Asianet Suvarna News Asianet Suvarna News

ರಮೇಶ್‌ ಜಾರಕಿಹೊಳಿಗೆ ಸುಳ್ಳು ಹೇಳುವ ಚಟವಿದೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ

ಮಾಜಿ ಸಚಿವ ರಮೇಶ ಜಾರಕಿಹೊಳಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವ ಚಟ ಬಹಳ ಇದೆ. ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ವರ್ಚಸ್ಸು ಕಡಿಮೆ ಮಾಡಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದರು. 

MLC Channaraja Hattiholi Hits Against Mla Ramesh Jarkiholi At Belagavi gvd
Author
First Published Jan 30, 2023, 11:31 PM IST

ಬೆಳಗಾವಿ (ಜ.30): ಮಾಜಿ ಸಚಿವ ರಮೇಶ ಜಾರಕಿಹೊಳಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವ ಚಟ ಬಹಳ ಇದೆ. ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ ವರ್ಚಸ್ಸು ಕಡಿಮೆ ಮಾಡಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದರು. ಬೆಳಗಾವಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೇ ಹೆಬ್ಬಾಳ್ಕರ್‌ ವಿರುದ್ಧ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ. ಅಸಭ್ಯವಾಗಿ ಮಾತನಾಡುವ ಚಟ ಬಿಡದಿದ್ದರೆ ರಮೇಶ ಜಾರಕಿಹೊಳಿಗೆ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರಮೇಶ ಜಾರಕಿಹೊಳಿ ಸುಳ್ಳು ಆರೋಪ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊನ್ನೆ ಸೂಳೇಬಾವಿಯಲ್ಲಿ ಪ್ರತಿ ಓಟಿಗೆ .6 ಸಾವಿರ ಕೊಡುವುದಾಗಿ ಹೇಳಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ., ಮರು ದಿನ ನಾನು ಹಾಗೆ ಹೇಳಿಯೇ ಇಲ್ಲ ಎಂದರು. ಸೌಭಾಗ್ಯಲಕ್ಷ್ಮೇ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಮಾಡುವುದಾಗಿ ಹೇಳಿ ಸಾಲ ಎತ್ತಿ ಘಟಕವನ್ನೇ ಮಾಡಲಿಲ್ಲ. ಈಗ ಕಾರ್ಖಾನೆ ದಿವಾಳಿಯಾಗಿದೆ ಎಂದು ಸಾರಿದ್ದಾರೆ. ಇಂಥವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಅವರ ಅಪರಾಧವನ್ನು ನಮ್ಮ ಮೇಲೆ ತಿರುಗಿಸುವ ಯತ್ನ ಮಾಡುತ್ತಿದ್ದಾರೆ. ಹರ್ಷ ಸಕ್ಕರೆ ಕಾರ್ಖಾನೆ ದಾಖಲೆಗಳು ವೆಬ್‌ಸೈಟ್‌ನಲ್ಲಿ ಎಲ್ಲರಿಗೂ ಲಭ್ಯವಿವೆ. ಒಮ್ಮೆ ಅವ್ಯವಹಾರ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕೀಳುಮಟ್ಟದ ಹೇಳಿಕೆ ಕೊಡುವುದನ್ನು ಜಾರಕಿಹೊಳಿ ಮೊದಲು ನಿಲ್ಲಿಸಲಿ. ಅವರಷ್ಟುಕೀಳುಮಟ್ಟಕ್ಕೆ ಇಳಿಯಲು ನಮಗೆ ಸಾಧ್ಯವಿಲ್ಲ. ನಾನು ಮತ್ತು ಲಕ್ಷ್ಮೇ ಹೆಬ್ಬಾಳಕರ ಇಬ್ಬರೂ ವಿದ್ಯಾವಂತರಿದ್ದೇವೆ. ಜನರು ನಮ್ಮನ್ನು ಗೌರವದಿಂದಲೇ ನೋಡುತ್ತಾರೆ ಎಂದು ಗುಡುಗಿದ್ದಾರೆ.

