Asianet Suvarna News Asianet Suvarna News

ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ: ದೂರು ನೀಡಿದರೂ ಸ್ವೀಕರಿಸದ ಅರಣ್ಯಾಧಿಕಾರಿಗಳು

ಅದೊಂದು ಸೋಲಿಗ ಕುಟುಂಬ. ಕಾಡಂಚಿನ ಗ್ರಾಮದಲ್ಲಿ ವಾಸ ಮಾಡ್ತಿದ್ದಾರೆ. ಬಯಲು ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದೆ. ಇದೀಗ ಆ ವ್ಯಕ್ತಿಯ ಬೆನ್ನು ಮೂಳೆ ಮುರಿದಿದೆ. 

wild elephant attack on young man at chamarajanagar gvd
Author
First Published Aug 19, 2023, 4:59 PM IST

ವರದಿ: ಪುಟ್ಟರಾಜು.ಆರ್. ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.19): ಅದೊಂದು ಸೋಲಿಗ ಕುಟುಂಬ. ಕಾಡಂಚಿನ ಗ್ರಾಮದಲ್ಲಿ ವಾಸ ಮಾಡ್ತಿದ್ದಾರೆ. ಬಯಲು ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದೆ. ಇದೀಗ ಆ ವ್ಯಕ್ತಿಯ ಬೆನ್ನು ಮೂಳೆ ಮುರಿದಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಬೆನ್ನು ಮೂಳೆ ಮುರಿದಿರೋದು ಇಡೀ ಕುಟುಂಬದ ಬೆನ್ನು ಮೂಳೆ ಮುರಿದಂತಾಗಿದೆ. ಸಾವು ಬದುಕಿನ ನಡುವೆ ಜೇನು ಕುರುಬ ಹೋರಾಟ ಮಾಡ್ತಿದ್ದಾನೆ. ಕೂಗಳತೆ ದೂರದಲ್ಲಿ ಅರಣ್ಯಾಧಿಕಾರಿಗಳ ಕಚೇರಿ ಇದ್ದರೂ ಕೂಡ ಆ ವ್ಯಕ್ತಿಯ ಸಂಕಷ್ಟಕ್ಕೆ ಧಾವಿಸ್ತಿಲ್ಲ, ದೂರು ಕೂಡ ಸ್ವೀಕರಿಸ್ತಿಲ್ಲ ಅಂತಾ ಅಳಲು ತೋಡಿಕೊಳ್ತಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಕಾಡಾನೆ ದಾಳಿಯಿಂದ ಬೆನ್ನು ಮೂಳೆ ಮುರಿದು ಹೋಗಿ ಮಂಚದ ಮೇಲೆ ಮಲಗಿದ್ದಲೇ ಮಲಗಿರುವ ವ್ಯಕ್ತಿ. ಶೌಚಾಲಯ ಇಲ್ಲದ ಹಾಡಿ. ಕೂಗಳತೆ ದೂರದಲ್ಲಿ ಅರಣ್ಯಾಧಿಕಾರಿಗಳ ಕಚೇರಿ, ಇಷ್ಟೆಲ್ಲಾ ಕಂಡು ಬಂದಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಗ್ರಾಮದ ಮೇಲಕಾಮನಹಳ್ಳಿಯಲ್ಲಿ. ನಾಗೇಶ ಎಂಬ ಆದಿವಾಸಿ ಜೇನುಕುರುಬ ವ್ಯಕ್ತಿ ರಾತ್ರಿ ವೇಳೆ  ಬಯಲು ಬಹಿರ್ದೆಸೆಗೆಂದು ಮನೆಯ ಹಿಂಬಾಗ ಹೋಗಿದ್ದ ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಆದಿವಾಸಿ ವ್ಯಕ್ತಿಯನ್ನು ಗಂಭೀರವಾಗಿ ಗಾಯಗೊಳಿಸಿದೆ. ಆನೆ ದಾಳಿಯಿಂದ ಬೆನ್ನು ಮೂಳೆ ಪುಡಿಯಾಗಿದೆ.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಾಗಿಲು ಮುಚ್ಚಿದ ಬರೋಬ್ಬರಿ 13 ಸರ್ಕಾರಿ ಶಾಲೆಗಳು!

