Asianet Suvarna News Asianet Suvarna News

ಎಚ್ಡಿಕೆ ಬಿಜೆಪಿ ಸೇರಿರುವುದು ನೋಡಿದ್ರೆ ಅಧಿಕಾರ ದಾಹ ಎಷ್ಟಿದೆ ಎಂದು ತಿಳಿಯುತ್ತೆ: ಸಚಿವ ಪ್ರಿಯಾಂಕ್ ಖರ್ಗೆ

ನಿಮ್ಮ ಕುಟುಂಬದ ಪೆನ್‌ಡ್ರೈವ್ ಹಂಚಿದ್ದು ಕಾಂಗ್ರೆಸ್‌ವರಲ್ಲ, ಬಿಜೆಪಿಯವರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೂ ಅಂತಹವರ ಜೊತೆ ಸೇರಿ ಪಾದಯಾತ್ರೆ ನಡೆಸುತ್ತಿದ್ದೀರಿ. ನಿಮಗೆ ಅಷ್ಟೊಂದು ಅಧಿಕಾರ ದಾಹ ಇದೆಯಾ ಎಂದು ಪ್ರಶ್ನಿಸಿದರು. ನಾವು ನಾಡು, ನುಡಿ, ಜಲಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ. ಆದರೆ, ಬಿಜೆಪಿ-ಜೆಡಿಎಸ್‌ನವರ ಪಾದಯಾತ್ರೆ ಏಕೆಂದು ಯಾರಿಗೂ ತಿಳಿಯುತ್ತಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ 
 

minister priyank kharge slams union minister hd kumaraswamy grg
Author
First Published Aug 7, 2024, 4:28 AM IST | Last Updated Aug 7, 2024, 9:06 AM IST

ಮಂಡ್ಯ(ಆ.07): ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿರುವವರ ಜೊತೆ ಸೇರಿ ಪಾದಯಾತ್ರೆ ಮಾಡುತ್ತಿರುವುದನ್ನು ನೋಡಿದರೆ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರದಾಹ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. 

ನಗರದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿ, ನಿಮ್ಮ ಕುಟುಂಬದ ಪೆನ್‌ಡ್ರೈವ್ ಹಂಚಿದ್ದು ಕಾಂಗ್ರೆಸ್‌ವರಲ್ಲ, ಬಿಜೆಪಿಯವರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೂ ಅಂತಹವರ ಜೊತೆ ಸೇರಿ ಪಾದಯಾತ್ರೆ ನಡೆಸುತ್ತಿದ್ದೀರಿ. ನಿಮಗೆ ಅಷ್ಟೊಂದು ಅಧಿಕಾರ ದಾಹ ಇದೆಯಾ ಎಂದು ಪ್ರಶ್ನಿಸಿದರು. ನಾವು ನಾಡು, ನುಡಿ, ಜಲಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ. ಆದರೆ, ಬಿಜೆಪಿ-ಜೆಡಿಎಸ್‌ನವರ ಪಾದಯಾತ್ರೆ ಏಕೆಂದು ಯಾರಿಗೂ ತಿಳಿಯುತ್ತಿಲ್ಲ ಎಂದರು.

ಜೆಡಿಎಸ್ ಜೋಕರ್ ಇದ್ದಂತೆ; ರಮ್ಮಿ, ಸೆಟ್‌ಗೂ ಸೇರಿಸಹುದು: ರಾಜಣ್ಣ

ಕಾಂಗ್ರೆಸ್‌ನವರಿಗೆ ಹೋರಾಟ ಹೊಸದೇನಲ್ಲ. ನಮ್ಮ ರಾಜ್ಯದ ಸಂಪತ್ತು ಉಳಿಸಲಿಕ್ಕೆ ನಾವು ರಾಜ್ಯದಲ್ಲಿ ಹೋರಾಟ ಮಾಡಿದ್ದೇವೆ. ನಾಡು, ನುಡಿ, ಜಲಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ. ಆದರೆ, ಬಿಜೆಪಿ-ಜೆಡಿಎಸ್‌ನವರ ಪಾದಯಾತ್ರೆ ಏಕೆಂದು ಯಾರಿಗೂ ತಿಳಿಯುತ್ತಿಲ್ಲ. ಸದನದಲ್ಲಿ ಅವಕಾಶ ಕೊಟ್ಟರೂ ಚರ್ಚೆ ಮಾಡಲಿಲ್ಲ. ಈಗ ಮೈಸೂರು ಚಲೋ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.

ಪಾದಯಾತ್ರೆ ವಿಚಾದಲ್ಲಿ ಬಿಜೆಪಿಯವರಲ್ಲೇ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಆ ಪಕ್ಷದವರೆಲ್ಲರೂ ಸೇರಿ ಪಾದಯಾತ್ರೆ ಮಾಡುತ್ತಿಲ್ಲ. ವಿಜಯೇಂದ್ರ ಮತ್ತು ಗ್ಯಾಂಗ್ ಮಾತ್ರ ಭಾಗವಹಿಸಿದೆ. ಬಿಜೆಪಿಯ ಹಿರಿಯರು ಯಾರೂ ಪಾಲ್ಗೊಂಡಿಲ್ಲ. ಜೆಡಿಎಸ್‌ನವರಿಗೂ ಇಷ್ಟವಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಕಾಲಿಡಿದು ಒಪ್ಪಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

Latest Videos
Follow Us:
Download App:
  • android
  • ios