ಲಕ್ಷ್ಮೇ ಹೆಬ್ಬಾಳ್ಕರ್‌ಗೆ ಟಿಕೆಟ್‌ ಕೊಡಿಸಿದ್ದೇ ನಾನು ಎಂದು ಹೇಳಿರುವ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಹಟ್ಟಿಹೊಳಿ, ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದು ಜಿ.ಪರಮೇಶ್ವರ್‌. ಆಗ ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಿರಲಿಲ್ಲ. ಪರಮೇಶ್ವರ ಅಧ್ಯಕ್ಷರಾಗಿದ್ದರು. ಟಿಕೆಟ್‌ ಕೊಡಿಸಲು ರಮೇಶ ಜಾರಕಿಹೊಳಿ ಸೋನಿಯಾ ಗಾಂಧಿ ಅವರಿಗಿಂತ, ರಾಹುಲ… ಗಾಂಧಿ ಅವರಿಗಿಂತ, ಪ್ರಿಯಾಂಕಾ ಗಾಂಧಿ ಅವರಿಗಿಂತ, ಡಾ.ಜಿ.ಪರಮೇಶ್ವರ ಅವರಿಗಿಂತ, ಕಾಂಗ್ರೆಸ್‌ ಪಕ್ಷಕ್ಕಿಂತ ದೊಡ್ಡವರಾ ಎಂದು ಪ್ರಶ್ನಿಸಿದರು. ಲಕ್ಷ್ಮೇ ಹೆಬ್ಬಾಳ್ಕರ ತಮ್ಮ ಸ್ವಂತ ಬಲದಿಂದ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ರಮೇಶ ಜಾರಕಿಹೊಳಿ ಗೆಲ್ಲಿಸಿಲ್ಲ. ಲಕ್ಷ್ಮೇ ಹೆಬ್ಬಾಳ್ಕರ ಅವರನ್ನು ಕುಗ್ಗಿಸಲು ರಮೇಶ ಜಾರಕಿಹೊಳಿ ಇಲ್ಲಸಲ್ಲದ ಆರೋಪ ಮಾತನಾಡುತ್ತಿದ್ದಾರೆ. 

ಕೈ ಮುಗಿದು ಪ್ರಾರ್ಥಿಸುವೆ, ಬಾಲ​ಕೃಷ್ಣರ ಸೋಲಿಸಬೇಡಿ: ಸಿದ್ದ​ರಾ​ಮಯ್ಯ

ಬಿಜೆಪಿ ಸೇರುವಂತೆ ನಮಗೂ ಆಹ್ವಾನ ನೀಡಿದ್ದರು. ಆದರೆ ನಾವು ಅದಕ್ಕೆ ಒಪ್ಪಲಿಲ್ಲ. ಸಮ್ಮಿಶ್ರ ಸರ್ಕಾರ ಕೆಡುವುದು ಬೇಡ. ನೀವು ಹೋಗಬೇಡಿ ಎಂದಿದ್ದೆವು. ಹಾಗಾಗಿ, ನಮ್ಮ ಬಗ್ಗೆ ಅವರಿಗೆ ವೈಮನಸ್ಸು ಆರಂಭವಾಯಿತು ಎಂದು ಚನ್ನರಾಜ ವಿವರಿಸಿದರು. ನಾವು ಬೆಳಗಾವಿ ಜಿಲ್ಲೆಯ ಎಲ್ಲ 18 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುತ್ತೇವೆ. ಇವರಂತೆ ವೈಯಕ್ತಿಕ ಜಿದ್ದು ಇಟ್ಟುಕೊಂಡು ಪ್ರಚಾರ ಮಾಡುವುದಿಲ್ಲ. ಪಕ್ಷದ ತತ್ವ, ಸಿದ್ಧಾಂತದ ಮೇಲೆ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ಮೇಲಿದೆ. ಆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತೇವೆ. ಅದರ ಭಾಗವಾಗಿ ಗೋಕಾಕ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios