Asianet Suvarna News Asianet Suvarna News

ಬಿಜೆಪಿಗರು ಆಪರೇಷನ್‌ ಮಾಡಿಯೇ ಅಧಿಕಾರ ಮಾಡಿದವರು: ಸಚಿವ ಆರ್‌.ಬಿ.ತಿಮ್ಮಾಪೂರ

ಬಿಜೆಪಿಗರು ಎಂದೂ ಜನರಿಂದ ಆಯ್ಕೆಯಾಗಿ ಸರ್ಕಾರವನ್ನು ರಚನೆ ಮಾಡಿಲ್ಲ. ಬದಲಾಗಿ ಅವರು ಆಪರೇಷನ್ ಮೇಲೆಯೇ ಅಧಿಕಾರ ಮಾಡಿದವರು ಎಂದು ಸಚಿವ ಆರ್‌.ಬಿ.ತಿಮ್ಮಾಪೂರ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. 

Minister RB Timmapur Slams On BJP Over Operation Kamala gvd
Author
First Published Nov 2, 2023, 6:03 AM IST

ಬಾಗಲಕೋಟೆ (ನ.02): ಬಿಜೆಪಿಗರು ಎಂದೂ ಜನರಿಂದ ಆಯ್ಕೆಯಾಗಿ ಸರ್ಕಾರವನ್ನು ರಚನೆ ಮಾಡಿಲ್ಲ. ಬದಲಾಗಿ ಅವರು ಆಪರೇಷನ್ ಮೇಲೆಯೇ ಅಧಿಕಾರ ಮಾಡಿದವರು ಎಂದು ಸಚಿವ ಆರ್‌.ಬಿ.ತಿಮ್ಮಾಪೂರ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಜನಾಭಿಪ್ರಾಯದಲ್ಲಿ ಅವಕಾಶವಿಲ್ಲ. ಕುತಂತ್ರ ಮಾಡಿ ಅಧಿಕಾರಕ್ಕೆ ಬಂದಿರೋದೆ ಹೆಚ್ಚು ಎಂದ ಅವರು, ಇ.ಡಿ ಬಿಟ್ಟು ಆಟ ಆಡುತ್ತಾರೆ. ಮಹಾರಾಷ್ಟ್ರದಲ್ಲಿ ನೋಡಿ ಈ ತರನಾದ ಆಟ ಆಡ್ತಾರೆ, ಆಡುತ್ತಿದ್ದಾರೆ. ನಾವು ಬಹಳ ಕ್ಲೀನ್ ಆಗಿದ್ದೇವೆ. ಸರ್ಕಾರ 5 ವರ್ಷ ಸಂಪೂರ್ಣ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಬೀಳುತ್ತದೆ ಎಂದು ಬಿಜೆಪಿಗರು ಭ್ರಮೆಯಲ್ಲಿದ್ದಾರೆ. ಆದರೆ ನಮಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ಜನತೆ ನೀಡಿದ್ದಾರೆ. ಬಿಜೆಪಿಯನ್ನು ಜನ ತಿರಸ್ಕಾರ ಮಾಡಿದರೂ ಕುತಂತ್ರದಿಂದ ಸರ್ಕಾರ ರಚನೆ ಮಾಡಿ ಮೂರು ಬಾರಿ ರಾಜ್ಯವನ್ನು ಆಳಿದ್ದಾರೆ ಎಂದು ಲೇವಡಿ ಮಾಡಿದರು. ಸರ್ಕಾರ ಬಹಳ ದಿನ ಹೋಗಲ್ಲ ಎಂಬ ಯತ್ನಾಳ ಹೇಳಿಕೆಗೆ ಖಾರವಾಗಿ ಉತ್ತರಿಸಿದ ಸಚಿವರು, ಪಾಪ ಯತ್ನಾಳ ಅವರು ಹೇಳಿದ್ದು ಒಂದಾದ್ರು ನಿಜ ಆಗಿದ್ದಾವಾ? ಎಂದು ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿ ಅವರು ಒಂದು ವಾರದಲ್ಲಿ ಸಿಡಿ ಸ್ಫೋಟ ಮಾಡುವ ಹೇಳಿಕೆಗೆ ಉತ್ತರಿಸಿದ ಸಚಿವರು, ಪಾಪ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋದಾ ಅಲ್ಲಿ ಏನು ಮಾಡಲಿಲ್ಲ. 

ಇಂದಿರಾ ಗಾಂಧಿಯಂತಥ ಮತ್ತೊಬ್ಬ ಪ್ರಧಾನಿ ಬಂದೇ ಇಲ್ಲ: ಸಿಎಂ ಸಿದ್ದರಾಮಯ್ಯ

ಅವನಿಗೆ ನೀಡಿದ್ದ ನೀರಾವರಿ ಖಾತೆ ಕೊಟ್ಟು ಕಿತ್ತುಕೊಂಡರು. ರಮೇಶ್ ಪಾಪ ಭ್ರಮ ನೀರಸದಲ್ಲಿದ್ದಾರೆ. ಏನಾದರೂ ಮಾತನಾಡಿ ಸುದ್ದಿಯಾಗಿರಬೇಕು ಅಂತಾನೆ. ಇರಲಿ ಪಾಪ, ಅವನು ನನ್ನ ಆತ್ಮೀಯ ಗೆಳೆಯನಿದ್ದಾನೆ. ಡಿಸಿಎಂ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ವಿಚಾರಕ್ಕೂ ಅವರುಅವರ ವಯಕ್ತಿಕ ಇವೆ ಬಿಡಿ ಎಂದರು. ಸಿಎಂ ಸಿದ್ದು ಅವರೇ 5 ವರ್ಷ ಪೂರ್ಣ ಸಿಎಂ ಎಂದು ಸಿದ್ದು ಬೆಂಬಲಿಗ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. 

ಅದಕ್ಕೇನು ತೊಂದರೆ ಇದೆ? ಗೊಂದಲ ಯಾಕೆ ಆಗುತ್ತೆ? ನಾನೊಬ್ಬನೇ ಹೇಳಿದರೆ ಅದು ಶಾಸಕಾಂಗ ಪಕ್ಷದ ಅಭಿಪ್ರಾಯ ಆಗುತ್ತಾ?  ಸಿಎಂ ನೇಮಕ ಶಾಸಕಾಂಗ ಪಕ್ಷದಲ್ಲಿ ತಿರ್ಮಾನ ಆಗುತ್ತದೆ. ಹೊರಗಡೆ ಯಾರು ಹೇಳಿದರೂ ಆಗಲ್ಲ. ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿಯಿಂದ ಹಾಗೆ ಕೆಲವರು ಹೇಳಿದ್ದಾರೆ. ಅಭಿಮಾನದಿಂದ ಅವರು ಹೇಳಿದ್ದಾರೆ. ಅದಕ್ಕೇಕೆ ನೀವು ತಲೆ ಕೆಡಿಸಿಕೊಳ್ಳುತ್ತೀರಿ? ಆ ಪ್ರೀತಿ ಶಾಸಕಾಂಗದ ನಿರ್ಣಯವಾಗೋದಿಲ್ಲ ಎಂದು ತಿಳಿಸಿದರು. 

ಮರಾಠಿಗರ ಪುಂಡಾಟಿಕೆ, ಮೊಂಡಾಟಿಕೆಯನ್ನು ನಾನು ಕನ್ನಡಿಗನಾಗಿ ಸಹಿಸಲ್ಲ. ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಅದು ಅವರಿಗೆ ಕರಾಳ, ನಮಗಲ್ಲ. ನಾವು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ ಎಂದರು. ಮೇಲಿಂದ ಮೇಲೆ ಕರಾಳ ದಿನಾಚರಣೆ ಆಗ್ತಿದೆ ಇದಕ್ಕೆ ಅವರಿಗೆ ತಕ್ಕ ಶಾಸ್ತಿ ಆಗಬೇಕು. ನಮ್ಮ ನಾಡಿನಲ್ಲಿದ್ದುಕೊಂಡು, ನಮ್ಮ ನಾಡನುಡಿ ವಿಷಯದಲ್ಲಿ ಮರಾಠಿಗರ ಪುಂಡಾಟಿಕೆ, ಮೊಂಡಾಟಿಕೆಯನ್ನು ನಾನು ಕನ್ನಡಿಗನಾಗಿ ಸಹಿಸಲ್ಲ ಎಂದು ಎಚ್ಚರಿಸಿದರು.

ಬರ ಪರಿಹಾರಕ್ಕೆ ಹಣದ ತೊಂದರೆ ಇಲ್ಲ: ಬರ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ ಎಂಬ ಮಾತನ್ನು ಅಲ್ಲಗಳೆದ ಸಚಿವರು, ಬರ ಪರಿಹಾರಕ್ಕೆ ಹಣದ ತೊಂದರೆ ಇಲ್ಲ, ಡಿಸಿಯವರು ಎಲ್ಲ ರೂಪುರೇಷೆ ಮಾಡುತ್ತಿದ್ದಾರೆ. ಕೇಂದ್ರದ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು. ದೇಶದ ಪ್ರಧಾನಿಗಳು ಈ ದೇಶಕ್ಕೆ ಪ್ರಧಾನಿ ಆಗಬೇಕೇ ವಿನಃ ಬಿಜೆಪಿ ಪ್ರಧಾನಿ ಆಗಬಾರದು ಎಂದು ದೇಶದ ಪ್ರಧಾನಿಗೆ ವಿನಂತಿ ಮಾಡುತ್ತೇನೆ. ಅವ್ರು(ಪ್ರಧಾನಿ) ಪ್ರತಿ ಬಾರಿ ತಾರತಮ್ಯ ನೀತಿ ಅನುಸರಿಸುತ್ತಾರೆ. ಪ್ರಧಾನಿ ಪಕ್ಷ ಭೇದ ಮಾಡುತ್ತಾರೆ. ಈ ದೇಶ ಅತ್ಯುನ್ನತ ಸ್ಥಾನದಲ್ಲಿದ್ದವರು. 

ನಾನೂ ರೈತನ ಮಗ, ಕಷ್ಟ ಏನೆಂದು ನನಗೂ ಗೊತ್ತಿದೆ: ಸಿದ್ದರಾಮಯ್ಯ

ಎಲ್ಲರನ್ನೂ ಪ್ರೀತಿಸುವಂತಹ, ಗೌರವಿಸುವ ತಾಯಿ ಹೃದಯ ಪ್ರಧಾನಿಗೆ ಇರಬೇಕು ಎಂದರು. ಕಾಂಗ್ರೆಸ್ಸಿನಲ್ಲಿ ಒಂದೊಂದು ಗುಂಪು ಡಿನ್ನರ್ ಮಾಡ್ತಿದೆ ಎಂಬ ವಿಚಾರಕ್ಕೆ ಮಾತನಾಡಿದ ಸಚಿವರು, ಸ್ನೇಹಿತನಾಗಿ ನಿಮ್ಮನ್ನೂ ನಾನು ಕರಿತೀನಿ, ನೀವು ಬಂದ್ರೆ ನೀವು ನಮ್ಮ ಪಕ್ಷದವರು ಆಗುತ್ತೀರಾ? ಯಾರೇ ಯಾರ ಜೊತೆಗೆ ಹೋದ್ರು ಅದು ಗುಂಪಾಗಲ್ಲ ಅದೊಂದು ಸ್ನೇಹ ಅಷ್ಟೇ ಎಂದು ತಿಳಿಸಿದರು.

Follow Us:
Download App:
  • android
  • ios