ಹಾಲು ದರ ಹೆಚ್ಚಳ, ಸಿಎಂ ತೀರ್ಮಾನವೇ ಅಂತಿಮ: ಸಚಿವ ಚಲುವರಾಯಸ್ವಾಮಿ
ಹಾಲು ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಹೀಗಾಗಿ ದರ ಏರಿಕೆ ಬಗ್ಗೆ ನನ್ನದೇ ಆದ ಸ್ಪಷ್ಟಆಭಿಪ್ರಾಯ ಹೇಳಲು ಬರುವುದಿಲ್ಲ. ಎಲ್ಲರೂ ಒಟ್ಟಾಗಿ ಚರ್ಚಿಸಿ ಹಾಲು ದರ ಹೆಚ್ಚಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮದ್ದೂರು (ಜು.16): ಹಾಲು ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಂಎಫ್ ಆಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಬೇಕಾಗಿತ್ತು. ಆದರೆ, ಸಭೆ ಮುಂದೂಡಲಾಗಿದೆ ಎಂದರು. ಹಾಲಿನ ದರ ಏರಿಕೆ ವಿರೋಧಿಸಲು ನಾನು ವಿಪಕ್ಷ ಶಾಸಕನಲ್ಲ. ಆಡಳಿತಾರೂಢ ಪಕ್ಷದಲ್ಲಿ ಸಚಿವನಾಗಿದ್ದೇನೆ.
ಹೀಗಾಗಿ ದರ ಏರಿಕೆ ಬಗ್ಗೆ ನನ್ನದೇ ಆದ ಸ್ಪಷ್ಟಆಭಿಪ್ರಾಯ ಹೇಳಲು ಬರುವುದಿಲ್ಲ. ಎಲ್ಲರೂ ಒಟ್ಟಾಗಿ ಚರ್ಚಿಸಿ ಹಾಲು ದರ ಹೆಚ್ಚಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಂದಿನ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನಾದರೂ ಮಾಡಿಕೊಳ್ಳಲಿ ಅಥವಾ ವೀಲಿನವಾದರೂ ಆಗಲಿ ಅದು ಆ ಪಕ್ಷದ ನಾಯಕರ ವಿವೇಚನೆಗೆ ಬಿಟ್ಟವಿಚಾರವಾಗಿದೆ. ಈ ಎರಡೂ ಪಕ್ಷಗಳು ಚುಣಾವಣೆಯಲ್ಲಿ ಹೊಂದಾಣೆಕೆ ಮಾಡಿಕೊಳ್ಳುತ್ತವೆ ಎಂಬ ಬಗ್ಗೆ ಮಾಹಿತಿ ಇದೆ. ವಿಲೀನ ಸಂಬಂಧ ಕಾದು ನೋಡುವ ರಾಜಕಾರಣ ನಮ್ಮದು ಎಂದರು.
35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ
ಜುಲೈ 24 ರಂದು ಚುನಾವಣೆ: ಮುಂದೂಡಲಾಗಿದ್ದ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಚುನಾವಣೆಯನ್ನು ಜು.24ರಂದು ನಿಗದಿ ಮಾಡಲಾಗಿದೆ. ಕಳೆದ ಜು.6 ರಂದು ಚುನಾವಣೆ ನಿಗದಿ ಮಾಡಲಾಗಿತ್ತು. ಆದರೆ, ಕೋರಂ ಆಭಾವದಿಂದ ಮುಂದೂಡಲಾಗಿತ್ತು. ಚುನಾವಣೆ ಒಂದು ಪಕ್ಷದ ಚೌಕಟ್ಟಿನಲ್ಲಿ ನಡೆಯುವುದಿಲ್ಲ. ಒಕ್ಕೂಟದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣದ ತನಿಖೆ ಹಂತದಲ್ಲಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿದ್ದು, ಸಹಕಾರ ಕಾಯಿದೆ 64ರ ಅನ್ವಯ ತನಿಖೆ ನಡೆಸಲು ಆದೇಶ ನೀಡಲಾಗಿದೆ.
ತನಿಖೆ ತ್ವರಿತವಾಗಿ ನಡೆಸಲು ನಮ್ಮ ಸರ್ಕಾರ ನಿರ್ಧರಿಸಿದೆ. ತಪ್ಪಿತಸ್ತರಿಗೆ ಶಿಕ್ಷೆಯಾಗುವುದು ಖಚಿತ ಎಂದರು. ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ, ಕದಲೂರು ಸೊಸೈಟಿ ಅಧ್ಯಕ್ಷ ಕೆ.ಅರ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಸಿ.ಬಸವರಾಜು, ಎಂ.ಪಿ.ಅಮರಬಾಬು, ಸದಸ್ಯ ಸಿದ್ದರಾಜು, ಮುಖಂಡರಾದ ಅರುಣ, ಹರೀಶ್ ಇದ್ದರು.
ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಶೂನ್ಯ: ಯೋಜನಾಧಿಕಾರಿಗೆ ಸಂಸದೆ ಸುಮಲತಾ ಕ್ಲಾಸ್
ಕುಮಾರಸ್ವಾಮಿಯನ್ನು ರೈತನ ಮಗ ಎಂದು ಯಾರೂ ಕರೆಯಲ್ಲ: ಭ್ರಷ್ಟಾಚಾರಕ್ಕೆ ಜಾತಿ ಇದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ವಿರುದ್ಧ ಮಾತನಾಡಿದರೆ ತಮಗೆ ಅನುಕೂಲ ಆಗುತ್ತದೆ ಎಂಬ ಭಾವನೆಯಿಂದ ಹಾಗೆ ಮಾತನಾಡುತ್ತಾರೆ. ಸಮಯ ಬಂದಾಗ ಅವರಿಗೆ ಉತ್ತರಿಸುವೆ ಎಂದರು. ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನೂ ರೈತನ ಮಗ ಎಂದೇ ಕರೆಯುತ್ತಾರೆ. ಆದರೆ, ಕುಮಾರಸ್ವಾಮಿ ಅವರನ್ನು ಯಾರಾದರೂ ರೈತನ ಮಗ ಎಂದು ಕರೆದಿದ್ದನ್ನು ನೋಡಿಲ್ಲ. ಅವರನ್ನು ‘ದೇವೇಗೌಡರ ಮಗ’ ಎಂದೇ ಗುರುತಿಸೋದು ಎಂದು ವ್ಯಂಗ್ಯವಾಡಿದರು.