ಆನೆ ದಾಳಿಯಿಂದ ಭಯಬೀತನಾದ ನಾಗೇಶ್ ಕೂಗಿಕೊಳ್ಳಲು ಆಗದೆ  ಪ್ರಜ್ಞೆ ತಪ್ಪಿಬಿದ್ದಿದ್ದ. ಈ ಆನೆ ದಾಳಿಯಿಂದ   ನಾಗೇಶ್ ಎಂಬ ಜೇನುಕುರುಬ ಬದುಕಿರೋದೆ ಪವಾಡ ಸದೃಶ ರೀತಿಯಲ್ಲಿ ಅಂತಾ ಹೇಳಬಹುದು. ಇನ್ನೂ ಬೆಳಗ್ಗೆ ಎದ್ದ ವೇಳೆ ನಾಗೇಶನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದ್ರೆ ನಾಗೇಶ ಎಲ್ಲೂ ಕಾಣದ ವೇಳೆ ಹುಡುಕಾಡಿದ್ದಾರೆ. ಕಡೆಗೆ ಮನೆಯ ಹಿಂಭಾಗದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಸಂತೈಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಮರಾಜನಗರ, ಮೈಸೂರು, ಬೆಂಗಳೂರಿನಲ್ಲೂ ಕೂಡ ಚಿಕಿತ್ಸೆ ಕೊಡಿಸಲಾಗಿದೆ. 

ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.ಬೆನ್ನು ಮೂಳೆ ಹಾಗೂ ನರ ಕೂಡ ಡ್ಯಾಮೇಜ್ ಆಗಿದೆ.ಇದರಿಂದ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಬೆಡ್ ರೆಸ್ಟ್ ನಲ್ಲಿ ಇರುವಂತಾಗಿದೆ. ಕಾಡಾನೆ ದಾಳಿಗೆ ಒಳಗಾದರೂ ಕನಿಷ್ಠ ಸೌಜನ್ಯಕ್ಕೆ ಆ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳು ಮುಂದಾಗಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನೂ ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿದರು ಕೂಡ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿದೆ. ಕಾಡಾನೆ ದಾಳಿಯಿಂದ ನಾಗೇಶ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ ಎಂದು  ವಲಯ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ರೆ ಸ್ವೀಕಾರ ಮಾಡ್ತಿಲ್ಲ. 

ಬಂಡೀಪುರದಲ್ಲಿ ಕಟ್ಟಡ ಕಾಮಗಾರಿ: ಅರಣ್ಯ ಇಲಾಖೆಯಿಂದ ನಟ ಗಣೇಶ್‌ಗೆ ನೋಟೀಸ್

ನಮ್ಮ ಮನೆಯಿಂದ ಕೂಗಳತೆ ದೂರದಲ್ಲಿ ಅರಣ್ಯ ಕಚೇರಿ ಇದ್ದರೂ ಕೂಡ ಯಾರೂ ವಿಚಾರಿಸಿಲ್ಲ. ಮಾಧ್ಯಮದವರ ಕ್ಯಾಮೆರಾ ಕಂಡು ಇವಾಗ ಬಂದಿದ್ದಾರೆ. ಕಾಡಿನ ಕೆಲಸ ಮಾಡಿಕೊಡಲೂ ನಮ್ಮನ್ನು ಬಳಸಿಕೊಳ್ತಾರೆ. ಇದೀಗ ನಮಗೆ ಯಾವುದೇ ನೆರವು ಕೊಟ್ಟಿಲ್ಲ. ಕೂಡಲೇ ಅರಣ್ಯಾಧಿಕಾರಿಗಳು ದೂರು ದಾಖಲಿಸಿಕೊಂಡು 5 ಲಕ್ಷ ಪರಿಹಾರ ಕೊಡಲಿ ಎಂದು ಮನವಿ ಮಾಡ್ತಿದ್ದಾರೆ. ಒಟ್ಟಿನಲ್ಲಿ ಇವರು ಕಾಡಿನ ಮಕ್ಕಳು.ಕಾಡಿನಲ್ಲಿ ಹುಟ್ಟಿ,ಕಾಡನ್ನೇ ನಂಬಿ ಜೀವನ ನಡೆಸ್ತಿದ್ದಾರೆ.ಇಂತಹವರ ಬಗ್ಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ.ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ವ್ಯಕ್ತಿಯ ಬೆನ್ನು ಮೂಳೆ ಮುರಿದಿದ್ದು,ಆ ಕುಟುಂಬ ಹಾಗೂ ವ್ಯಕ್ತಿಯ ನೆರವಿಗೆ ಅರಣ್ಯಾಧಿಕಾರಿಗಳು ಮುಂದಾಗಲಿ ಅನ್ನೋದೆ ನಮ್ಮ ಆಶಯ.

Follow Us:
Download App:
  • android
  • ios