600 ಕೋಟಿಗಿಂತಲು ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಪ್ರತಿದಿನ 700 ಬಸ್ ಒದಗಿಸಿದ್ದೇವೆ, 7800 ಹೊಸ ಬಸ್ ನೀಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಶಿಗ್ಗಾಂವಿ (ಡಿ.13): 600 ಕೋಟಿಗಿಂತಲು ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಪ್ರತಿದಿನ 700 ಬಸ್ ಒದಗಿಸಿದ್ದೇವೆ, 7800 ಹೊಸ ಬಸ್ ನೀಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶಿಗ್ಗಾಂವಿ ನೂತನ ಬಸ್ ಘಟಕ ಹಾಗೂ ಬಸ್ ಚಾಲನಾ, ಮೆಕ್ಯಾನಿಕ್ ತರಬೇತಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ 10 ಚಾಲನಾ ತರಬೇತಿ ಕೇಂದ್ರ ಇದ್ದು, ತಾಲೂಕಿನ ತಡಸ ಹಾಗೂ ಹುಲಗೂರ್ ಎರಡು ಬಸ್ ನಿಲ್ದಾಣ ಅಭಿವೃದ್ಧಿಗೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಏಪ್ರಿಲ್ ತಿಂಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸಾರಿಗೆ ಸಿಬ್ಬಂದಿಗೆ ಸದ್ಯದಲ್ಲಿ ನೇಮಕಾತಿ ಮಾಡಿ ಸಿಬ್ಬಂದಿಯ ವ್ಯವಸ್ಥೆಯನ್ನು ಮಾಡಲಾಗುವದು, ಅಲ್ಲದೆ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಸಾಕಷ್ಟು ಶ್ರಮದಿಂದ ಅಭಿವೃದ್ಧಿಯನ್ನು ಹಾಗೂ ಲಾಭದಲ್ಲಿ ಬರಲು ಸಾಧ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಶಾಸಕರು ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಮಾತನಾಡಿ ಹೊಸ ತರಬೇತಿ ಕೇಂದ್ರ, ಬಸ್ ನಿಲ್ದಾಣ, ಹಳ್ಳಿಗಳಿಗೆ ಬಸ್ ಒದಗಿಸುವ ಕಾರ್ಯ ನಡೆದಿದೆ, ಸಾರಿಗೆ ಇಲಾಖೆಯ ನೌಕರರು ಬಹಳಷ್ಟು ಕಷ್ಟ್ಟವನ್ನು ಅನುಭವಿಸುತ್ತಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಅಮೆರಿಕಾ ದೇಶದಲ್ಲಿ ಅನುಷ್ಠಾನ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ 1000 ಹುದ್ದೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ, 21 ಸಾವಿರ ಹುದ್ದೆಯನ್ನು ಕಾನೂನು ಪ್ರಕಾರ ನೇಮಕ ಮಾಡಲಾಗಿದೆ, ಪಂಚ ಗ್ಯಾರಂಟಿ ಕೊಟ್ಟು ರಾಜ್ಯ , ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಇದೇ ಶಕ್ತಿ ಯೋಜನೆ ಮಾದರಿ ಅಮೆರಿಕಾ ದೇಶದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಗ್ಗಾಂವಿ- ಸವಣೂರ ಶಾಸಕ ಯಾಸೀರ್ ಅಹ್ಮದಖಾನ ಪಠಾಣ ವಹಿಸಿ ಮಾತನಾಡಿ, ತಾಲೂಕಿನ ತಡಸ ಹಾಗೂ ಹುಲಗೂರ ಪಟ್ಟಣ ಪಂಚಾಯಿತಿ ಅಗಲಿರುವ ಉದ್ದೇಶದಿಂದ ಇಲ್ಲಿಯ ಬಸ್ ನಿಲ್ದಾಣದ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು ಎಂದರು, ಕಬ್ಬಿನ ಬೆಲೆ, ಗೋವಿನ ಜೋಳ, ಬೆಲೆ ಏರಿಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗಡಿ ಪ್ರಾದಿಕಾರದ ಅಧ್ಯಕ್ಷ ಸೋಮಣ್ಣಾ ಬೇವಿನಮರದ, ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹಂಪಣ್ಣವರ, ರಾಜ್ಯ ಗ್ಯಾರಂಟಿ ಯೋಜನೆಯ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಸರಕಾರದ ಆರ್ಥಿಕ ಕಾರ್ಯದರ್ಶಿಗಳಾದ ಡಾ, ವಿಶಾಲ್ ಆರ್., ಜಿಲ್ಲಾಧಿಕಾರಿ ವಿಜಯಮಹಾತೇಶ ದಾನಮ್ಮನವರ, ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ., ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಎಂ.ಎ. ಪಠಾಣ ಇದ್ದರು. ಸಾರಿಗೆ ಅಧಿಕಾರಿ ಟಿ.ಎಲ್. ಶ್ರೀನಾಥ ಸ್ವಾಗತಿಸಿದರು. ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿ ಜಿ. ವಿಜಯಕುಮಾರ ನಿರೂಪಿಸಿದರು.