುಡಕಟ್ಟು ನಾಯಕ ಮೋಹನ್‌ ಮಾಝಿ ಒಡಿಶಾ ಮುಖ್ಯಮಂತ್ರಿ

Tribal Leader Mohan Charan Majhi ಬುಡಕಟ್ಟು ನಾಯಕ ಮೋಹನ್‌ ಚರಣ್‌ ಮಾಜಿ ಒಡಿಶಾ ರಾಜ್ಯಕ್ಕೆ ಬಿಜೆಪಿಯ ಮೊಟ್ಟಮೊದಲ ಸಿಎಂ ಆಗಿ ಘೋಷಣೆಯಾಗಿದ್ದಾರೆ. ನವೀನ್‌ ಪಟ್ನಾಯಕ್‌ ಅವರ 24 ವರ್ಷದ ಅಧಿಕಾರವನ್ನು ಕೊನೆಗಾಣಿಸಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

Mohan Charan Majhi BJP first Odisha Chief Minister san
Author
First Published Jun 11, 2024, 6:10 PM IST

ಭುವನೇಶ್ವರ (ಜೂ.11): ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಅಧಿಕಾರಾವಧಿ ಕಳೆದ ವಿಧಾನಸಭೆ ಚುನಾವಣೆಯ ಸೋಲಿನೊಂದಿಗೆ ಮುಕ್ತಾಯವಾಗಿದೆ. ಬಹುಮತದೊಂದಿಗೆ ಒಡಿಶಾದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಬುಡಕಟ್ಟು ನಾಯಕ ಮೋಹನ್‌ ಚರಣ್‌ ಮಾಝಿ ಅವರನ್ನು ರಾಜ್ಯದ ಸಿಎಂ ಆಗಿ ಘೋಷಣೆ ಮಾಡಿದೆ. ಆ ಮೂಲಕ ಒಡಿಶಾ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದರ್ ಯಾದವ್ ಅವರು ವೀಕ್ಷಕರಾಗಿ ಭಾಗವಹಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಡಿಶಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಯಿತು. ಕನಕ ​​ವರ್ಧನ್ ಸಿಂಗ್ ದೇವ್ ಅವರು ಒಡಿಶಾದ ಮುಂದಿನ ಉಪ ಮುಖ್ಯಮಂತ್ರಿಯಾಗಲಿದ್ದಾರೆ.2000 ಹಾಗೂ 2004ರಲ್ಲಿ ಬಿಜೆಡಿ ಮೈತ್ರಿಕೂಟದ ಪಾಲುದಾರ ಪಕ್ಷವಾಗಿ ಒಡಿಶಾದಲ್ಲಿ ಬಿಜೆಪಿ ಆಳ್ವಿಕೆ ಮಾಡಿತ್ತು. ಆದರೆ, ಸ್ವಂತ ಬಲದಲ್ಲಿ ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿರುವುದು ಇದೇ ಮೊದಲಾಗಿದೆ. ಮೋಹನ್ ಚರಣ್ ಮಾಝಿ ಅವರು ಕಿಯೋಂಜಾರ್ ಕ್ಷೇತ್ರದಲ್ಲಿ ಸುಮಾರು 87,815 ಮತಗಳ ಅಂತರದಿಂದ ಗೆದ್ದಿದ್ದಾರೆ. ಕ್ಷೇತ್ರದಿಂದ ಬಿಜೆಡಿಯ ಮಿನಾ ಮಾಝಿ ಅವರನ್ನು ಸೋಲಿಸಿದರು.

ಜೂನ್‌ 12ಕ್ಕೆ ಒಡಿಶಾಕ್ಕೆ ಅರ್ಧದಿನ ರಜೆ: ಹೊಸ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಲದ ಪ್ರಮಾಣವಚನ ಸಮಾರಂಭದ ಕಾರಣ ಜೂನ್ 12 ರಂದು ಮಧ್ಯಾಹ್ನ 1 ಗಂಟೆಯ ನಂತರ ಭುವನೇಶ್ವರದಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳಿಗೆ ಅರ್ಧದಿನ ರಜೆ ನೀಡಲಾಗುವುದು ಎಂದು ಒಡಿಶಾ ಸರ್ಕಾರ ಘೋಷಿಸಿತು.

 

First Woman Muslim MLA of Odisha: ಒಡಿಶಾದ ಮೊದಲ ಮುಸ್ಲಿಂ ಶಾಸಕಿ ಓದಿದ್ದು ಎಂಜಿನೀಯರಿಂಗ್!

ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಆದೇಶವು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (BMC) ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ಕಂದಾಯ ಮತ್ತು ಮ್ಯಾಜಿಸ್ಟ್ರಿಯಲ್ ನ್ಯಾಯಾಲಯಗಳಿಗೆ (ಕಾರ್ಯನಿರ್ವಾಹಕ) ಅನ್ವಯಿಸುತ್ತದೆ.

ಎನ್‌ಡಿಎ ಅಂದ್ರೆ ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್: ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ

Latest Videos
Follow Us:
Download App:
  • android
  • ios