ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಶಕ್ತಿ ತುಂಬಿದಂತೆ: ಜಮೀರ್‌ ಅಹ​ಮದ್‌

ನಾಡಿನ ಅಲ್ಪ​ಸಂಖ್ಯಾ​ತರು ಒಂದು ಮತ ಜೆಡಿ​ಎಸ್‌ಗೆ ಚಲಾ​ಯಿ​ಸಿ​ದರು ಅದು ಬಿಜೆಪಿಗೆ ಶಕ್ತಿ ತುಂಬಿ​ದಂತಾ​ಗು​ತ್ತದೆ ಎಂದು ಚಾಮ​ರಾ​ಜ​ಪೇಟೆ ಕ್ಷೇತ್ರದ ಶಾಸಕ ಜಮೀರ್‌ ಅಹ​ಮದ್‌ ಹೇಳಿ​ದರು. 

MLA Zameer Ahmed Khan Slams On JDS At Ramanagara gvd

ರಾಮ​ನ​ಗರ (ಜ.30): ಕಾಂಗ್ರೆಸ್‌ ಪಕ್ಷ ಅಧಿ​ಕಾ​ರ​ದ​ಲ್ಲಿ​ರುವ ರಾಜ್ಯ​ಗ​ಳಲ್ಲಿ ಅಲ್ಪ​ಸಂಖ್ಯಾ​ತರು ನೆಮ್ಮ​ದಿಯ ಜೀವನ ನಡೆ​ಸು​ತ್ತಿ​ದ್ದಾರೆ. ನಮ್ಮ ಪಕ್ಷದಿಂದ ಮಾತ್ರ ಅಲ್ಪ​ಸಂಖ್ಯಾತರ ಹಿತ ಕಾಪಾ​ಡಲು ಸಾಧ್ಯ. ನಾಡಿನ ಅಲ್ಪ​ಸಂಖ್ಯಾ​ತರು ಒಂದು ಮತ ಜೆಡಿ​ಎಸ್‌ಗೆ ಚಲಾ​ಯಿ​ಸಿ​ದರು ಅದು ಬಿಜೆಪಿಗೆ ಶಕ್ತಿ ತುಂಬಿ​ದಂತಾ​ಗು​ತ್ತದೆ ಎಂದು ಚಾಮ​ರಾ​ಜ​ಪೇಟೆ ಕ್ಷೇತ್ರದ ಶಾಸಕ ಜಮೀರ್‌ ಅಹ​ಮದ್‌ ಹೇಳಿ​ದರು. ಕಳೆದ ಚುನಾ​ವ​ಣೆ​ಯಲ್ಲಿ ಅಲ್ಪ​ಸಂಖ್ಯಾ​ತರ ಶೇಕಡ 50ರಷ್ಟು ಮತ​ಗ​ಳನ್ನು ಜೆಡಿ​ಎಸ್‌ ಪಡೆ​ಯಿತು. 

ನಿಮ್ಮ ಮತ ಪಡೆದು ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ದಲ್ಲಿ ಮುಖ್ಯ​ಮಂತ್ರಿ​ಯಾ​ದ ಕುಮಾ​ರ​ಸ್ವಾ​ಮಿ ಅಲ್ಪ​ಸಂಖ್ಯಾ​ತರ ಶ್ರೇಯೋ​ಭಿ​ವೃ​ದ್ಧಿಗೆ ಮೀಸ​ಲಿ​ಡು​ತ್ತಿದ್ದ 3150 ಕೋಟಿ ರು.ಗ​ಳಿದ್ದ ಅನುದಾನ​ವನ್ನು 1200 ಕೋಟಿ ರು.ಗೆ ಸೀಮಿ​ತ​ಗೊ​ಳಿ​ಸಿ​ದ​ರು ಎಂದು ಆರೋ​ಪಿ​ಸಿ​ದ​ರು. ಮೊದಲು 400 ಕೋಟಿ ರು.ಗ​ಳಿದ್ದ ಅನು​ದಾ​ನ​ವನ್ನು ಸಿದ್ದ​ರಾ​ಮಯ್ಯ ನೇತೃ​ತ್ವದ ಕಾಂಗ್ರೆಸ್‌ ಸರ್ಕಾರ 3150 ಕೋಟಿ ರು.ಗ​ಳಿಗೆ ಹೆಚ್ಚಳ ಮಾಡಿ​ದ್ದರು. ಮೈತ್ರಿ ಸರ್ಕಾ​ರ​ದ​ಲ್ಲಿ ಕುಮಾ​ರ​ಸ್ವಾಮಿ ಅವ​ರನ್ನು ಭೇಟಿ​ಯಾಗಿ ಅನು​ದಾನ ಕಡಿಮೆಗೊಳಿ​ಸ​ದಂತೆ ಮನವಿ ಮಾಡಿ​ದರು ಸ್ಪಂದಿ​ಸದೆ 1950 ಕೋಟಿ ರು.ಅ​ನು​ದಾನ ಕಡಿ​ತ​ಗೊ​ಳಿ​ಸಿ​ದರು.

Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ

ಆನಂತರ ಅಧಿ​ಕಾ​ರಕ್ಕೆ ಬಂದ ಬಿಜೆಪಿ ಸರ್ಕಾರ 1200 ಕೋಟಿ ರು.ಗ​ಳಿದ್ದ ಅನು​ದಾ​ನ​ವನ್ನು 600 ಕೋಟಿಗೆ ತಂದು ನಿಲ್ಲಿ​ಸಿದೆ. ಕುಮಾ​ರ​ಸ್ವಾ​ಮಿ​ರ​ವರು ಅನು​ದಾನ ಕಡಿಮೆ ಮಾಡದೆ ಹೋಗಿ​ದ್ದರೆ ಬಿಜೆಪಿ ಸರ್ಕಾರ ಅನು​ದಾನ ಕಡಿ​ತ​ಗೊ​ಳಿ​ಸುವ ಧೈರ್ಯ ಮಾಡು​ತ್ತಿ​ರ​ಲಿಲ್ಲ ಎಂದು ದೂರಿ​ದ​ರು. ಕರ್ನಾ​ಟ​ಕದ ಇತಿ​ಹಾ​ಸ​ದಲ್ಲಿ ಬೇಕಾದಷ್ಟುಮುಖ್ಯ​ಮಂತ್ರಿ​ಗಳು ಬಂದು ಹೋದರು. ಆದರೆ, ಸಿದ್ದ​ರಾ​ಮಯ್ಯ ಅವ​ರಂತೆ ಅಲ್ಪ​ಸಂಖ್ಯಾ​ತರು ಸೇರಿ​ದಂತೆ ಎಲ್ಲ ವರ್ಗದ ಜನರ ಬಗ್ಗೆ ಆಲೋ​ಚನೆ ಮಾಡುವ ಮುಖ್ಯ​ಮಂತ್ರಿಯನ್ನು ನೋಡಿ​ರ​ಲಿಲ್ಲ ಎಂದು ಜಮೀರ್‌ ಗುಣ​ಗಾನ ಮಾಡಿ​ದರು.

ಮತ ಹಾಕದೆ ಮೋಸ ಮಾಡ​ಬೇಡಿ: ಕಳೆದ 60 ವರ್ಷ​ಗಳ ಇತಿ​ಹಾ​ಸ​ದಲ್ಲಿ ಮಾಗಡಿ ಕ್ಷೇತ್ರ​ವನ್ನು ಯಾರಾ​ದರು ಅಭಿ​ವೃದ್ಧಿ ಮಾಡಿ​ದ್ದರೆ ಅದು ಬಾಲ​ಕೃಷ್ಣ ಮತ್ತು ಅವರ ಕುಟುಂಬ​ದ​ವರ ಕೊಡುಗೆಯಾ​ಗಿದೆ. ಹೀಗಿ​ದ್ದರು ಬಾಲ​ಕೃಷ್ಣರವರ ಸೋಲು ನನಗೂ ಆಶ್ಚರ್ಯ ತಂದಿದೆ. ಕಳೆದ ಬಾರಿ ತೆಗೆ​ದು​ಕೊಂಡ ತಪ್ಪು ನಿರ್ಧಾರ ಜನರ ಅರಿ​ವಿಗೂ ಬಂದಿದೆ ಎಂದು ಶಾಸಕ ಜಮೀರ್‌ ಅಹಮದ್‌ ಹೇಳಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ಕ್ಷೇತ್ರದ ಅಭಿ​ವೃದ್ಧಿ ಬಾಲ​ಕೃಷ್ಣ ಅವ​ರಿಂದ ಮಾತ್ರ ಸಾಧ್ಯ​ವೆಂದು ಜನರೇ ತೀರ್ಮಾನಿಸಿದ್ದಾರೆ. ನಾವು ಒಂದೇ ತಾಯಿ ಹೊಟ್ಟೆ​ಯಲ್ಲಿ ಹುಟ್ಟದೆ ಇರ​ಬ​ಹುದು. ಆದರೂ ನಾವಿ​ಬ್ಬರು ಸಹೋ​ದ​ರ​ರಂತೆ ಇದ್ದೇವೆ. ಬಾಲ​ಕೃಷ್ಣ ಅಲ್ಪ​ಸಂಖ್ಯಾ​ತರು ಮಾತ್ರ​ವಲ್ಲ ಪ್ರತಿ ಸಮು​ದಾ​ಯ​ದ​ವ​ರನ್ನು ಜೊತೆ​ಯಲ್ಲಿ ಕೊಂಡೊ​ಯ್ಯುವ ನಾಯಕ. ನಿಮಗಾಗಿ ಶಾದಿ ಮಹಲ್‌ ನಿರ್ಮಿ​ಸಿ​ಕೊ​ಟ್ಟ​ವ​ರಿಗೆ ಮತ ನೀಡ​ದಿ​ದ್ದರೆ ಮೋಸ ಮಾಡಿ​ದಂತಾ​ಗು​ತ್ತದೆ. ನೀವು ಅವ​ರಿಗೆ ನೀಡುವ ಮತ ಸಿದ್ದ​ರಾ​ಮಯ್ಯ ಮತ್ತು ನನಗೆ ಶಕ್ತಿ ತುಂಬು​ತ್ತದೆ ಎಂದ​ರು.

Latest Videos
Follow Us:
Download App:
  • android
  • ios