ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಶಾಸಕ ಬಿ.ವೈ.ವಿಜಯೇಂದ್ರ
ಶಾಸಕರು ತಾಲೂಕಿನ ಜನತೆಯ ಪ್ರತಿನಿಧಿಯಾಗಿದ್ದು, ಶಾಸಕರ ಕಚೇರಿ ಕೇವಲ ಶಾಸಕರಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಎಲ್ಲ ಚುನಾಯಿತ ಪ್ರತಿನಿಧಿಗಳು ಕಚೇರಿ ಸದುಪಯೋಗದ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ಕೇಂದ್ರವಾಗಬೇಕು ಎಂದು ಕ್ಷೇತ್ರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರ (ಆ.19): ಶಾಸಕರು ತಾಲೂಕಿನ ಜನತೆಯ ಪ್ರತಿನಿಧಿಯಾಗಿದ್ದು, ಶಾಸಕರ ಕಚೇರಿ ಕೇವಲ ಶಾಸಕರಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಎಲ್ಲ ಚುನಾಯಿತ ಪ್ರತಿನಿಧಿಗಳು ಕಚೇರಿ ಸದುಪಯೋಗದ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ಕೇಂದ್ರವಾಗಬೇಕು ಎಂದು ಕ್ಷೇತ್ರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣದ ಆಡಳಿತ ಸೌಧದಲ್ಲಿ ಶುಕ್ರವಾರ ಶಾಸಕರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕಾರಿಪುರದಿಂದ ಶಾಸಕನಾಗಿ ಸೇವೆ ಸಲ್ಲಿಸುವ ಬಗ್ಗೆ ನಿರೀಕ್ಷಿಸಿರಲಿಲ್ಲ. ಪೂಜ್ಯ ತಂದೆ ಆಶೀರ್ವಾದ ಸಂಘಟನೆ ಶಕ್ತಿ, ಸಂಸದರ ಅಭಿವೃದ್ಧಿ ಕಾರ್ಯ ಹಿರಿಯರ ತಪಸ್ಸು ಶ್ರಮದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.
ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಹೊಸ ಸರ್ಕಾರ ಬಂದಿದೆ. ಮೊದಲ ಬಾರಿ ಆಯ್ಕೆಯಾಗಿದ್ದು, ಜನರಲ್ಲಿ ಹಲವು ನಿರೀಕ್ಷೆ ಇರುತ್ತದೆ. ಚುನಾವಣೆಯಲ್ಲಿ ಪಕ್ಷ ನೀಡಿದ ಭರವಸೆ ಪರಿಣಾಮದಿಂದ ಹೊಸ ಸರ್ಕಾರ ಬಂದು 3 ತಿಂಗಳು ಕಳೆದರೂ ಸಚಿವರು ಆಡಳಿತ, ವಿರೋಧ ಪಕ್ಷದ ಶಾಸಕರು ಅನುದಾನ ದೊರೆಯದೇ ಅಖಾಡಕ್ಕೆ ಇಳಿದಿಲ್ಲ. ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದರು. ತಾಲೂಕಿನ ಜನತೆ ಸೌಭಾಗ್ಯದಿಂದ ತಂದೆ ಶಾಸಕ, ಸಿಎಂ ಆದಾಗ ರಾಘಣ್ಣ ಸಂಸದನಾಗಿ ಅವರ ಕಾಲದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿದೆ. ಶಾಸಕನಾಗಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಜನರ ಮುಂದೆ ಪುನಃ ಹೋಗಬೇಕಾಗುತ್ತದೆ.
ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ: ದೂರು ನೀಡಿದರೂ ಸ್ವೀಕರಿಸದ ಅರಣ್ಯಾಧಿಕಾರಿಗಳು
ತಾ.ಪಂ., ಜಿ.ಪಂ. ಲೋಕಸಭೆ ಚುನಾವಣೆ ಬರುತ್ತದೆ. ಯಡಿಯೂರಪ್ಪ ಅವರು ಶಾಸಕರಾಗಿ ಸಿಎಂ ಆಗಿ ರಾಘಣ್ಣ ಲೋಕಸಭಾ ಸದಸ್ಯನಾಗಿ ಮಾಡಿದ ಕೆಲಸ ಬೇರೆಯವರಿಂದ ಸಾಧ್ಯ ಇದೆಯಾ? ಅಭಿವೃದ್ಧಿಗೆ ಜಾತಿ ಇಲ್ಲ ಎಲ್ಲ ಸಮಾಜ, ವರ್ಗಕ್ಕೆ ನ್ಯಾಯ ದೊರಕಿಸುವ ಕೆಲಸವಾಗಿದೆ. ಮುಂದಿನ ಚುನಾವಣೆ ಸವಾಲಾಗಿ ಸ್ವೀಕರಿಸಿ, ಪಕ್ಷದ ಮುಖಂಡರು ಹೆಚ್ಚು ಹೆಚ್ಚು ಪ್ರವಾಸ ಮಾಡಿ ಜನರ ಜತೆ ಒಡನಾಟ ಪ್ರೀತಿ- ವಿಶ್ವಾಸದಿಂದ ಜನರಿಗೆ ಹತ್ತಿರವಾಗಬೇಕು. ಹೊಸ ಹೊಸ ಮತದಾರರನ್ನು ಪ್ರೀತಿಯಿಂದ ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಆ ಮೂಲಕ ಮುಂದಿನ ಚುನಾವಣೆ ದೊಡ್ಡ ಅಂತರದಲ್ಲಿ ಯಶಸ್ಸು ಕಾಣಲು ಶ್ರಮ ಹಾಕಬೇಕಾಗಿದೆ. ಶಾಸಕನಾಗಿ ತಾಲೂಕಿನ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಎಲ್ಲರಿಗೂ ಅಭಿನಂದನೆ ತಿಳಿಸಿದರು. ಸಂಸದ ರಾಘವೇಂದ್ರ ಮಾತನಾಡಿ, ಯೋಗಾ ಯೋಗದಿಂದ ಸಂಘಟನೆ ಶಕ್ತಿ, ವಿಜಯೇಂದ್ರ ಶಾಸಕರಾಗಿ ಹೊಸ ತಂತ್ರಜ್ಞಾನ ರೀತಿ ಹೊಸ ಹೊಸ ಚಿಂತನೆ ಮಾಡುತ್ತಿದ್ದಾರೆ. ಗ್ರಾಮೀಣ ಬಸ್ ಸಂಚಾರಕ್ಕೆ ಮಕ್ಕಳು ಬೇಡಿಕೆ ನೀಡಿದ್ದಾರೆ. ಕಚೇರಿ ಮೂಲಕ ಉತ್ತಮ ಸೇವೆ ನೀಡುವ ಹಂಬಲ ಹೊಂದಿದ್ದಾರೆ ಎಂದು ತಿಳಿಸಿದರು.
ದೇಶಕ್ಕೆ ಸವಾಲಿನ ಸಂದರ್ಭ ಮೋದೀಜಿ ದೇಶದ ನೇತೃತ್ವ ವಹಿಸಿಕೊಂಡಿದ್ದಾರೆ. ಎಲ್ಲ ವಿರೋಧಿಶಕ್ತಿಗಳು ಒಂದಾಗಿದ್ದಾರೆ. ಇಂತಹ ಸಂದರ್ಭ ಪುನಃ ಸವಾಲು ಎದುರಿಸಬೇಕಾಗಿದೆ. ಶೀಘ್ರದಲ್ಲಿಯೇ ಛತ್ತೀಸ್‌ಗಡ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ನಡೆಯಲಿದೆ. ಮೋದೀಜಿ ಹಗಲು -ರಾತ್ರಿ ಶ್ರಮ ಹಾಕುತ್ತಿದ್ದಾರೆ. ಅವರಿಗೆ ಕುಟುಂಬ ಇಲ್ಲ ದೇಶವೇ ತಾಯಿಯಾಗಿದೆ. ತಾಯಿಯ ಗೌರವ ಉಳಿಸಲು ಹೆಚ್ಚು ಶ್ರಮ ಹಾಕುತ್ತಿದ್ದಾರೆ ಎಂದು ತಿಳಿಸಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಅಧ್ಯಕ್ಷ ವೀರೇಂದ್ರ, ಮುಖಂಡ ಚನ್ನವೀರಪ್ಪ, ಹಾಲಪ್ಪ, ಮೋಹನ್, ಗಾಯತ್ರಿದೇವಿ ಪುರಸಭಾ ಸದಸ್ಯರು ಮುಖಂಡರು ಹಾಜರಿದ್ದರು.
Shivamogga: ಸರ್ಕಾರಿ ಶಾಲೆ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ
ಲೋಕಸಭಾ ಚುನಾವಣೆ ಸವಾಲಿನ ಕಾರ್ಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕಾರ್ಯತಂತ್ರ ರೂಪಿಸಲು ವಿಫಲರಾಗಿದ್ದೇವೆ. ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಎಲ್ಲರನ್ನು ತಲುಪಬೇಕಾಗಿದೆ. ವಿರೋಧಿಗಳು ಆಧಾರ್ ನಂಬರ್ ಲಿಂಕ್ ಆಗದಿರುವುದರಿಂದ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಸಂಘಟನೆ ಹೆಚ್ಚು ಸೀರಿಯಸ್ ಆಗಿ ಪರಿಗಣಿಸಿದೆ
- ಬಿ.ವೈ.ರಾಘವೇಂದ್ರ, ಸಂಸದ