ವಿಪಕ್ಷ ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ತಾಳ್ಮೆಯಿಂದ ಕೆಲಸ ಮಾಡಬೇಕು. ಆಡಳಿತ ಪಕ್ಷದ ಸಹಕಾರವನ್ನು ಪಡೆದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಅನಿವಾರ್ಯ ಸಮಯಗಳಲ್ಲಿ ಅಧಿಕಾರಿಗಳು ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕೆ ಬೇಸರಿಸಿಕೊಳ್ಳುವುದು ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಕೆ.ಆರ್‌.ಪೇಟೆ (ಜು.17) ವಿಪಕ್ಷ ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ತಾಳ್ಮೆಯಿಂದ ಕೆಲಸ ಮಾಡಬೇಕು. ಆಡಳಿತ ಪಕ್ಷದ ಸಹಕಾರವನ್ನು ಪಡೆದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಅನಿವಾರ್ಯ ಸಮಯಗಳಲ್ಲಿ ಅಧಿಕಾರಿಗಳು ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕೆ ಬೇಸರಿಸಿಕೊಳ್ಳುವುದು ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಶಾಸಕ ಎಚ್‌ .ಟಿ.ಮಂಜು ಅವರ ಹಕ್ಕುಚ್ಯುತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, 1994ರಲ್ಲಿ ಈಗ ಮಂಜು ಅವರಿರುವ ಸ್ಥಿತಿಯಲ್ಲಿ ನಾನೂ ಕೂಡಾ ಇದ್ದೆ. ಅಂದು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು. ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ ನಾನು ಜೆಡಿಎಸ್‌ ಶಾಸಕ. ನನ್ನ ಲೆಟರ್‌ ಹೆಡ್‌ನಲ್ಲಿ ಒಂದು ಡಿ ಗ್ರೂಪ್‌ ನೌಕರನನ್ನು ಕೂಡಾ ನನ್ನ ಕ್ಷೇತ್ರಕ್ಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ಹತಾಶನಾಗದೇ ಇರುವ ಅವಕಾಶದಿಂದಲೇ ಜನರ ಸೇವೆ ಮಾಡಿ ಗಮನ ಸೆಳೆದಿದ್ದೆ. ಹಾಗೆಯೆ ಮಂಜು ಕೂಡಾ ಹತಾಶರಾಗಬಾರದು. ನಾನೂ ಕೂಡಾ ಎಲ್ಲಾ ವಿಷಯಗಳಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.

ತಪ್ಪು ಮಾಹಿತಿ ನೀಡಿ ಸಚಿವರ ಮೂಲಕ ಪರಿಹಾರ ಪತ್ರ ವಿತರಣೆ; ತಹಸೀಲ್ದಾರ್‌ ವಿರುದ್ಧ ಶಾಸಕ ಎಚ್‌.ಟಿ.ಮಂಜು ಆಕ್ರೋಶ

ಕೆಲವೊಮ್ಮೆ ಹೀಗಾಗುತ್ತದೆ. ನಾನು ಯಾವತ್ತೂ ಕೂಡಾ ಶಾಸಕರ ಹಕ್ಕುಚ್ಯುತಿಯನ್ನು ಬೆಂಬಲಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಮಂಜು ಅವರಿಗೆ ಸಹಕರಿಸುತ್ತೇನೆ. ಎಲ್ಲ ಕಾಲದಲ್ಲಿಯೂ ನಮ್ಮದೇ ಪಕ್ಷ ಅಧಿಕಾರದಲ್ಲಿರುವುದು ಸಾಧ್ಯವಿಲ್ಲ. ಕೆಲವೊಮ್ಮೆ ಸಮ್ಮಿಶ್ರ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದು ಆಡಳಿತ ನಡೆಸಿವೆ. ಎಚ್‌.ಟಿ.ಮಂಜು ತಮ್ಮ ಹಕ್ಕು ಚ್ಯುತಿಯಾಗಿದೆ ಎನ್ನುವ ಭಾವನೆಗೆ ಬರಬಾರದು. ಒಮ್ಮೆ ನಾವು ನಿರಾಸೆಗೆ ಒಳಗಾದರೆ ಉತ್ಸಾಹ ಭಂಗವಾಗಿ ನಮ್ಮ ಕಾರ್ಯ ವೇಗಕ್ಕೆ ತಡೆಯಾಗುತ್ತದೆ ಎಂದು ಸಲಹೆ ನೀಡಿದರು.

ಚಿತ್ತನಾಳಮ್ಮ ದೇಗುಲಕ್ಕೆ ಸಚಿವ ಸಿಆರ್‌ಎಸ್‌ ಭೇಟಿ

ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ಶ್ರೀ ಚಿತ್ತನಾಳಮ್ಮ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಬೇಕಿರುವ ರಾಜಗೋಪುರ, ಸಮುದಾಯ ಭವನ, ಪ್ರಾಂಗಣ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ದೇವಾಲಯದ ಆಡಳಿತ ಮಂಡಳಿಯವರು ನೀಡಿರುವ ಮನವಿಯ ಮೇರೆಗೆ ಸರ್ಕಾರದ ವತಿಯಿಂದ ಒಂದು ಕೋಟಿ ರು. ಅನುದಾನ ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಾಲು ದರ ಹೆಚ್ಚಳ, ಸಿಎಂ ತೀರ್ಮಾನವೇ ಅಂತಿಮ: ಸಚಿವ ಚಲುವರಾಯಸ್ವಾಮಿ

ಹೆಚ್ಚುವರಿ ಅನುದಾನವನ್ನು ಭಕ್ತಾದಿಗಳಿಂದ ಸಂಗ್ರಹಿಸಿ ದೇವಾಲಯದ ಅವಶ್ಯಕತೆಗಳಿಗೆ ಬಳಸಿಕೊಂಡು ಉತ್ತಮವಾಗಿ ದೇವಾಲಯವನ್ನು ಅಭಿವೃದ್ಧಿಪಡಿಸುವಂತೆ ದೇವಸ್ಥಾನ ಸಮಿತಿಗೆ ಸಲಹೆ ನೀಡಿದರು. ಪ್ರಧಾನ ಪೋಷಕ ಎಚ್‌.ಎಲ್‌. ಶಿವಣ್ಣ, ದೇವಸ್ಥಾನದ ಅಧ್ಯಕ್ಷ ಎಚ್‌.ಬಿ. ರಾಮು, ಪದಾಧಿಕಾರಿಗಳಾದ ಸಿ.ಕೆ. ನಾಗರಾಜು, ಪಟೇಲ್‌ ರಾಮು, ರವಿ, ಜಟ್ಟಿಕುಮಾರ್‌, ಸದಾನಂದ, ನಿಂಗೇಗೌಡ, ಕುಮಾರ್‌, ಶಿವಲಿಂಗಯ್ಯ, ನಿಂಗರಾಜು, ಚಂದನ್‌ ಮುಖಂಡರಾದ ಎಂ.ಬಿ. ಶಂಕರೇಗೌಡ, ರಾಮು, ಚೇತನ್‌, ತ್ಯಾಗರಾಜು, ನಾರಾಯಣ ಇತರರಿದ್ದರು. ಇದೇ ವೇಳೆ ಸಚಿವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.